June 17, 2025 4:20 pm

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

Home » ದೇಶ » 9 ತಿಂಗಳ ಅಂತರಿಕ್ಷದ ವನವಾಸದ ನಂತರ ಸುರಕ್ಷಿತ ಧರೆಗಿಳಿದ ಸುನಿತಾ

9 ತಿಂಗಳ ಅಂತರಿಕ್ಷದ ವನವಾಸದ ನಂತರ ಸುರಕ್ಷಿತ ಧರೆಗಿಳಿದ ಸುನಿತಾ

ಫ್ಲಾರಿಡಾ.ಮಾ.20- ಎಂಟು ದಿನಗಳ ಬದಲಿಗೆ 9 ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಕ್ಕಿಕೊಂಡ ಸುನಿತಾ ವಿಲಿಯವರ್ ಮತ್ತು ಬುಚ್‌ ವಿಲ್ಲೋರ್, ಫಲಿಸಿದ ಕೊಟ್ಯಂತರ ಜನರ ಪ್ರಾರ್ಥನೆ.. ಎಲ್ಲೆಲ್ಲೂ ಮೊಳಗಿದ ಹರ್ಷೋ ದ್ದಾರೆ.ಬರೋಬ್ಬರಿ 9 ತಿಂಗಳ ಅಂತರಿಕ್ಷ ವನವಾಸದ ನಂತರ ಭಾರತೀಯ ಕಾಲಮಾನ ಇಂದು ಮುಂಜಾನೆ 3.27ಕ್ಕೆ ಬಾಹ್ಯಾಕಾಶ ಕ್ಷೇತ್ರದಿಂದ ಸುರಕ್ಷಿತವಾಗಿ ಧರೆಗಿ ಳಿದ ಕೌತುಕ ಕ್ಷಣಗಳಿಗೆ ಫ್ಲಾರಿಡಾದ ಕರಾವಳಿ ಸಾಕ್ಷಿಯಾಯಿತು.

ಕಳೆದ ವರ್ಷ ಜೂ. 5 ರಂದು ಬೋಯಿಂಗ್‌ ಸ್ಪಾರ್‌ಲಿಂಕ್ ಗಗನನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಕ್ರೂ-9 ಮಿಷನ್ ಸಿಬ್ಬಂದಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ಗಗನನೌಕೆಯಲ್ಲಿ ಕಾಣಿಸಿಕ ಗೊಂಡ ತಾಂತ್ರಿಕ ದೋಷದಿಂದಾಗಿ 9 ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿಯಬೇಕಾಯಿತು.

ಇದು ಆತಂಕಕ್ಕೂ ಕಾರಣವಾಗಿತ್ತು. ಈಗ ಯಶಸ್ವಿಯಾಗಿ ವಾಪಸ್ ಬಂದಿರುವುದರಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಫ್ಲಾರಿಡಾದ ಸಮುದ್ರಕ್ಕೆ ಡ್ರಾಗನ್ ಗಗನನೌಕೆ ಇಳಿದಿದೆ. ನಾಲ್ವರು ಗಗನಯಾತ್ರಿಗಳಾದ ನಿಕ್‌ಹೇಗ್, ಸುನಿತಾ ವಿಲಿಯಮ್ಸ್, ಬುಚ್ ವಿಕ್ಟೋರ್ ಹಾಗೂ ಅಲೆಕ್ಸಾಂಡರ್ ಗೊರ್ಬುನವ್ ಅವರನ್ನು ಸುರಕ್ಷಿತವಾಗಿ ನೌಕೆಯಿಂದ ಇಳಿಸಲಾಯಿತು. ಈ ಗಗನಯಾತ್ರಿಗಳ ಆರೋಗ್ಯ ತಪಾಸಣೆ ಸೇರಿಂದತೆ ಇನ್ನಿತರ ಪ್ರಕ್ರಿಯೆಗಳನ್ನು ನಡೆಸಲಾಗುವುದು ಎಂದು ನಾಸಾ ತಿಳಿಸಿದೆ.

