ಮುಂದಿನ 10-15 ವರ್ಷಗಳಲ್ಲಿ ಶಿಕ್ಷಕರ ಜಾಗದಲ್ಲಿ Al ಬೋಧನೆ ಸಾಧ್ಯತೆ : ಡಿಕೆಶಿ
ಬೆಂಗಳೂರು, ವಿಜ್ಞಾನ-ತಂತ್ರಜ್ಞಾನ ಬಹಳಷ್ಟು ಮುಂದುವರೆದಿದ್ದು, ಮುಂದಿನ 10-15 ವರ್ಷಗಳಲ್ಲಿ ತರಗತಿಗಳಿಗೆ ಶಿಕ್ಷಕರ ಆಗತ್ಯವೇ ಇಲ್ಲದಂತೆ ಕೃತಕ ಬುದ್ದಿಮತ್ತೆಯ ಬೋಧನೆ ಜಾರಿಯಾಗುವ ಸಾಧ್ಯತೆಯಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ನೆಹರೂ ತಾರಾಲಯ ನೂತನವಾಗಿ ನಿರ್ಮಿಸಿರುವ ಪ್ರೊಫೆಸರ್ ಯು.ಆರ್.ರಾವ್ ಭವನ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ತಾವು ಸೌದಿ ಆರೇಬಿಯಾಕ್ಕೆ ತೆರಳಿದ್ದು ಅಲ್ಲಿ ಉಪನ್ಯಾಸಕರೊಬ್ಬರ ಜೊತೆ ಮಾತನಾಡುವಾಗ ಮುಂದಿನ 15 ವರ್ಷಗಳಲ್ಲಿ ಮಾನವ ಶಿಕ್ಷಕರ ಅಗತ್ಯವೇ ಇರುವುದಿಲ್ಲ. ಎಲ್ಲವೂ ತಂತ್ರಜ್ಞಾನ ಆಧುತ ಎಐ ಅನುಸಾರ ನಡೆಯಲಿದೆ ಎಂದು ಹೇಳಿದರು. ಕಾರ್ಯಕ್ರಮವೊಂದರಲ್ಲಿ…