ಭಾರತ ರತ್ನ ಸವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ ಅವರ 134ನೇ ತಾಲೂಕ ಮಟ್ಟದ ಜಯಂತೋತ್ಸವ ಕಾರ್ಯಕ್ರಮ ಅಂಗವಾಗಿ ಚಿಂಚೋಳಿ ಪಟ್ಟಣದ ಪೋಲಕಪಳ್ಳಿ ಹರವಲಯದ ಪ್ರವಾಸಿಗ ಮಂದಿರದಲ್ಲಿ ಜಯಂತೋತ್ಸವ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ ಹೋಡೆಬೀರನಳ್ಳಿ, ಅವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ದೋಸ್ತಿ ಮತ್ತು ಜಯಂತೋತ್ಸವದ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಯಿತು
ಪತ್ರಿಕಾಗೋಷ್ಠಿ ಉದ್ದೇಶ ಜಯಂತೋತ್ಸವ ಸಮಿತಿಯ ಸಮಾಜದ ಮುಖಂಡರಾದ ಗೌತಮ್ ಬೊಮ್ಮಳ್ಳಿ, ಅವರು ಮಾತನಾಡಿ ಏಪ್ರಿಲ್ 29ನೇ ತಾರೀಕು ರಂದು ಭಾರತ ರತ್ನ ಸವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ ಅವರ 134ನೇ ತಾಲೂಕ ಮಟ್ಟದ ಜಯಂತೋತ್ಸವ ಅದ್ದೂರಿಯಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಏಪ್ರಿಲ್ 28ರಂದು ಬೆಳಗ್ಗೆ 10 ಗಂಟೆಗೆ ಎಂದ ಸಂಜೆ 4:00 ವರೆಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಮತ್ತು ಕಣ್ಣಿನ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಏಪ್ರಿಲ್ 29 ನೇ ತಾರೀಖ್ ರಂದು ಮಧ್ಯಾಹ್ನ 12 ಗಂಟೆಗೆ ಬೈಕ್ ರ್ಯಾಲಿ ಹಾಗೂ ಬಸವೇಶ್ವರ ಸರ್ಕಲ್ ದಿಂದ ಡಾ. ಬಿ ಆರ್ ಅಂಬೇಡ್ಕರ್ ಭವನದವರೆಗೆ ಬೃಹತ್ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ನಂತರ ಸಂಜೆ 5:00 ಗಂಟೆಗೆ ಬಹಿರಂಗ ಸಭೆ ಕಾರ್ಯಕ್ರಮವು ಕೂಡ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ಕಲಬುರ್ಗಿ ಉಸ್ತುವಾರಿ ಸಚಿವರಾದ ಪ್ರಿಯಾಂಕಾ ಖರ್ಗೆ, ಮತ್ತು ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ, ಬೀದರ್ ಲೋಕಸಭಾ ಸದಸ್ಯರಾದ ಸಾಗರ್ ಖಂಡ್ರೆ, ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಡಾ. ವಿಠ್ಠಲ್ ವಗ್ಗನ, ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ದಿವ್ಯ ಸಿಂಧೆ, ಮತ್ತು ಅನೇಕ ವಿವಿಧ ಗಣ್ಯರು ಮುಖಂಡ ಹಾಗೂ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಆಗಮಿಸುತ್ತಿದ್ದಾರೆ ಎಂದು ಹೇಳಿದರು
ಪತ್ರಿಕಾಗೋಷ್ಠಿಯಲ್ಲಿ ಜಯಂತೋತ್ಸವ ಸಮಿತಿ ಉಪಾಧ್ಯಕ್ಷರಾದ ವೈಜನಾಥ ಮಿತ್ರ, ಜಯಂತೋತ್ಸವ ಸಮಿತಿಯ ಮುಖಂಡರಾದ ಮಾರುತಿ ಗoಜಗಿರಿ, ಸುನಿಲ್ ತ್ರಿಪಾಠಿ, ರಾಜಶೇಖರ್ ಹೊಸಮನಿ, ಚೇತನ್ ನಿರಾಳಕರ, ಅಂಬರೀಶ್ ರಾಯಕೋಡ, ಉದಯಕುಮಾರ್ ಬೇಡಕಪಳ್ಳಿ, ಕೆ ಮಹೇಶ್, ಮತ್ತು ಅನೇಕ ದಲಿತ ಸಮಾಜದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಇದ್ದರು







Users Today : 1
Users Yesterday : 3
Users Last 7 days : 38