ಬೀದರ್: ಮಹಾ ಕುಂಭಮೇಳಕ್ಕೆ ತೆರಳಿದ್ದ
ಬೀದರ್ ನಗರದ ಲಾಡಗೇರಿಯ ಒಂದೇ ಕುಟುಂಬದ ಮೂವರು ಸೇರಿದಂತೆ ಐವರು ಉತ್ತರ ಪ್ರದೇಶದ ವಾರಾಣಸಿ ಸಮೀಪ ಶುಕ್ರವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಒಂಬತ್ತು ಗಂಭೀರವಾಗಿ ಗಾಯಗೊಂಡಿದ್ದಾರೆ. ಜನ
ನಗರದ ಲಾಡಗೇರಿ ನಿವಾಸಿಗಳಾದ ಸಂತೋಷಕುಮಾರ (45), ಅವರ ಪತ್ನಿ ಸುನೀತಾ (40) ಹಾಗೂ ಅತ್ತೆ ನೀಲಮ್ಮ (62),ಲಕ್ಷ್ಮಿ (57), ಮೃತರು. ಸುಲೋಚನಾ, 3 (40) ಸುಜಾತ, ಕವಿತಾ, ಅನಿತಾ, ಖುಷಿ, ಗಣೇಶ, ಸಾಯಿ, ಭಗವಂತ ಹಾಗೂ ಶಿವಾ ಗಾಯಗೊಂಡಿದ್ದಾರೆ.
ಫೆ. 18ರಂದು ಬೀದರ್‌ನಿಂದ ಪ್ರಯಾಣ ಆರಂಭಿಸಿದ್ದ ಇವರು, ಗುರುವಾರ ಮಧ್ಯರಾತ್ರಿ ಕಾಶಿಯಲ್ಲಿ ವಿಶ್ವನಾಥನ ದರ್ಶನ ಮಾಡಿದ್ದಾರೆ. ನಸುಕಿನ ಐದು ಗಂಟೆಗೆ ಪ್ರಯಾಗರಾಜ್ ಕಡೆಗೆ ಹೊರಟಿದ್ದಾರೆ. ವಾರಾಣಸಿಯ
ಉತ್ತರ ಪ್ರದೇಶದ ವಾರಾಣಸಿ ಸಮೀಪ ಹೆದ್ದಾರಿ ಬದಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ನಜ್ಜುಗುಜ್ಜಾಗಿರುವ ಕ್ರೂಸರ್
ರೂಪಾಪೂರ ಬಳಿ ಬೆಳಿಗ್ಗೆ 6ರಿಂದ 6.30ರ ನಡುವೆ ಇವರಿದ್ದ ಕ್ರೂಸರ್ ಹೆದ್ದಾರಿ ಬದಿಗೆ ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎಂದು ಮೃತರ ಸಂಬಂಧಿಕರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಘಟನೆಯ ತೀವ್ರತೆಗೆ ಕ್ರೂಸರ್‌ನ ಎಡಬದಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳದಲ್ಲೇ ಐವರು ಮೃತಪಟ್ಟಿದ್ದಾರೆ. ಗಾಯಗೊಂಡ 9 ಜನರನ್ನು ಬನಾರಸ್ ಟ್ರಾಮಾ ಕೇರ್‌ಗೆ ದಾಖಲಿಸಲಾಗಿದೆ. ಘಟನೆ ನಂತರ ಕ್ರೂಸರ್ ಚಾಲಕ ನಿಖಿಲ್ ಪರಾರಿಯಾಗಿದ್ದಾನೆ.
ವಾರಾಣಸಿಯ ಮಿರ್ಜಾ ಮುರಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪುಣ್ಯಸ್ನಾನ ತೆರಳಿದ್ದರು.
ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ
‘ಮೃತಪಟ್ಟವರ ಕುಟುಂಬದವರಿಗೆ ತಲಾ ₹5 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ. ಮೃತರ ದೇಹವನ್ನು ಬೀದರ್‌ಗೆ ತರಲು ವ್ಯವಸ್ಥೆ ಮಾಡಲಾಗಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಪರಿಸರ, ಅರಣ್ಯ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.