ಡಾ. ಫಾರುಕ್ ಮಣ್ನೂರ ರಾಜಕೀಯಕ್ಕೆ ಬರಬೇಕು : ಕಮಕನೂರ
ಅರ್ಥಪೂರ್ಣವಾಗಿ ಜನ್ಮದಿನ ಆಚರಿಸಿಕೊಂಡ ಡಾ. ಫಾರುಕ್ ಮಣ್ಣೂುರ
ಡಾ.ಫಾರುಕ್ ಮಣ್ಣೂರ ಹುಟ್ಟುಹಬ್ಬ: ಸೇವಾ ಸಂಕಲ್ಪ ದಿವಸ
ಕಲಬುರಗಿ:ಡಾ.ಸಿ.ಎನ್.ಮಂಜುನಾಥ ಅವರು ಹೃದಯ ತಜ್ಙರಾಗಿ ಅನೇಕ ಬಡ ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡಿ ಜನರ ಪ್ರೀತಿ ವಿಶ್ವಾಸ ಸಂಪಾದಿಸಿ ಜನರ ಆಶಿರ್ವಾದದಿಂದ ಲೋಕಸಭೇಗೆ ಆಯ್ಕೆ ಆದರು ಅದೆ ಮಾದರಿಯಲ್ಲಿ ಡಾ. ಫಾರುಕ್ ಮಣ್ಷೂರ ಅವರು ನೀವು ಕೂಡ ರಾಜಕೀಯಕ್ಕೆ ಬಂದು ಬಡ ಜನರ ಸೇವೆ ಮಾಡಬೇಕು ನಮ್ಮ ಬೆಂಬಲ ಸಹಾಕಾರ ಸದಾ ಇರುತ್ತೇ ಎಂದು ಡಾ.ಫಾರುಕ್ ಮಣ್ಣೂರ ಅವರಿಗೆ ವಿಧಾನ ಪರಿಷತ ಸದಸ್ಯ ತಿಪ್ಪಣಪ್ಪ ಕಮಕನೂರ ರಾಜಕೀಯಕ್ಕೆ ಅಹ್ವಾನಿಸಿದ್ದರು.
ಕಲಬುರಗಿ ನಗರದ ಸೇಡಂ ರಸ್ತೆಯಲ್ಲಿರುವ ಕೇತಕಿ ಗಾರ್ಡನನಲ್ಲಿ ಡಾ. ಫಾರುಕ ಮಣ್ಣೂರ ಅಭಿಮಾನಿ ಬಳಗದಿಂದ ಡಾ.ಫಾರುಕ ಮಣ್ಣೂರ ಅವರ 38ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಸೇವಾ ಸಂಕಲ್ಪ ದೀವಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನಿಮ್ಮಂತವರು ಜನಪರ, ಬಡವರ ಪರ , ಹಿಂದೂಳಿದವರ ಪರ ಕಾಳಜಿವುಳ್ಳವರು ರಾಜಕೀಯಕ್ಕೆ ಬಂದರೆ ಜನರಿಗೆ ಸಾಮಜಿಕ ನ್ಯಾಯ ನೀಡಲು ಸಾಧ್ಯ ರಾಜಕೀಯ ಯಾರಪ್ಪನ ಆಸ್ತಿಇಲ್ಲ ಎಂದು ಹೇಳಿದ್ದರು.
ಜನ್ಮದಿನದ ಪ್ರಯುಕ್ತ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ 160 ಹೆಣ್ಣು ಮಕ್ಕಳ 18 ವರ್ಷಗಳವರೆಗೆ ಅವರ ಕಂತನ್ನು ಪಾವತಿಸುತ್ತಿದ್ದಿರಿ, 2025 ನೆ ಸಾಲಿನಲ್ಲಿ ಉತ್ತಮವಾಗಿ ತೇರ್ಗಡೆಯಾದ 10 ಅನಾಥ ಹೆಣ್ಣು ಮಕ್ಕಳಿಗೆ ತಲಾ ರೂ.10000- ವಿದ್ಯಾರ್ಥಿವೇತನ ನೀಡುರಿವುದು, IAS/ KAS ವಿದ್ಯಾರ್ಥಿಗಳಿಗೆ ಪುಸ್ತಕಗಳ ವಿತರಣೆ ಮಾಡಿರುವುದು, ಕಲಬುರಗಿ ಜಿಲ್ಲೆಯ 10 ಜನ ವಿಧವೆಯರಿಗಾಗಿ ಬಟ್ಟೆ ಹೊಲಿಯುವ ಯತ್ರ ವಿತರಣೆ , ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 07 ಜನ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸೇರಿದಂತೆ ಅನೇಕ ಬಡವರ ಪರ ಕಾಳಜಿ ವುಳ್ಳಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.
