
ಕಲಬುರಗಿ ಹೈಕೋರ್ಟ್ನಲ್ಲಿ ಬಾಂಬ್ ಬ್ಲಾಸ್ಟ್ನ ಅಣುಕು ಪ್ರದರ್ಶನ ಕ್ಲಿಷ್ಟಕರ, ತುರ್ತು ಪರಿಸ್ಥಿತಿಯಲ್ಲಿ ಒಗ್ಗಟ್ಟು ಪ್ರದರ್ಶಿಸಲು ಕರೆ
ಕಲಬುರಗಿ,16ಮೇ.25 “ಅಪರೇಷನ್ ಅಭ್ಯಾಸ” ನಾಗರಿಕ ರಕ್ಷಣಾ ಕಾರ್ಯಾಚರಣೆ ಅಂಗವಾಗಿ ಕಲಬುರಗಿ ಹೈಕೋರ್ಟ್ ಅವರಣದಲ್ಲಿ ಶುಕ್ರವಾರ ಸಂಜೆ ಬಾಂಬ್ ಬ್ಲಾಸ್ಟ್ ಸೃಷ್ಠಿಸಿ ತದನಂತರ ರಕ್ಷಣಾ ಕಾರ್ಯಾಚರಣೆಯ ಸನ್ನಿವೇಶದ ಕುರಿತ ಅಣುಕು ಪ್ರದರ್ಶನ ಕೋರ್ಟ್ ಅವರಣದಲ್ಲಿ ನಡೆಯಿತು.ಹೈಕೋರ್ಟ್ ನಲ್ಲಿ ಡ್ರೋನ್ ಮೂಲಕ ಬಾಂಬ್ ಹಾಕಿರುವುದನ್ನು ಸೈರನ್ ಅಪಾಯದ ಸಂದೇಶ ಖಚಿತಪಡಿಸುತ್ತಿದ್ದಂತೆ ಗಾಬರಿಗೊಂಡ ನ್ಯಾಯಾಧೀಶರು, ವಕೀಲರು, ಸಿಬ್ಬಂದಿಗಳು, ಕಕ್ಷಿದಾರರು ಕಚೇರಿಯಿಂದ ಓಡಿ ಬರುವ ದೃಶ್ಯ, ಸುದ್ದಿ ಅರಿತು ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಕೋರ್ಟ್ ಅವರಣ ತಪಾಸಣೆಗೊಳಪಡಿಸಿ ಪತ್ತೆಯಾದ