August 4, 2025 4:42 am

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

ಯಾದಗಿರ

ಏಳನೇ ಸುತ್ತಿನ ಜಾನುವಾರು ಕಾಲುಬಾಯಿ ರೋಗ ಲಸಿಕಾ ಅಭಿಯಾನ ಯಶಸ್ವಿಯಾಗಿ ಹಮ್ಮಿಕೊಳ್ಳಲು ಸೂಚನೆ

ಯಾದಗಿರಿ: 17.ಏ:25: ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ,ಯಾದಗಿರಿ ಇವರ ಸಹಯೋಗದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 7ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಇದೇ ಏಪ್ರಿಲ್ 21ರಿಂದ ಜೂನ್ 4 ರವರೆಗೆ ಯಶಸ್ವಿಯಾಗಿ ಹಮ್ಮಿಕೊಳ್ಳುವಂತೆ ಅಪರ್ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು 7ನೇ ಸುತ್ತಿನ ಜಾನುವಾರು ಕಾಲುಬಾಯಿ ಲಸಿಕಾ ಅಭಿಯಾನ ಕುರಿತು ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಅವರು

ಯಾದಗಿರಿ – ಶಹಾಪುರ ರಾಜ್ಯ ಹೆದ್ದಾರಿಯ ವಡಗೇರಾ ತಾಲೂಕಿನ ಗುಲಸರಂ ಕ್ರಾಸ್‌ನಲ್ಲಿ ಗುರುವಾರ ಸಂಜೆ ಬೀಸಿದ ಧೂಳು ಮಿಶ್ರಿತ ಭಾರೀ ಬಿರುಗಾಳಿ ಕಂಡು ಬಂದ ದೃಶ್ಯ.

ಯಾದಗಿರಿ – ಶಹಾಪುರ ರಾಜ್ಯ ಹೆದ್ದಾರಿಯ ವಡಗೇರಾ ತಾಲೂಕಿನ ಗುಲಸರಂ ಕ್ರಾಸ್‌ನಲ್ಲಿ ಗುರುವಾರ ಸಂಜೆ ಬೀಸಿದ ಧೂಳು ಮಿಶ್ರಿತ ಭಾರೀ ಬಿರುಗಾಳಿ ಕಂಡು ಬಂದ ದೃಶ್ಯ.ಸ್ವಲ್ಪ ಗಾಳಿ ಮಳೆ ಬೀಸಿದರೆ ಇಡೀ ರಾತ್ರಿ ವಿದ್ಯುತ್ ಕೈ ಕೋಡುವುದು ಗ್ಯಾರಂಟಿ……!ಭಾರೀ ಬಿರುಗಾಳಿಗೆ ಕೈ ಕೊಟ್ಟ ಕರೆಂಟ್ ; ಎರಡು ದಿನ ಕತ್ತಲಲ್ಲಿ ಜನತೆ ಜಾಗರಣೆಯಾದಗಿರಿ : ಜಿಲ್ಲೆಯಲ್ಲಿ ಬುಧವಾರ ಮತ್ತು ಗುರುವಾರ ಸಂಜೆ ಬೀಸಿದ ಧೂಳು ಮಿಶ್ರಿತ ಭಾರೀ ಬಿರುಗಾಳಿ, ಗುಡುಗು ಮಿಂಚು ಮಳೆ ಸುರಿಯಿತು. ಇದರಿಂದ ಜಿಲ್ಲೆಯ

ಯಾದಗಿರಿ ತಾಲೂಕಿನ ಸುಕ್ಷೇತ್ರ ಇಡ್ಲೂರಿನಲ್ಲಿ ಸಾವಿರಾರು ಭಕ್ತರ ಜಯಘೋಷಗಳ ಮಧ್ಯೆ ಶ್ರೀ ಶಂಕರಲಿಂಗೇಶ್ವರ ರಥೋತ್ಸವವು ವಿಜ್ರುಂಭಣೆಯಿಂದ ಜರುಗಿತು.

