August 4, 2025 1:43 pm

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

ಕಲಬುರಗಿ

ತಂಬಾಕು ಸೇವನೆಯನ್ನು ನಿಯಂತ್ರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ

ಕಲಬುರಗಿ: 04.ಮಾ.25 : ತಂಬಾಕು ಸೇವನೆಯನ್ನು ನಿಯಂತ್ರಿಸಿ     ವ್ಯಕ್ತಿಯು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಜತೆಗೆ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ನಿರ್ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಹೇಳಿದರು. ಮಂಗಳವಾರದAದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಸಭೆಯಲ್ಲಿ  ತಂಬಾಕು ಸೇವನೆಯನ್ನು ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಉಗುಳಿದರೆ ಅಲ್ಲಿನ ಸ್ವಚ್ಚತೆಯನ್ನು ಅಲ್ಲಿನ ಜನರು ಕಾಪಾಡುವರಾರು. ಪ್ರತಿಯೊಬ್ಬ ಸಾರ್ವಜನಿಕರು ಸ್ವಚ್ಚತೆಗೆ ಆದ್ಯತೆಯನ್ನು ನೀಡಿ ತಮ್ಮ ಆರೋಗ್ಯವನು ಕಾಪಾಡಿಕೊಳ್ಳಬೇಕು

ಮಾರ್ಚ್ 15 ರವರೆಗೆ ಪುಸ್ತಕ ಖರೀದಿಗಾಗಿ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ವಿಸ್ತರಣೆ

ಕಲಬುರಗಿ,04.ಮಾ.25.-ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮ್ಯಾಕ್ರೋ ಅನುದಾನದಲ್ಲಿ ಕಲಬುರಗಿ ಜಿಲ್ಲೆಯ ಸ್ಥಳೀಯ ಲೇಖಕ, ಲೇಖಕ/ಪ್ರಕಾಶಕರು ಪ್ರಕಟಿಸಿರುವ ಪುಸ್ತಕಗಳ ಖರೀದಿಗಾಗಿ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು 2025ರ ಮಾರ್ಚ್ 15ರ ಸಂಜೆ 5.30 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಈ ಹಿಂದೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು 02-03-2025 ರಂದು ನಿಗದಿಪಡಿಸಲಾಗಿತ್ತು. ಕಲಬುರಗಿ ಜಿಲ್ಲೆಯ ಸ್ಥಳೀಯ ಲೇಖಕರು ಪುಸ್ತಕ ಸಲ್ಲಿಸುವ ಕೊನೆಯ ದಿನಾಂಕವನ್ನು ಮುಂದೂಡುವಂತೆ ಕಲಬುರಗಿ ಕ.ಕ.ಪ್ರ.ಅ.ಮಂಡಳಿ ಕಾರ್ಯದರ್ಶಿಗಳಿಗೆ

ಕನ್ನಡದ ಹೆಸರಾಂತ ನಟರಾದ ಅಭಿನಯ ಚಕ್ರವರ್ತಿ ಬಾದ್ ಷಾ ಕಿಚ್ಚ ಸುದೀಪ್ ಅವರಿಗೆ ಅವರ ಅಭಿಮಾನಿಯಾದ ಕಿಚ್ಚ ಗಿರೀಶ್ ಅವರು ಶ್ರೀ ಕ್ಷೇತ್ರ ಗಾಣಗಾಪುರದ ಶ್ರೀ ಗುರು ದತ್ತಾತ್ರೇಯರ ನಿರ್ಗುಣ ಪಾದುಕೆಯ ಫೋಟೋ ಮತ್ತು ಪ್ರಸಾದವನ್ನು ಫೋಟೋವನ್ನು ನೀಡಿ ಅಭಿನಂದಿಸಿದರು.