ಮಣ್ಣೂರ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಮಣ್ಣೂರ ಮಾತನಾಡಿ ಇಂದು ಪ್ರತಿಯೊಬ್ಬ ಪೋಷಕರು ಹೇಣ್ಣು ಮಗುವಿಗೆ ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾವಂತರಾಗಿ ಮಾಡಿದಾರೆಆ ಹೇಣ್ಣು ಮಗು ಇಡಿ ಕುಟುಂಬಕ್ಕೆ ವಿದ್ಯಾವಂತರನ್ನಾಗಿ ಮಾಡುತ್ತದೆ , ಆದಕರಣ ಹೇಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರತಿಯೊಬ್ಬರು ಪ್ರೊಸ್ತಹಿಸಬೇಕು , ಇಂದು ನಾನು ಹೇಣ್ಣುನ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡುತ್ತಿದ್ದೆನೆ ಸುಮಾರು 15 ವರ್ಷದ ಹಿಂದೆ ನಾನು ಕೂಡ ಆನ್ ಲೈನ್ ಸೆಂಟರ್ ನಲ್ಲಿ ನನ್ನ ವಿದ್ಯಾಭ್ಯಾಸಕ್ಕೆ ಸ್ಕಾಲರ್ ಶಿಪ್ ಗಾಗಿ ನೊಂದಾಯಿಸಿಕೊಂಡಿದೆ ಆದಕಾರಣ ಸಾಧನೆ ಛಲ ಎಲ್ಲಾ ವಿದ್ಯಾರ್ಥಿಗಳ ಬಳಿ ಇರಬೇಕು ಇಂದು ನೀವು ಕೂಡ ಮುಂದೆ ಬೆರೆ ವೊದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಬೇಕು , ಜನ್ಮದಿನವನ್ನು ಬಡವರಿಗೆ ಸಹಾಯ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದು ತೃಪ್ತಿ ತಂದಿದೆ ಎಂದರು.
ಮಣ್ಣುರ ಆಸ್ಪತ್ರೆ ಪ್ರಾರಂಭವಾದಗಿನಿಂದ ನಾನು ಕಲಬುರಗಿ ಜಿಲ್ಲೆಯ 750 ಕ್ಷಯ ರೋಗಿಗಳಿಗೆ ದತ್ತು ಪಡೆದು ಪೌಷ್ಠಿಕ ಆಹರ ವಿತರಣೆ ಮಾಡಲಾಗುತ್ತಿದೆ, ಕಲಬುರಗಿ ಜಿಲ್ಲಾದ್ಯಂತ ಉಚಿತವಾಗಿ ಕುಡಿಯುವ ನೀರು ಪೂರೈಸಲಾಗುತ್ತಿದೆ, ಮಧುಮೇಹ ಮುಕ್ತ ಕಲಬುರಗಿ ಉದ್ದೇಶದಿಂದ ಉಚಿತವಾಗಿ ಮಧೂಮೇಹ ತಪಾಸಣೆ ಅಭೀಯಾನ ಹಮ್ಮಿಕೋಳ್ಳಲಾಗಿದೆ , ಕಲಬುರಗಿ ಜಿಲ್ಲೆಯ ಸುಮಾರು 360 ಬಡ ಹೇಣ್ಣುಿ ಮಕ್ಕಳಿಗೆ ಸುಕನ್ಯ ಸಮೃದ್ದಿ ಯೋಜನೆ ಅಡಿಯಲ್ಲಿ ದತ್ತು ಪಡೆದು 18 ವರ್ಷಗಳ ವರೆಗೆ ಅವರ ಹಣದ ಕಂತ್ತನ್ನು ಆಸ್ಪತ್ರೆಯಿಂದ ಪಾವತಿಸಲಾಗುತ್ತಿದೆ ಎಂದು ತಿಳಿಸಿದ್ದರು.