ಮುಗಿಲು ಮುಟ್ಟಿದ ಭಕ್ತರ ಜಯಘೋಷ | ಸಾಂಬಸದಾಶಿವನ ದರ್ಶನ ಪಡೆದ ಭಕ್ತರು ಅದ್ದೂರಿಯಾಗಿ ಜರುಗಿದ ಇಡ್ಲೂರು ಶಂಕರಲಿಂಗೇಶ್ವರ ರಥೋತ್ಸವ ಯಾದಗಿರಿ : ಜಿಲ್ಲೆಯ ಪುರಾತನ ಶಿವ ದೇವಸ್ಥಾನ ಹಾಗೂ ತೆಲಂಗಾಣ ಕರ್ನಾಟಕದ ಗಡಿ ಭಾಗದಲ್ಲಿರುವ ಸುಪ್ರಸಿದ್ಧ ಈಡ್ಲೂರಿನ ಶಂಕರಲಿಂಗೇಶ್ವರನ ಜಾತ್ರೆಯು ಬುಧವಾರ ಸಾಯಂಕಾಲ  ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹು ವಿಜೃಂಭಣೆಯಿಂದ ಜರುಗಿತು. ಜಿಲ್ಲೆಯ ಹಾಗೂ ರಾಜ್ಯದ ಇತರ ಭಾಗಗಳಿಂದ ಅಲ್ಲದೇ ತೆಲಂಗಾಣ ಇತರ ರಾಜ್ಯಗಳಿಂದ ಆಗಮಿಸಿದ ಅಪಾರ ಭಕ್ತಸ್ತೋಮ ರಥೋತ್ಸವಕ್ಕೆ ಸಾಕ್ಷಿಯಾದರು. ಜಾತ್ರೆಯ ನಿಮಿತ್ಯ ಬೆಳಿಗ್ಗೆ ದೇವರಿಗೆ

ತಾಪಮಾನ 45 ಡಿಗ್ರಿ ಸೆಂಟಿಗ್ರೇಡ್ ವರೆಗೂ ಮುಟ್ಟುವ ಸಂಭವವಿರುತ್ತದೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಸಲಹೆ -ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ

ಯಾದಗಿರಿ : 14 ಮಾರ್ಚ್ 25, ರಾಷ್ಟಿçÃಯ ಹಾಗೂ ರಾಜ್ಯ ಹವಾಮಾನ ಇಲಾಖೆ ಇವರ ಸೂಚನೆಯಂತೆ ಜಿಲ್ಲೆಯಲ್ಲಿ ಮಾರ್ಚ್ ಮತ್ತು ಏಪ್ರಿಲ್, ಮೇ ತಿಂಗಳಿನಲ್ಲಿ ತಾಪಮಾನ 45 ಡಿಗ್ರಿ ಸೆಂಟಿಗ್ರೇಡ್ ವರೆಗೂ ಮುಟ್ಟುವ ಸಂಭವವಿರುತ್ತದೆ ಎಂದು ಮುನ್ನೆಚ್ಚರಿಕೆ ನೀಡಿರುತ್ತಾರೆ. ಅದರಂತೆ ಜಿಲ್ಲೆಯಲ್ಲಿ ಮಾರ್ಚ್ ಮತ್ತು ಏಪ್ರಿಲ್, ಮೇ ತಿಂಗಳಿನಲ್ಲಿ ಗರಿಷ್ಠ ತಾಪಮಾನ ದಾಖಲಾಗುವ ಮತ್ತು ಬಿಸಿಗಾಳಿ ಬೀಸುವ ಸಂಭವವಿರುತ್ತದೆ, ಗರಿಷ್ಠ ತಾಪಮಾನ ಮತ್ತು ಬಿಸಿಗಾಳಿಯಿಂದ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಸಾರ್ವಜನಿಕರು ಈ ಕೆಳಗಿನಂತೆ ಕ್ರಮವಹಿಸಬೇಕು ಎಂದು ಯಾದಗಿರಿ

ಮಾರ್ಚ್ 8 ರಂದು ವಿಶ್ವ ಮಹಿಳಾ ದಿನಾಚರಣೆ ನೈಮಲ್ಯ ಮತ್ತು ಶುಚಿತ್ವದ ವಿಷಯಧಾರಿತ ವಿವಿಧ ಜನ ಜಾಗೃತಿ ಕಾರ್ಯಕ್ರಮ

