ಕಲಬುರಗಿ: ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಸುಮಾರು 45.50 ಲಕ್ಷ ರೂ. ಮೌಲ್ಯ ಸೊತ್ತನ್ನು ಕಾಳಗಿ ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಲಕ್ಷ್ಮಣ್ ನಾಯಕ ತಾಂಡ ನಿವಾಸಿ ಚಂದ್ರಕಾಂತ ಪಪ್ಪು ಹರಿಶ್ಚಂದ್ರ ಚವ್ಹಾಣ್ (40), ಕೊಡ್ಲಿ ಗ್ರಾಮದ ಮಲ್ಲಯ್ಯ ಮಹಾಬಲೇಶ್ವರ ಪ್ಯಾಟಿನಮನಿ ಬಂಧಿತ ಆರೋಪಿಗಳು.
ಕೊಡ್ಲಿ ಗ್ರಾಮಕ್ಕೆ ಹೊಂದಿಕೊಂಡಿರುವ ಲಕ್ಷ್ಮಣ ನಾಯಕ ತಾಂಡದ ಹತ್ತಿರ ಕಾರಿನಲ್ಲಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದಇವರಿಂದ ಪೊಲೀಸರು 40 ಲಕ್ಷ ಮೌಲ್ಯದ ಗಾಂಜಾ, ಒಂದು ಕಾರು, ಬೈಕ್ ಜಪ್ತಿ ಮಾಡಿಕೊಂಡಿದ್ದಾರೆ ಎಂದು ಕಲಬುರಗಿ ಎಸ್.ಪಿ ಅಡ್ಡೂರು ಶ್ರೀನಿವಾಸಲು ಮಾಹಿತಿ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಶಹಾಬಾದ್ ಉಪ ವಿಭಾಗದ ಉಪ ಆಧೀಕ್ಷಕರಾದ ಶಂಕಗೌಡ ಪಾಟೀಲ್ ಮಾರ್ಗದರ್ಶನದಲ್ಲಿ ಚಿತ್ತಾಪುರ ವಲಯದ ಸಿಪಿಐ ಚಂದ್ರಶೇಖರ ತಿಗಡಿ, ಕಾಳಗಿ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಯ್ಯ ಸಿಬ್ಬಂದಿಗಳಾದ ಹುಸೇನ್, ನಸೀರ್ ಮಿಯ್ಯಾ, ಸಂಗಮೇಶ, ಅಂಬರೀಶ್, ಬಸಪ್ಪ, ಶಿವರಾಜ್, ಶ್ರೀಶೈಲ್, ಮಾರುತಿ, ಮಂಜು, ಮೌನೇಶ್, ನೇತೃತ್ವದ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
One Comment
OK sir Good News