
ಸಾರ್ವಜನಿಕರಿಗೆ ತುರ್ತು ಔಷಧಿಗಳು ಲಭ್ಯವಾಗಲಿ-ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಬೀದರ.20.ಫೆಬ್ರುವರಿ.25:-ಆಸ್ಪತ್ರೆಗೆ ಬರುವ ಸಾಮಾನ್ಯ ಹಾಗೂ ಬಡ ರೋಗಿಗಳಿಗೆ ಅಗತ್ಯ ತುರ್ತು ಔಷಧಿಗಳು ಲಭ್ಯವಾಗುವಂತೆ ಆರೋಗ್ಯಾಧಿಕಾರಿಗಳು ನಿಗಾ ವಹಿಸುವಂತೆ ಜಿಲ್ಲಾದಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು. ಅವರು ಇಂದು ಬೀದ್ರಿ ಕಾಲೋನಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಹೊರ ರೋಗಿಗಳೊಂದಿಗೆ ಚರ್ಚಿಸಿದರು. ಹಾವು ಕಡಿತಕ್ಕೆ, ನಾಯಿ ಕಡಿತಕ್ಕೆ ಸೇರಿದಂತೆ ತುರ್ತು ಔಷಧಿಗಳನ್ನು ಲಭ್ಯವಾಗುವಂತೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿವಶಂಕರ ಟಿ. ಅವರಿಗೆ ಸೂಚಿಸಿದರು.