ದ್ವಿತೀಯ ಪಿ.ಯು.ಸಿ ಪರೀಕ್ಷಾ ಕೇಂದ್ರಕ್ಕೆ ಡಿ.ಸಿ.ಭೇಟಿ

ಕಲಬುರಗಿ,04ಮಾ.25.  ಪ್ರಸಕ್ತ 2024-25ನೇ ಶೈಕ್ಷಣಿಕ ವ³Àðದ ದ್ವಿತೀಯ ಪಿ.ಯು.ಸಿ. ಪರೀಕ್ಷೆ-1 ಆರಂಭಗೊAಡಿದ್ದು, ಸೋಮವಾರ ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಪ್ರದೇಶದ ಎಂ.ಪಿ.ಎಚ್.ಎಸ್ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಕೇಂದ್ರದ ಪ್ರತಿ ಕೋಣೆಗೆ ಭೇಟಿ ನೀಡಿದ ಅವರು, ಯಾವುದೇ ರೀತಿಯಲ್ಲಿ ನಕಲಿಗೆ ಇಲ್ಲಿ ಅವಕಾಶ ನೀಡಬಾರದು. ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕು, ಕಡ್ಡಾಯಾಗಿ ಪ್ರಿಸ್ಕಿಂಗ್ ಮಾಡಬೇಕೆಂದು ಕೊಠಡಿ ಮೇಲ್ವಿಚಾರಕರಿಗೆ ಸೂಚಿಸಿದರು. ನಂತರ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಜಿಲ್ಲೆಯ

ಮಾರ್ಚ್ 8 ರಂದು ಜೇವರ್ಗಿಯಲ್ಲಿ ಕಲ್ಯಾಣ ಪಥಕ್ಕೆ ಸಿ.ಎಂ. ಚಾಲನೆ: ಐತಿಹಾಸಿಕ ಕಾರ್ಯಕ್ರಮ ಯಶಸ್ಸಿಗೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ-ಬಿ.ಫೌಜಿಯಾ ತರನ್ನುಮ್

ಕಲಬುರಗಿ,04.ಮಾ.25.ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಘೋ³Àಣೆ ಮಾಡಿದಂತೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ 38 ವಿಧಾನಸಭಾ ಕ್ಷೇತ್ರದಲ್ಲಿ ಕೆ.ಕೆ.ಆರ್.ಡಿ.ಬಿ ಅನುದಾನದ ನೆರವಿನೊಂದಿಗೆ ಒಟ್ಟು 1,150 ಕೋಟಿ ರೂ. ಮೊತ್ತದಲ್ಲಿ ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ಮಾಣ ಮಾಡುವ “ಕಲ್ಯಾಣ ಪಥ” ಯೋಜನೆಗೆ ಮಾರ್ಚ್ 8 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೇವರ್ಗಿಯಲ್ಲಿ ಚಾಲನೆ ನೀಡಲಿದ್ದು, ಐತಿಹಾಸಿಕ ಕಾರ್ಯಕ್ರಮ ಯಶಸ್ಸಿಗೆ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು. ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಪೂರ್ವಭಾವಿ 

ಬೇಸಿಗೆ ದಿನಗಳಲ್ಲಿ ಆರೋಗ್ಯ ಇಲಾಖೆಯಿಂದ ನೀಡಲಾದ ಮುನ್ನೆಚ್ಚರಿಕೆ ಕ್ರಮಗಳನ್ನು ಸಾರ್ವಜನಿಕರು ಪಾಲಿಸಲು ಸೂಚನೆ