ಐಎಸ್‌ಎಸ್ ಕ್ರೂ-9 ಸದಸ್ಯರನ್ನು ಹೊತ್ತ ಸ್ಪೇಸ್‌ಎಕ್ಸ್ ಡ್ರಾಗನ್ ನೌಕೆ ಕಡೆಗೆ ಪ್ರಯಾಣ ಪ್ರಾರಂಭಿಸಿತ್ತು. ಫ್ಲೋರಿಡಾದ ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿಯಿತು. ಈ ವೇಳೆ ಅಮೆರಿಕಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ನಾಸಾ ಮತ್ತು ಸ್ಪೇಸ್ ಎಕ್ಸ್ ಸಿಬ್ಬಂದಿಯ ಹರ್ಷ ಮುಗಿಲು ಮುಟ್ಟಿತ್ತು.

ನಾಲ್ಕು ಪ್ಯಾರಾಚೂಟ್ ಆಕಾಶದಲ್ಲಿ ರೆಕ್ಕೆ ಬಿಚ್ಚುತ್ತಿದ್ದಂತೆ ಗಗನಯಾತ್ರಿಗಳಿದ್ದ ಕ್ರೂ-9 ನೌಕೆ ಯಶಸ್ವಿಯಾಗಿ ಸಮುದ್ರದ ಮೇಲೆ ಇಳಿಯುತು.

ಆರಂಭದಲ್ಲಿಯೇ ಎರಡು ದೈತ್ಯಾಕಾರದ ಶಾರ್ಕ್‌ಗಳು ಗಗನಯಾತ್ರಿಗಳನ್ನು ಸಮುದ್ರದಲ್ಲಿ ಸ್ವಾಗತ ಕೋರಿದವು. ನೌಕೆ ನೀರಿನ ಮೇಲೆ ಇಳಿಯುತ್ತಿದ್ದಂತೆ ಆಮೆರಿಕಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ಸ್ಪೇಸ್ ಎಕ್ಸ್ ಸಿಬ್ಬಂದಿ, ನೌಕೆಯಿಂದ ಹೊರಗೆ ಕರೆತಂದರು. ನೌಕೆ ಸಮುದ್ರದಲ್ಲಿ ಇಳಿಯುತ್ತಿದ್ದ ಕ್ಷಣವನ್ನು ವೀಕ್ಷಿಸಿಲು ನೆರೆದಿದ್ದ ಅಪಾರ ಸಂಖ್ಯೆಯ ಜನರು ಕರತಾಡನ ಮೂಲಕ ಸ್ವಾಗತ ಕೋರಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಾಗತಿಕ ನಾಯಕರು, ದೇಶ ವಿದೇಶಗಳ ಗಣ್ಯರು ಸೇರಿದಂತೆ ಅನೇಕರು ಇಬ್ಬರು ಗಗನ ಯಾತ್ರಿಗಳನ್ನು ಭೂಮಿಗೆ ಮರಳಿದ್ದನ್ನು ಸ್ವಾಗತಿಸಿದ್ದಾರೆ. ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲೋರ್ ಅವರು ಕಳೆದ ವರ್ಷ ಜೂನ್‌ನಲ್ಲಿ ಬಾಹ್ಯಾಕಾಶಕ್ಕೆ ಪಯಣಿಸಿದ್ದರು. ತಾಂತ್ರಿಕ ತೊಂದರೆಗಳು ಮತ್ತು ವೇಳಾಪ ಟ್ಟಿಯಲ್ಲಿನ ಬದಲಾವಣೆಗಳಿಂದಾಗಿ ಅವರ ಮರಳುವಿಕೆ ವಿಳಂಬವಾಗಿ ತ್ತು. ಕೆಲವೇ ದಿನಗಳ ಈ ಕಾರ್ಯಾಚರಣೆ ಒಂಬತ್ತು ತಿಂಗಳಿಗೆ ವಿಸ್ತರಣೆಗೊಂಡಿತ್ತು. 59 ವರ್ಷದ ಸುನಿತಾ ವಿಲಿಯಮ್ಸ್ ಮತ್ತು 62 ವರ್ಷದ ಬುಚ್ ವಿಕ್ಟೋರ್ ಭೂ ಮಿಗೆ ಮರಳುವುದನ್ನು ಕಾಯಲಾಗುತ್ತಿತ್ತು. ಈ ಕಾಯುವಿಕೆ ಇದೀಗ ಇಬ್ಬರೂ ಸುರಕ್ಷಿತವಾಗಿ ಮರಳುವುದರೊಂದಿಗೆ ಕೊನೆಗೊಂಡಿದೆ.

ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಲೋರ್ ಆರಿದ್ದ ಕ್ರೂ-9 ಮಾರ್ಚ್ 18ರಂದು ಭಾರತೀಯ ಕಾಲಮಾನ ಬೆಳಗ್ಗೆ 10:35ಕ್ಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹ್ಯಾಚ್ ಅನ್ನು ಮುಚ್ಚಿ ಅನ್‌ಡಾಕ್ ಮಾಡುವ ಮೂಲಕ ಭೂಮಿಯ
ಅದಾದ ನಂತರ ಸ್ಪೇಸ್‌ಎಕ್ಸ್‌ನ ಡ್ರಾಗನ್ ಬಾಹ್ಯಾಕಾಶ ನೌಕೆ ಭೂಮಿಗೆ ಮರಳಲು ವಿಶೇಷ ವಿಧಾನ ಅಳವಡಿಸಿಕೊಂಡಿತು. ಇದರಿಂದಾಗಿ ನೌಕೆ ಭೂಮಿ ವಾತಾವರಣವನ್ನು ಸುರಕ್ಷಿತವಾಗಿ ಪ್ರವೇಶಿಸಿ, ಗೊತ್ತುಪಡಿಸಿದ ಸ್ಥಳದಲ್ಲಿಳಿಯಲು ಸಾಧ್ಯವಾಗಿದೆ.

ಹೂಸನ್‌ನತ್ತ ಕೇಂದ್ರಕ್ಕೆ ಆಗಮನ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹ ಗಗನಯಾತ್ರಿಗಳ ಬಾಹ್ಯಾಕಾಶ ನೌಕೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಈಗ ಅವರು ಹೂನ್‌ನಲ್ಲಿರುವ ನಾಸಾದ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಾಚರಣೆಗಳ ಪ್ರಧಾನ ಕಚೇರಿಯಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದಾರೆ. ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಕ್ಟೋರ್ ಕಳೆದ ವರ್ಷ ಜೂನ್‌ನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದರು. ಕೇವಲ ಒಂದು ವಾರದ ಮಟ್ಟಿಗೆ ಅಲ್ಲಿಗೆ ಪ್ರಯಾಣಿಸಿದ್ದರು. ಆದರೆ ಅವರಿದ್ದ ಕಂಡುಬಂದಿತ್ತು. ಇದರಿಂದಾಗಿ ಸುನಿತಾ ಮತ್ತವರ ಸಹ ಗಗನಯಾತ್ರಿಗಳು ನೌಕೆಯ ಮೂಲಕ ಹಿಂತಿರುಗುವುದು ಅಪಾಯ ಎಂದು ನಾಸಾ ತಿಳಿಸಿತ್ತು.

ಡ್ರಾಗನ್ ಕೆಲಸ ಮಾಡಿದ್ದು ಹೇಗೆ? ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿದ್ದ ಸುನಿತಾ ಹಾಗೂ ಬುಚ್ ಅವರನ್ನು ಭೂಮಿಗೆ ಕರೆತರಲು ನಾಸಾ ಮತ್ತು ಸ್ಪೇಸ್ ಎಕ್ಸ್ ಯೋಜನೆ ರೂಪಿಸಿತ್ತು. ಮೊನ್ನೆ ನಾಲ್ವರು ಗಗನಯಾತ್ರಿಗಳನ್ನೊಳಗೊಂಡ ಕ್ರೂ-10 ಮಿಷನ್‌ನ ಡ್ರಾಗನ್ ಗಗನನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ರವಾನಿಸಿತ್ತು.

