ಗಡಿ ಗ್ರಾಮ ಅಭಿವೃದ್ಧಿಗೆ ಅನುದಾನ ಮಂಜೂರು ನಸಲವಾಯಿ ಗ್ರಾಮಕ್ಕೆ 18 ಲಕ್ಷ ಮಂಜೂರು
ಯಾದಗಿರಿ:ಫೆ:22: ನಸಲವಾಯಿ ಗ್ರಾಮಸ್ಥರಿಂದ ಚರಂಡಿ ಅವ್ಯವಸ್ಥೆ ಕುರಿತು ದೂರುಗಳು ಬಂದ ಕಾರಣ ಸ್ವತಃ ಸಿಇಓ ಅವರು ನಸಲವಾಯಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗುರುಮಠಕಲ್ ತಾಲೂಕಿನ ಅನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಸಾಲವಾಯಿ ಗ್ರಾಮಕ್ಕೆ ಈಚೆಗೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿ.ಪಂ ಯೋಜನಾ ನಿರ್ದೇಶಕರು ಹಾಗೂ ಇಓ ಸೇರಿದಂತೆ ಅಧಿಕಾರಿಗಳ ತಂಡ ಅನಪುರ ಮತ್ತು ನಸಲವಾಯಿ ಗ್ರಾಮಕ್ಕೆ ಆಗಮಿಸಿ, ಗ್ರಾಮದ ತುಂಬ ಸಂಚರಿಸಿ ಚರಂಡಿಗಳ ಅವ್ಯವಸ್ಥೆ ಸರಿಪಡಿಸಲು ಮತ್ತು ಚರಂಡಿಗಳ ನಿರ್ಮಾಣಕ್ಕೆ 18 ಲಕ್ಷ ಮೊತ್ತದ