ಈ ಸಂದರ್ಭದಲ್ಲಿ ಜನಾಬ ಮೌಲಾನಾ ಅಲ್ತಾಫ ಪಟೇಲ್ ಸಾಹೆಬ್ , ಸೆಟ್ ಮೇತಿ ಚರ್ಚನ ಫಾಧರ ಸ್ಟೇನಿ ಲೊಬೊ, ಬೆಳಮಗಿಯ ಜ್ಞಾನ ಭೂಮಿ ಬುದ್ಧ ವಿಹಾರದ ಭೋದಿ ಭಂತೆ ಅಮರ ಜ್ಯೋತಿ, ಶ್ರೀ ಮೌನೇಶ್ವರ ಮಠ ಗಂಜಲ ಖೇಡದ ಪೂಜ್ಯ ಶ್ರೀ ನಾಗೇಶ ಮಾಣಿಕ ಅಪ್ಪಾಜಿ, ಪಾಳಾ ಸಂಸ್ಥಾನ ಮಠದ ಪ.ಪೂಜ್ಯ ಶ್ರೀ ಗುರುಮೂರ್ತಿ ಶಿವಾಚರ್ಯರು, ಶಾಸಕಿ ಖನಿಜ್ ಫಾತಿಮಾ, ಮಾಜಿ ಜಿ.ಪಂ ಅಧ್ಯಕ್ಷರಾದ ನೀತಿನ ಗುತ್ತೇದಾರ, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ,ಬಾಬುಮಿಯ್ಯಾ ಮಣ್ಣೂರ, ನಿಲಂಕಠರಾವ ಮೂಲಗೆ, ಪತ್ರಕರ್ತರಾದ ಬಾಬುರಾವ ಯಡ್ರಾಮಿ. ಡಿ.ಹೆಚ್.ಓ ಆರಣಬಸಪ್ಪ ಖ್ಯಾತನಾಳ, ಶರಣಬಸಪ್ಪ ಖೇಣಿ, ಉದಯ ಪಾಟೀಲ್, ಧರ್ಮರಾಜ ಕಲ್ಲಹಿಪಪ್ರಗಾ, ಅಲ್ಲಮಪ್ರಭು ದೇಶಮುಖ, ಹರ್ಷ, ಅಮೀರ ನಿಂಭಾಳಕರ್.ಸಂಜು ಪಾಟೀಲ್, ಮತೀನ ಅಲಿ, ಇಸ್ಮಾಯಿಲ್, ರಾಜು ಕಂಬಳಿಮಠ, ಮಂಜುನಾಥ ಕಂಬಳಿಮಠ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
*ಬಾಕ್ಸ*
ಡಾ. ಫಾರುಕ್ ಮಣ್ಣೂರ ಅವರ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿ ಬಳಗದ ವತಿಯಿಂಧ ಕಲಬುರಗಿ ನಗರದಲ್ಲಿರುವ 4 ವೃದ್ದಾಶ್ರಮದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಹಾಗೂ ಆರೋಗ್ಯ ತಪಾಸಣೆ ಮಾಡಲಾಯಿತು, ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ 160 ಹೆಣ್ಣು ಮಕ್ಕಳ 18 ವರ್ಷಗಳವರೆಗೆ ಅವರ ಕಂತನ್ನು ಪಾವತಿಸಲು ನಿರ್ದರಿಸಿದ್ದು ಅವರ ಖಾತೆಯ ಪಾಸ್ಬುಕ್ ವಿತರಣೆ, 2025 ನೆ ಸಾಲಿನಲ್ಲಿ ಉತ್ತಮವಾಗಿ ತೇರ್ಗಡೆಯಾದ 10 ಅನಾಥ ಹೆಣ್ಣು ಮಕ್ಕಳಿಗೆ ತಲಾ ರೂ.10000- ವಿದ್ಯಾರ್ಥಿವೇತನ ವಿತರಣೆ, IAS/ KAS ವಿದ್ಯಾರ್ಥಿಗಳಿಗೆ ಪುಸ್ತಕಗಳ ವಿತರಣೆ, ಕಲಬುರಗಿ ಜಿಲ್ಲೆಯ 10 ಜನ ವಿಧವೆಯರಿಗಾಗಿ ಬಟ್ಟೆ ಹೊಲಿಯುವ ಉಪಕರಣ ವಿತರಣೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 07 ಜನ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸೇರಿದಂತೆ ಅನೇಕ ಸಮಾಜಿಕ ಕಾರ್ಯಕ್ರಮ ಆಯೋಜನೆ ಮಾಡಿದ್ದರು.
*ಬೈಕ್ ರ್ಯಾಲಿ*
ಡಾ. ಫಾರುಕ್ ಮಣ್ಣೂ್ರ ಅವರ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿ ಬಳಗದಿಂದ ಡಾ. ಫಾರುಕ್ ಅವರ ಬಾರಾಹಿಲ್ಸ್ ನಿವಾಸಿದಂದ ಕಾರ್ಯಕ್ರಮ ನಡೆಯುವ ಕೇತಕಿ ಗಾರ್ಡನ ವರೆಗೆ 200 ಕ್ಕೂ ಬೈಕ ಗಳ ಮೂಲಕ ಬೃಹತ ಬೈಕ ರ್ಯಾಲಿ ಮಾಡಿದ್ದರು.