ಆದರೆ, ಡ್ರಾಗನ್ ಪ್ರಕ್ರಿಯೆ ನಡೆದಿರುವ ಬಗ್ಗೆ ಸುರೇಂದರ್‌ ಗುಜಾರ್ ಸೇರಿದಂತೆ ಇತರರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಎಐ ನಿರ್ಮಿತ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಸ್ಟೇಸ್‌ಎಕ್ಸ್‌ನ ಡ್ರಾಗನ್ ಕ್ಯಾಫೂಲ್ ಗಗನನೌಕೆ ಯಾವರೀತಿ ಗಗನ ಯಾನಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲಾಗಿದೆ ಎನ್ನುವದನ್ನು ವೀಡಿಯೊ ಮೂಲಕ ಹಂಚಿಕೊಂಡಿದ್ದಾರೆ.

ಸುನಿತಾ ವಿಲಿಯಮ್ಸ್ ದಾಖಲೆ ಗಗನ ಯಾತ್ರಿ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ 608 ದಿನಗಳನ್ನು ಕಳೆದು ದಾಖಲೆ ನಿರ್ಮಿಸಿದ್ದಾರೆ. ಪೆಗ್ಗಿ ವಿಟ್ಲನ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ.

ಸುನೀತಾ ವಿಲಿಯಮ್ಸ್ 608 ದಿನಗಳೊಂದಿಗೆ ನಾಸಾ ಗಗನಯಾತ್ರಿಗಳಲ್ಲಿ ಎರಡನೇ ಅತಿ ಹೆಚ್ಚು ಸಂಚಿತ ಸಮಯ ಹೊಂದಿದ್ದಾರೆ, ಪೆಗ್ಗಿ ವಿಟ್ಲನ್ ಅವರ 675 ದಿನಗಳ ದಾಖಲೆಗಿಂತ ಹಿಂದುಳಿದಿದ್ದಾರೆ.

ಸುನಿತಾ ತಮ್ಮ ವೃತ್ತಿಜೀವನದಲ್ಲಿ 9 ವಿಭಿನ್ನ ಬಾಹ್ಯಾಕಾಶ ನಡಿಗೆ ಒಳಗೊಂಡಂತೆ 62 ಗಂಟೆಗಳ ಕಾಲ ಬಾಹ್ಯಾಕಾಶ ನಡಿಗೆ ಮಾಡಿದ್ದಾರೆ. ಅನುಭವಿ ಗಗನಯಾತ್ರಿಯಾಗಿದ್ದ ಸುನಿತಾ ಅವರನ್ನು ಐಎಸ್‌ಎಸ್‌ನಲ್ಲಿ ಮೂರು ತಿಂಗಳು ಕಳೆದ ನಂತರ ನಿಲ್ದಾಣದ ಕಮಾಂಡರ್ ಆಗಿ ನೇಮಿಸಲಾಯಿತು.

ಈ ತಿಂಗಳ ಆರಂಭದವರೆಗೂ ಬೋಯಿಂಗ್ ಸ್ಟಾರೈನರ್ ಅವರು ಹುದ್ದೆಯಲ್ಲಿ ಯಶಸ್ವಿಯಾಗಿ ನೌಕೆಯಲ್ಲಿ ದೋಷ ಕಾರ್ಯ ನಿರ್ವಹಿಸಿದ್ದಾರೆ.

Share This Article

Facebook
X
WhatsApp
Telegram

Leave a Reply

Your email address will not be published. Required fields are marked *

Cricket Live

Stock Market

Astrology

Gold & Silver Price