June 17, 2025 7:30 pm

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

Home » ಕಲಬುರಗಿ » ಬೇಸಿಗೆ ರಜೆ ಹಿನ್ನೆಲೆ:ಕಲಬುರಗಿ-ದೌಂಡ್ ನಡುವೆ 180 ಬೇಸಿಗೆ ವಿಶೇಷ ರೈಲುಗಳು ಸಂಚಾರ

ಬೇಸಿಗೆ ರಜೆ ಹಿನ್ನೆಲೆ:ಕಲಬುರಗಿ-ದೌಂಡ್ ನಡುವೆ 180 ಬೇಸಿಗೆ ವಿಶೇಷ ರೈಲುಗಳು ಸಂಚಾರ

ಕಲಬುರಗಿ 21.ಮಾ.25-ರೈಲ್ವೆಯ ಸೋಲಾಪುರ ಕೇಂದ್ರ ವಿಭಾಗದ ಕಲಬುರಗಿ-ದೌಂಡ್ ನಡುವೆ 180 ಬೇಸಿಗೆ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೇಸಿಗೆ ರಜೆಯ ಆರಂಭ ಮತ್ತು ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಪರಿಗಣಿಸಿ, ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಕಲಬುರಗಿ-ದೌಂಡ್ ನಡುವೆ ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಮೂಲಕ 180 ಬೇಸಿಗೆ ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ವಿವರಗಳು ಈ ಕೆಳಗಿನಂತಿವೆ: ಕಲಬುರಗಿ-ದೌಂಡ್ ವಾರಕ್ಕೆ 5 ದಿನಗಳು ಕಾಯ್ದಿರಿಸದ ವಿಶೇಷ ರೈಲುಗಳು (128 ಟ್ರಿಪ್‌ಗಳು.)
01421 ವಿಶೇಷ ರೈಲು ಏಪ್ರಿಲ್ 5 ರಿಂದ ಜುಲೈ 2 ರವರೆಗೆ ವಾರದಲ್ಲಿ 5 ದಿನಗಳು (ಗುರುವಾರ ಮತ್ತು ಭಾನುವಾರ ಹೊರತುಪಡಿಸಿ) ಬೆಳಿಗ್ಗೆ 5 ಗಂಟೆಗೆ ದೌಂಡ್‌ದಿAದ ಹೊರಟು ಅದೇ ದಿನ ಬೆಳಿಗ್ಗೆ 11:20 ಗಂಟೆಗೆ ಕಲಬುರಗಿಗೆ ಆಗಮಿಸಲಿದೆ.      

01422 ವಿಶೇಷ ರೈಲು ಕಲಬುರಗಿಯಿಂದ ವಾರದ 5 ದಿನಗಳು (ಗುರುವಾರ ಮತ್ತು ಭಾನುವಾರ ಹೊರತುಪಡಿಸಿ) ಏಪ್ರಿಲ್ 5 ರಿಂದ ಜುಲೈ 2 ರವರೆಗೆ  ಸಂಜೆ 4:10 ಕ್ಕೆ ಹೊರಟು ಅದೇ ದಿನ ರಾತ್ರಿ 22:20 ಕ್ಕೆ ದೌಂಡೆಗೆ ತಲುಪಲಿದೆ. 
ಕಲಬುರಗಿ-ದೌಂಡ್ ದ್ವಿ-ವಾರದ ಕಾಯ್ದಿರಿಸದ ವಿಶೇಷ ರೈಲುಗಳು (52 ಟ್ರಿಪ್‌ಗಳು): 01425 ವಿಶೇಷ ರೈಲು ಏಪ್ರಿಲ್ 3 ರಿಂದ ಜೂನ್ 29 ರವರೆಗೆ ಪ್ರತಿ ಗುರುವಾರ ಮತ್ತು ಭಾನುವಾರ ಬೆಳಿಗ್ಗೆ 5 ಕ್ಕೆ ದೌಂಡ್ಗೆ ಹೊರಟು ಅದೇ ದಿನ ಬೆಳಿಗ್ಗೆ 11:20 ಕ್ಕೆ ಕಲಬುರಗಿಗೆ ಆಗಮಿಸಲಿದೆ. 
 ವಿಶೇಷ ರೈಲು ಸಂಖ್ಯೆ 01426 ಪ್ರತಿ ಗುರುವಾರ ಮತ್ತು ಭಾನುವಾರ  ಏಪ್ರಿಲ್ 3 ರಿಂದ ಜೂನ್ 29 ರವರೆಗೆ ರಾತ್ರಿ 20:30 ಕ್ಕೆ ಕಲಬುರಗಿಯಿಂದ ಹೊರಟು ಮರುದಿನ 02:30 ಕ್ಕೆ ದೌಂಡೆಗೆ ಆಗಮಿಸಲಿದೆ.  
 ರೈಲು ಸಂಖ್ಯೆ 01421/01422 ಮತ್ತು 01425/01426 ರೈಲುಗಳ ನಿಲುಗಡೆ ವಿವರ: ಗಾಣಗಾಪುರ ರಸ್ತೆ, ದುಧನಿ, ಬೊರೋಟಿ, ಅಕ್ಕಲಕೋಟ್ ರಸ್ತೆ, ಹೋಟಗಿ, ಟಿಕೇರವಾಡಿ, ಸೋಲಾಪುರ, ಮೊಹೋಲ್, ಮಾಧಾ, ಕುರ್ದುವಾಡಿ, ಕೆಮ್, ಜೆಯೂರ್, ಪರೇವಾಡಿ ಮತ್ತು ಭಿಗ್ವಾನ್.
 01421/01422 ಮತ್ತು 01425/01426  ರೈಲ್ವೆಗಳಲ್ಲಿ 10 ಸಾಮಾನ್ಯ ಎರಡನೇ ದರ್ಜೆ ಮತ್ತು 2 ಲಗೇಜ್ ಕಮ್ ಬ್ರೇಕ್ ವ್ಯಾನ್ಗಳು (12 ಕೋಚ್‌ಗಳು) ಹೊಂದಿರುತ್ತವೆ.
ಪ್ರಯಾಣಿಕರು ತಪ್ಪದೇ ಟಿಕೇಟ್‌ಗಳೊಂದಿಗೆ ಪ್ರಯಾಣಿಸಬೇಕು. ಬೋಗಿಗಳ ಬುಕಿಂಗ್ ಅನ್ನು ನಿಲ್ದಾಣಗಳಲ್ಲಿನ ಬುಕಿಂಗ್ ಕೌಂಟರ್‌ಗಳ ಮತ್ತು ಯುಟಿಎಸ್ ಅಪ್ಲಿಕೇಶನ್ ಮೂಲಕವೂ ಮಾಡಬಹುದು.
  ಈ ವಿಶೇಷ ರೈಲುಗಳ ವಿವರವಾದ ಸಮಯ ಮತ್ತು ನಿಲುಗಡೆ ಕುರಿತು ಹೆಚ್ಚಿನ ಮಾಹಿತಿಗಾಗಿ   www.enquiry.indianrail.gov.in ಗೆ ಭೇಟಿ ನೀಡಿ ಅಥವಾ  NTES  ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Share This Article

Facebook
X
WhatsApp
Telegram

Leave a Reply

Your email address will not be published. Required fields are marked *

Cricket Live

Stock Market

Astrology

Gold & Silver Price