March 13, 2025 10:20 am

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

ವಿಶೇಷ

ಮಸಾಲೆ ಪದಾರ್ಥಗಳಲ್ಲಿ ಕಲಬೆರಕೆ: ಅಧ್ಯಯನ-ಸಮೀಕ್ಷೆ-ಪರೀಕ್ಷೆಗಳಿಂದ ಬಹಿರಂಗವಾಗಿದೆ ಆತಂಕಕಾರಿ ಮಾಹಿತಿ

ಭಾರತೀಯ ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಬೆಳಗಿನ ತಿಂಡಿಯಿಂದ ಹಿಡಿದು ರಾತ್ರಿಯ ಊಟದ ವರೆಗೂ ಹತ್ತಾರು ಮಸಾಲೆಗಳು ಆಹಾರದಲ್ಲಿ ಸೇರಿರುತ್ತವೆ. ಅರಿಶಿಣ, ಲವಂಗ, ಏಲಕ್ಕಿಯಂತಹ ಪದಾರ್ಥಗಳು ಆರೋಗ್ಯಕರ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಇವುಗಳ ಬಳಕೆ ಹೆಚ್ಚು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಪದಾರ್ಥವೂ ಕಳಬೆರಕೆಯಾಗುತ್ತಿದೆ. ಸೊಪ್ಪು ತರಕಾರಿಯನ್ನು ಕೊಳಚೆ ನೀರಿನಲ್ಲಿ ಬೆಳೆಸಲಾಗುತ್ತಿದೆ. ಮಸಾಲೆ ಪದಾರ್ಥಗಳಲ್ಲಿ ಮಾರಕ ರಾಸಾಯನಿಕ ವಸ್ತುಗಳನ್ನು ಮಿಶ್ರಣ ಮಾಡಲಾಗುತ್ತಿದೆ. ಈ ಬಗ್ಗೆ ವರದಿ ಇಲ್ಲಿದೆ. ಅಡುಗೆ ಮನೆಯಲ್ಲಿ ಬಳಸುವ ಸಾಂಬಾರು ಮಸಾಲೆ