ಯಾದಗಿರಿ : 07 ಏಪ್ರಿಲ್ 25, : ಯಾದಗಿರಿ ಜಿಲ್ಲೆಯ 2025-26ನೇ ಸಾಲಿನ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಮಧ್ಯಾಹ್ನ ಉಪಹಾರ ಯೋಜನೆ ಯಾದಗಿರಿ ಜಿಲ್ಲಾ ಪಂಚಾಯತ ಜಿಲ್ಲೆಯ ಕಛೇರಿ ಕಾರ್ಯಕ್ಕಾಗಿ ಖಾಸಗಿ ವಾಹನ ಬಾಡಿಗೆ ಪಡೆಯಲು ಇ-ಟೆಂಡರ್ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಪಂಚಾಯತ ಪಿ.ಎಂ.ಪೋಷಣ್ ಶಕ್ತಿ ನಿರ್ಮಾಣ್ (ಮ.ಉ.ಯೋ) ಶಿಕ್ಷಣಾಧಿಕಾರಿಗಳು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಮಧ್ಯಾಹ್ನ ಉಪಹಾರ ಯೋಜನೆ ಇಲಾಖೆಯಡಿ ಕಛೇರಿ ಕಾರ್ಯಾಚಟುವಟಿಕೆಗಾಗಿ ಖಾಸಗಿ ವಾಹನ ಬಾಡಿಗೆಗಾಗಿ ಪಡೆಯಲು ಅರ್ಹ ಏಜೇನ್ಸಿಯವರಿಂದ ಇ-ಪ್ರೋಕ್ಯೂರ್‌ಮೆಂಟ್ ಮೂಲಕ ಇ-ಟೆಂಡರ್ ಮೊತ್ತ 4,20,000 ಹಾಗೂ ಇ.ಎಮ್.ಡಿ 10,500 ರೂ.ಗಳು ಇದೆ. ಇ-ಪ್ರೋಕ್ಯೂರ್‌ಮೆಂಟ್ ದಾಖಲೆಗಳನ್ನು 2025ರ ಏಪ್ರಿಲ್ 15ರ ಒಳಗೆ ಸಲ್ಲಿಸಬೇಕು. ಇ-ಟೆಂಡರ್ ದಾಖಲಾತಿಗಳನ್ನು ಮತ್ತು ತಾಂತ್ರಿಕ ಲಕೋಟೆಗಳನ್ನು ಪರಿಶೀಲಿನೆಯು ಯಾದಗಿರಿ ಜಿಲ್ಲಾ ಪಂಚಾಯತದಲ್ಲಿ 2025ರ ಏಪ್ರಿಲ್ 16 ರಂದು ನಡೆಯಲಿದೆ.
ಇ-ಟೆಂಡರ್ ದಾಖಲಾತಿಗಳನ್ನು ಮತ್ತು ವಾಣಿಜ್ಯ ಬಿಡ್ಡ ಪರಿಶೀಲಿನೆಯು ಯಾದಗಿರಿ ಜಿಲ್ಲಾ ಪಂಚಾಯತದಲ್ಲಿ 2025ರ ಏಪ್ರಿಲ್ 19 ರಂದು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ www.eproc.karnataka.gov.in ನಲ್ಲಿ ಅಥವಾ ಯಾದಗಿರಿ ಜಿಲ್ಲಾ ಪಂಚಾಯತ ಪಿ.ಎಂ.ಪೋಷಣ್ ಅಕ್ಷರ ದಾಸೋಹ ಯೋಜನೆ ಜಿಲ್ಲಾ ಪಂಚಾಯತ ಯಾದಗಿರಿ, (ಕಚೇರಿ ವೇಳೆಯಲ್ಲಿ ಇ-ಮೇಲ್ eomdmyad@gmail.com ನಲ್ಲಿ ಮೊ.ನಂ.9448249669,9972376634ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







Users Today : 1
Users Yesterday : 3
Users Last 7 days : 38