ಕಲಬುರಗಿ,3.ಮಾ.25. -ಪ್ರಸ್ತುತ ಹಾಗೂ ಮುಂಬರುವ ಬೇಸಿಗೆ ದಿನಗಳಲ್ಲಿ ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹೀಟ್ ವೇವ್ (ಶಾಖದ ಹೊಡೆತ) ಹೀಟ್ ವೇವ್ ಸ್ಟೋಕನಿಂದಾಗಿ ಸಾರ್ವಜನಿಕರಿಗೆ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುವ ಸಾಧ್ಯತೆ ಇದ್ದು, ಆದ್ದರಿಂದ ಎಲ್ಲಾ ಸಾರ್ವಜನಿಕರು ಆರೋಗ್ಯ ಇಲಾಖೆಯಿಂದ ನೀಡಲಾದ ಈ ಕೆಳಕಂಡAತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಸಲಹೆ ನೀಡಿದ್ದಾರೆ.   ಸಾರ್ವಜನಿಕರು ವಿಶೇಷವಾಗಿ ಮಧ್ಯಾಹ್ನ 12 ರಿಂದ ಮಧ್ಯಾಹ್ನ

ಗುಲಬರ್ಗಾ ವಿಶ್ವವಿದ್ಯಾಲಯದ ಮೇಲೆ ಲೋಕಾಯುಕ್ತ ದಾಳಿ

ಕಲಬುರಗಿ,-ಲೋಕಾಯುಕ್ತ ಎಸ್‌ಪಿ ಬಿ.ಕೆ.ಉಮೇಶ ಅವರ ನೇತೃತ್ವದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಮೇಲೆ ಇಂದು ದಾಳಿ ನಡೆಸಲಾಗಿದೆ. ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡುವಲ್ಲಿ ವಿಳಂಬ, ನಕಲಿ ಪದವಿ ಪ್ರಮಾಣ ಪತ್ರ ಮತ್ತು ಲಂಚ ಪಡೆಯುತ್ತಿರುವ ಆರೋಪ ಕೇಳಿ ಬಂದ ಈ ಹಿನ್ನೆಲೆಯಲ್ಲಿ ಲೋಕಾ ಯುಕ್ತ ಅಧಿಕಾರಿಗಳು ಎಸ್‌ಪಿ ಬಿ.ಕೆಉಮೇಶ್ ಅವರ ನೇತೃತ್ವದಲ್ಲಿ ಏಕಕಾಲಕ್ಕೆ 5-ತಂಡಗಳಲ್ಲಿ ದಾಳಿ ನಡೆಸಿ ಹಾಜರಿ ಪುಸ್ತಕ,ಚಲನವಲನ ರಿಜಿಸ್ಟರ್, ಕ್ಯಾಸಿಸ್ಟ‌ರ್ ಪರಿಶೀಲನೆ ನಡೆಸಿದರು. ಡಿವೈಎಸ್ಪಿಗಳಾದ ಗೀತಾ ಬೇನಾಳ, ಹನುಮಂತ್ ರಾಯ್, ಇನ್ನೆ ಕರಳಾದ ಸಂತೋಷ್,ಅರುಣ್ ಕುಮಾರ್. ಸಿದ್ದರಾಯ, ರಾಜಶೇಖರ್

ಮಾತೋಶ್ರೀ ತಾರಾದೇವಿ ರಾಂಪೂರೆ ಔಷಧಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಒಂದು ದಿನದ ವಿಚಾರ ಸಂಕಿರಣ

ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾತೋಶ್ರೀ ತಾರಾದೇವಿ ರಾಂಪೂರೆ ಔಷದ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ಅಡಿಯಲ್ಲಿ ಎಂ ಫಾರ್ಮ್ ಮತ್ತು ಬಿ ಫಾರ್ಮ್ ವಿಧ್ಯಾರ್ಥಿಗಳಿಗೆ ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು.ಈ ವಿಚಾರ ಸಂಕಿರಣದಲ್ಲಿ ವಿಯಾಟ್ರೀಸ್ ಲಿಮಿಟೆಡ್ ಕಂಪನಿಯ ಉಪಾಧ್ಯಕ್ಷರಾದ ಪ್ರಶಾಂತ್ ದೇಶಪಾಂಡೆಯವರು ಅತಿಥಿಗಳಾಗಿ ಭಾಗವಹಿಸಿದ್ದರು.ನಂತರ ಮಾತನಾಡಿ ಔಷಧಿಯ ಉದ್ಯಮದಲ್ಲಿನ ಇತ್ತಿಚಿಗೆ ಔಷಧಿ ವಿಧ್ಯಾರ್ಥಿಗಳಿಗೆ ಬಹಳಷ್ಟು ಅವಕಾಶಗಳು ಒದಗುತ್ತಿದ್ದು ಹೆಚ್ಚು ಹೆಚ್ಚು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.ಅವರು  ಆಪ್ರಿಕಾ ದೇಶದದಲ್ಲಿ ವಿವಿಧ ಔಷಧೀಯ ಕಂಪನಿಗಳಲ್ಲಿ

