ಮಾರ್ಚ್ 15 ರವರೆಗೆ ಪುಸ್ತಕ ಖರೀದಿಗಾಗಿ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ವಿಸ್ತರಣೆ
ಕಲಬುರಗಿ,04.ಮಾ.25.-ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮ್ಯಾಕ್ರೋ ಅನುದಾನದಲ್ಲಿ ಕಲಬುರಗಿ ಜಿಲ್ಲೆಯ ಸ್ಥಳೀಯ ಲೇಖಕ, ಲೇಖಕ/ಪ್ರಕಾಶಕರು ಪ್ರಕಟಿಸಿರುವ ಪುಸ್ತಕಗಳ ಖರೀದಿಗಾಗಿ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು 2025ರ ಮಾರ್ಚ್ 15ರ ಸಂಜೆ 5.30 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಈ ಹಿಂದೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು 02-03-2025 ರಂದು ನಿಗದಿಪಡಿಸಲಾಗಿತ್ತು. ಕಲಬುರಗಿ ಜಿಲ್ಲೆಯ ಸ್ಥಳೀಯ ಲೇಖಕರು ಪುಸ್ತಕ ಸಲ್ಲಿಸುವ ಕೊನೆಯ ದಿನಾಂಕವನ್ನು ಮುಂದೂಡುವಂತೆ ಕಲಬುರಗಿ ಕ.ಕ.ಪ್ರ.ಅ.ಮಂಡಳಿ ಕಾರ್ಯದರ್ಶಿಗಳಿಗೆ…