ರೈತರು ಮಣ್ಣು, ನೀರಿನ ಸಂರಕ್ಷಣೆ ಮಾಡುವುದು ಅತಿ ಅವಶ್ಯಕ
ಯಾದಗಿರಿ;ಫೆ:21(ಕ.ವಾ): ರೈತರು ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡುವುದು ಅತಿ ಅವಶ್ಯಕವಾಗಿದ್ದು, ಮನೆಗೊಂದು ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆ ಯಲ್ಲಿ ಪ್ರತಿಯೊಬ್ಬರು ಪಾಲದಾರರಾಗಬೇಕು ಎಂದು ಅಬ್ಬೆ ತುಮಕೂರಿನ ಶ್ರೀ ವಿಶ್ವರಾಧ್ಯ ಸಿದ್ದಸಂಸ್ಥಾನ ಮಠದ ಕಿರಿಯ ಸ್ವಾಮಿಗಳಾದ ಶಿವಶೇಖರ ಸ್ವಾಮಿ ಹೇಳಿದರು ತಾಲೂಕಿನ ಅಬ್ಬೆತುಮಕೂರ ಗ್ರಾಮದ ಶ್ರೀ ವಿಶ್ವರಾಧ್ಯ ಸಿದ್ದ ಸಂಸ್ಥಾನ ಮಠದಲ್ಲಿ ಜಿಲ್ಲಾ ಪಂಚಾಯತ ಯಾದಗಿರಿ, ಕೃಷಿ ಇಲಾಖೆ ಯಾದಗಿರಿ ವತಿಯಿಂದ ಪ್ರದಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಜಲಾನಯನ ಅಭಿವೃದ್ಧಿ, ಜಲಾನಯನ ಯಾತ್ರೆ ಪ್ರಯುಕ್ತ ಪಾನಿ…