
ಅಫಜಲಪೂರ ತಾಲೂಕಿನ ವಿವಿಧ ಬಹುಗ್ರಾಮ ಕುಡಿಯುವ ನೀರಿನ ಘಟಕಗಳಿಗೆ ಜಿ.ಪಂ. ಸಿ.ಒ.ಓ. ಅವರು ಭೇಟಿ ನೀಡಿ ಪರಿಶೀಲನೆ
ಕಲಬುರಗಿ,20.ಮಾ.25.-ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕು ವ್ಯಾಪ್ತಿಯಲ್ಲಿ ಬರುವ ಮಲ್ಲಾಬಾದ, ಮಾಶಾಳ, ಕಲ್ಲೂರ, ಗಾಣಗಾಪೂರ ಹಾಗೂ ಅತನೂರ ಬಹುಗ್ರಾಮ ಕುಡಿಯುವ ನೀರಿನ (ಒಗಿS) ಘಟಕಗಳ ಜಾಕವೇಲ್ ಮತ್ತು ನೀರು ಶುದ್ಧೀಕರಣ ಘಟಕಗಳಿಗೆ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಬುಧವಾರ (ಮಾರ್ಚ್ 19 ರಂದು) ಭೇಟಿ ನೀಡಿ ಪರಿಶೀಲಿಸಿದರು. ಕಲಬುರಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರು, ಅಫಜಲಪೂರ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಅಫಜಲಪೂರ