
ಷೇರುಪೇಟೆಯಲ್ಲಿ ಭಾರೀ ಕರೆಕ್ಷನ್ : ‘ಮಾರುಕಟ್ಟೆ ಇಲ್ಲಿಂದ ಎಲ್ಲಿಗೆ ಹೋಗುತ್ತದೆ ಎಂದು ನನಗೆ ತಿಳಿದಿಲ್ಲ’ ; ಜೆರೋಧಾ ಸಂಸ್ಥಾಪಕ ನಿತಿನ್ ಕಾಮತ್!
Zerodha Founder Nithin Kamath : ದೇಶೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕರೆಕ್ಷನ್ ಶುರುವಾಗಿದ್ದು, ಬಿಎಸ್‌ಇ ಸೆನ್ಸೆಕ್ಸ್ ಫೆಬ್ರವರಿ ತಿಂಗಳಿನಲ್ಲಿ ಬರೋಬ್ಬರಿ 4000 ಪಾಯಿಂಟ್ಸ್ ನಷ್ಟಗೊಂಡಿದೆ. ಷೇರುಗಳ ಮೌಲ್ಯದಲ್ಲಿ ಭಾರೀ ನಷ್ಟದ ಪರಿಣಾಮ ಬಿಎಸ್‌ಇ ಮಾರ್ಕೆಟ್ ಕ್ಯಾಪ್ 40 ಲಕ್ಷ ಕೋಟಿ ರೂಪಾಯಿ ಕರಗಿದೆ. ಹೀಗಿರುವಾಗ ಜೆರೋಧಾ ಸಂಸ್ಥಾಪಕ ನಿತಿನ್ ಕಾಮತ್ ಮಾರುಕಟ್ಟೆಯ ಈಗಿನ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದಾರೆ. ಭಾರತದ ಷೇರು ಮಾರುಕಟ್ಟೆ ದಿನೇ ದಿನೇ ಹೆಚ್ಚು ಕುಸಿಯತೊಡಗಿದ್ದು, ಫೆಬ್ರವರಿಯಲ್ಲಂತೂ ದೊಡ್ಡ ಕುಸಿತ ಕಂಡಿದೆ. ಸೆನ್ಸೆಕ್ಸ್ 4,000