ಮಾರ್ಚ್ 8 ರಂದು ರಾಷ್ಟ್ರೀಯ ಲೋಕ್ ಅದಾಲತ್: ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ

ಕಲಬುರಗಿ,ಫೆ.28: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಬರುವ ಮಾರ್ಚ್ 8 ರಂದು ಕಲಬುರಗಿ ಜಿಲ್ಲೆಯ ಎಲ್ಲಾ ಜಿಲ್ಲಾ ಮತ್ತು ತಾಲೂಕು ಹಂತದ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕಾ ಅದಲಾತ್ ನಡೆಯಲಿದ್ದು, ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ ಎಂದು ಪ್ರಭಾರಿ ಕಲಬುರಗಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎ.ವಿ.ಶ್ರೀನಾಥ ಹೇಳಿದರು. ಶುಕ್ರವಾರ ಇಲ್ಲಿನ ಕೋರ್ಟ್ ಕಾಂಪ್ಲೆಕ್ಸ್ ಆವರಣದಲ್ಲಿರುವ ಎ.ಡಿ.ಆರ್. ಕಟ್ಟಡದಲ್ಲಿ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ನ್ಯಾಯಾಧೀಶರು,

ಬಜೆಟ್ ತಯ್ಯಾರಿಕೆ ಹಿನ್ನೆಲೆ:ಮಾರ್ಚ್ 5 ರಂದು ಸಾರ್ವಜನಿಕರ ಅಭಿಪ್ರಾಯ ಪಡೆಯಲು ಪೂರ್ವಭಾವಿ ಸಭೆ

ಕಲಬುರಗಿ,ಫೆ.28: ಕಲಬುರಗಿ ಮಹಾನಗರ ಪಾಲಿಕೆಯು 2025-26ನೇ ಸಾಲಿಗೆ ಮುಂಗಡ ಪತ್ರ ತಯ್ಯಾರಿಸುವ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಮಾರ್ಚ್ 5 ರಂದು ಬೆಳಿಗ್ಗೆ 11 ಗಂಟೆಗೆ ಇಂದಿರಾ ಸ್ಮಾರಕ ಭವನದಲ್ಲಿ ಸಾರ್ವಜನಿಕರ ಸಲಹೆ-ಸೂಚನೆ ಪಡೆಯಲು ಪೂರ್ವಭಾವಿ ಸಭೆ ಆಯೋಜಿಸಿದೆ ಎಂದು ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಸಜ್ಜನ್ ತಿಳೀಸಿದ್ದಾರೆ. ಇಂದಿರಾ ಸ್ಮಾರಕ ಭವನದಲ್ಲಿ ನಡೆಯುವ ಸಭೆಗೆ ಮಹಾನಗರದ ಸಾರ್ವಜನಿಕರು, ನೊಂದಾಯಿತ ಸ್ಥಳೀಯ ಕಲ್ಯಾಣ ಸಂಘ, ವ್ಯಾಪಾರ, ಉದ್ಯಮ ನಡೆಸುವ ಸಂಘ-ಸಂಸ್ಥೆಗಳು, ಎನ್.ಜಿ.ಓ ಸಂಘಗಳು ಮತ್ತು ಅದರ ಪ್ರತಿನಿಧಿಗಳು ಆಗಮಿಸಿ ಅಗತ್ಯ