ಹವಾಮಾನ ವೈಪರೀತ್ಯ : ರಾಜ್ಯದಲ್ಲಿ ಬೇಸಿಗೆಗೂ ಮೊದಲೇ ಭಾರಿ ಬಿಸಿಲಬ್ಬರ..!
ಬೆಂಗಳೂರು, ಫೆ.19-ಹವಾಮಾನ ದಲ್ಲಾಗುತ್ತಿರುವ ಬದಲಾವಣೆ ಯಿಂದಾಗಿ ತಾಪಮಾನದಲ್ಲಿ ವ್ಯತ್ಯಾಸವಾಗುತ್ತಿದ್ದು,ಬೇಸಿಗೆಗೂ ಮುನ್ನವೇ ಬಿಸಿಲಿನ ಬೇಗೆ ತೀವ್ರಗೊಂಡಿದೆ. ಬಿಸಿಲನಾಡು ಎಂದೇ ಬಿಂಬಿಸಲಾಗುವ ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 40 ಡಿ.ಸೆಂ.ನಷ್ಟು ದಾಖಲಾಗಿದೆ. ಮುಂದಿನ ನಾಲ್ಕು ದಿನಗಳಲ್ಲಿ 2ರಿಂದ 3ಡಿ.ಸೆಂ.ನಷ್ಟು ತಾಪಮಾನ ಏರಿಕೆಯಾಗುವ ಮುನ್ಸೂಚನೆಗಳಿವೆ. ಚಳಿಗಾಲದಲ್ಲೇ ರಾಜ್ಯಾದ್ಯಂತ ಗರಿಷ್ಠ ಹಾಗೂ ಕನಿಷ್ಠ ತಾಪಮಾನಗಳಲ್ಲಿ ಸರಾಸರಿಗಿಂತ ಹೆಚ್ಚಾಗಿರುವುದು ಕಂಡುಬರುತ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಉಷ್ಣಾಂಶ ಈಗಾಗಲೇ 30 ಡಿ.ಸೆಂ. ಗಡಿ ದಾಟಿದೆ. ಕನಿಷ್ಠ ತಾಪಮಾನವೂ16 ಡಿ.ಸೆಂ.ಗಿಂತ ಹೆಚ್ಚಾಗಿದೆ….