ಯಾದಗಿರಿ : 05 ಮಾರ್ಚ್ 25, :  ಜಿಲ್ಲೆಯ ಗ್ರಾಮ ಪಂಚಾಯತಗಳಲ್ಲಿ 2025ರ ಮಾರ್ಚ್ 8 ರಂದು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ನೀರು, ನೈಮಲ್ಯ ಮತ್ತು ಶುಚಿತ್ವದ ವಿಷಯಧಾರಿತ ವಿವಿಧ ಜನ ಜಾಗೃತಿ ಚಟುವಟಿಕೆ, ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಲವೀಶ್ ಒರಡಿಯಾ ಅವರು ತಿಳಿಸಿದ್ದಾರೆ.      ಮಾರ್ಚ್ 8ರ ಶನಿವಾರ ರಂದು ಅಂತರರಾಷ್ಟಿçÃಯ ಮಹಿಳಾ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ, ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯಡಿ ಗ್ರಾಮೀಣ

ಗ್ರಾಮ ಪಂಚಾಯತ ಕೇಂದ್ರಗಳಲ್ಲಿ ಗ್ರಾಮ ಒನ್ ಕೇಂದ್ರಕ್ಕೆ ಅರ್ಜಿ ಆಹ್ವಾನ

ಯಾದಗಿರಿ : 05 ಮಾರ್ಚ್ 25,: ಗ್ರಾಮ ಒನ್ ಕೇಂದ್ರಗಳು ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯ ವರೆಗೆ ಕಾರ್ಯನಿರ್ವಹಿಸಲಿವೆ ಈ ಯೋಜನೆಯನ್ನು ಈಗಾಗಲೇ ಅನುಷ್ಠಾನಗೊಳಿಸಿದ್ದು, ಸದ್ಯ ಸ್ಥಾಪನೆಗಾಗಿ ಬಾಕಿ ಇರುವ ಗ್ರಾಮ ಒನ್ ಕೇಂದ್ರಗಳಿಗೆ ಕಲಬುರಗಿ ವಿಭಾಗದ ಪಾಲುದಾರಿಕೆ ಸಂಸ್ಥೆವತಿಯಿAದ 2025ರ ಮಾರ್ಚ್ 1 ರಿಂದ 15ರ ವರೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಅಪರ ಜಿಲ್ಲಾಧಿಕಾರಿ ಶ್ರೀ ಶರಣಬಸಪ್ಪ ಕೋಟೆಪ್ಪಗೊಳ ಅವರು ತಿಳಿಸಿದ್ದಾರೆ.      ಯಾದಗಿರಿ ತಾಲ್ಲೂಕಿನ ಗ್ರಾಮ ಪಂಚಾಯತಗಳಲ್ಲಿ ಬಾಡಿಯಾಳ, ಕಿಲ್ಲನಕೇರಾ,

ಅಬ್ಬೆತುಮಕೂರು ಸಿದ್ದಿ ಪುರುಷ ವಿಶ್ವಾರಾಧ್ಯರ ರಥೋತ್ಸವ ಇಂದು

ಯಾದಗಿರಿ: ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ಧಿ ಪುರುಷ ಶ್ರೀ ವಿಶ್ವಾರಾಧ್ಯರ ರಥೋತ್ಸವ ಇಂದು  ಸಂಜೆ 6:30ಕ್ಕೆ ಸಡಗರದಿಂದ ನಡೆಯಲಿದೆ ಎಂದು ಶ್ರೀಮಠದ ವಕ್ತಾರ ಡಾ.ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ. ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮಿಗಳು ತೇರಿಗೆ ವಿಶೇಷ ಪೂಜೆಯನ್ನು ನೆರವೇರಿಸಿ,ಉತ್ಸವ ಮೂರ್ತಿಯೊಂದಿಗೆ ಶ್ರೀಗಳು ರಥವನ್ನು ಏರಿದ  ಕೂಡಲೇ ಭಕ್ತಾದಿಗಳು ಸಡಗರದಿಂದ ರಥವನ್ನು ಎಳೆದು ಸಂಭ್ರಮ ಪಡುವರು. ರಾತ್ರಿ 8:00 ಗಂಟೆಗೆ ಮಾನವ ಧರ್ಮ ಸಮಾವೇಶ ನಡೆಯುವುದು. ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಸಮಾವೇಶದ ಪಾವನ ಸಾನಿಧ್ಯವನ್ನು

ಜಿಲ್ಲಾ ಸಮಾದೇಷ್ಟರು ಗೃಹ ರಕ್ಷಕ ದಳ : ನಿರುಪಯುಕ್ತ ಸಮಾಗ್ರಿಗಳ ಬಹಿರಂಗ ಹರಾಜು ಆಹ್ವಾನ

ಯಾದಗಿರಿ : 03 ಮಾರ್ಚ್ 25 : ಯಾದಗಿರಿ ನಗರದ ಜಿಲ್ಲಾ ಸಮಾದೇಷ್ಟರು ಗೃಹ ರಕ್ಷಕ ದಳ ಕಛೇರಿ ವತಿಯಿಂದ ನಿರುಪಯುಕ್ತ ಸಾಮಾಗ್ರಿಗಳನ್ನು ಬಹಿರಂಗ ಹರಾಜು ಪ್ರಕ್ರಿಯೆಯನ್ನು 2025ರ ಮಾರ್ಚ್ 7 ರಂದು ಬೆಳಿಗ್ಗೆ 10 ಗಂಟೆಗೆ ನಿಗದಿಪಡಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಸಮಾದೇಷ್ಟರು ಗೃಹ ರಕ್ಷಕ ದಳ ಯಾದಗಿರಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಧರಣೇಶ ಎಸ್.ಪಿ ಅವರು ತಿಳಿಸಿದ್ದಾರೆ.     ನಿರುಪಯುಕ್ತ ಸಾಮಗ್ರಿಗಳನ್ನು ಗೃಹರಕ್ಷಕ ದಳ ಕಛೇರಿಯಲ್ಲಿ, ಕಛೇರಿ ಸಮಯದಲ್ಲಿ ವೀಕ್ಷಿಸಬಹುದಾಗಿರುತ್ತದೆ. ಈ

ನೇರ ಸಂದರ್ಶನಕ್ಕೆ ಆಹ್ವಾನ

ಯಾದಗಿರಿ : ಮಾರ್ಚ್ 01,  : ಯಾದಗಿರಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ವತಿಯಿಂದ ಇದೇ 2025ರ ಮಾರ್ಚ್ 4ರ ಮಂಗಳವಾರ ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ ಎಂದು ಉದ್ಯೋಗಾಧಿಕಾರಿ ಬಸವರಾಜ ಅವರು ತಿಳಿಸಿದ್ದಾರೆ.      ಮುತ್ತೂಟ್ ಫೈನಾನ್ಸ್, (ಅ) ಸೇಲ್ಸ್ ಟ್ರೆöÊನಿ 10 ಹುದ್ದೆಗಳು ಖಾಲಿ ಇದ್ದು, ಹುದ್ದೆಗೆ ಅರ್ಹತೆ ಯಾವುದೇ ಪದವಿ, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದು.  18 ರಿಂದ 28 ವರ್ಷ

ಶುಲ್ಕ ಮರುಪಾವತಿ ಸೌಲಭ್ಯಕ್ಕೆ ಅರ್ಜಿ ಅವಧಿ ವಿಸ್ತರಣೆ

ಯಾದಗಿರಿ : ಮಾರ್ಚ್ 01,  : 2024-25ನೇ ಸಾಲಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ, ಅರೆ ಅಲೆಮಾರಿ ವಿದ್ಯಾಥಿಗಳಿಂದ ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಪದವಿ, ವೃತ್ತಿಪರ ಸ್ನಾತಕೋತ್ತರ ಪದವಿಗಳ ಕೋರ್ಸ್ಗಳಿಗೆ “ಶುಲ್ಕ ಮರುಪಾವತಿ” ಸೌಲಭ್ಯಕ್ಕೆ ಆನ್‌ಲೈನ್ ಮೂಲಕ ಅರ್ಜಿ ಅವಧಿ ವಿಸ್ತರಿಸಿದೆ ಎಂದು ಯಾದಗಿರಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸದಾಶಿವ.ಎಂ.ನಾರಾಯಣಕರ್ ಅವರು ತಿಳಿಸಿದ್ದಾರೆ.      ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ, ಅರೆ ಅಲೆಮಾರಿ ವಿದ್ಯಾಥಿಗಳಿಂದ ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಪದವಿ,