ಕಲಬುರಗಿ,20.ಮಾ.25.-ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕು ವ್ಯಾಪ್ತಿಯಲ್ಲಿ ಬರುವ ಮಲ್ಲಾಬಾದ, ಮಾಶಾಳ, ಕಲ್ಲೂರ, ಗಾಣಗಾಪೂರ ಹಾಗೂ ಅತನೂರ ಬಹುಗ್ರಾಮ ಕುಡಿಯುವ ನೀರಿನ (ಒಗಿS) ಘಟಕಗಳ ಜಾಕವೇಲ್ ಮತ್ತು ನೀರು ಶುದ್ಧೀಕರಣ ಘಟಕಗಳಿಗೆ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಬುಧವಾರ (ಮಾರ್ಚ್ 19 ರಂದು) ಭೇಟಿ ನೀಡಿ ಪರಿಶೀಲಿಸಿದರು.
ಕಲಬುರಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರು, ಅಫಜಲಪೂರ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಅಫಜಲಪೂರ ಉಪ ವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಇವರೊಂದಿಗೆ ಎಲ್ಲಾ ಬಹುಗ್ರಾಮ ಕುಡಿಯುವ ನೀರಿನ ಘಟಕಗಳ ಸ್ಥಳಗಳನ್ನು ಪರಿಶೀಲಿಸಿದರು.
ಒಟ್ಟಾರೆಯಾಗಿ ಈ 5 ಬಹುಗ್ರಾಮ ಕುಡಿಯುವ ನೀರಿನ ಘಟಕಗಳಲ್ಲಿ ಕೇವಲ ಮಾಶಾಳ ಬಹುಗ್ರಾಮ ಕುಡಿಯುವ ನೀರಿನ ಘಟಕದಲ್ಲಿ ಮಾತ್ರ ಮೇ ತಿಂಗಳಿನಲ್ಲಿ ಸಮಸ್ಯೆಯಾಗಬಹುದಾಗಿದೆ. ಮುಂಬರುವ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸಲು ಈಗಾಗಲೇ ಸುಮಾರು 100.90 ಲಕ್ಷಗಳಿಗೆ ಸಾದಿಲ್ವಾರು (ಛಿoಟಿಣeಟಿgeಟಿಛಿಥಿ) ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ನೀರಿನ ಸಮಸ್ಯೆ ಉಂಟಾಗುವ ಗ್ರಾಮಗಳಲ್ಲಿ ಬೋರವೆಲ್ ಫ್ಲಷ್ ಮಾಡಬೇಕು. ಹೊಸ ಬೋರವೆಲ್ ಕೊರೆಯುವ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತದೆ. ಅವಶ್ಯವಿದ್ದಲ್ಲಿ ಬಾಡಿಗೆ ಆಧಾರದ ಮೇಲೆ ಬೋರ್ವೆಲ್/ತೆರೆದ ಭಾವಿಗಳನ್ನು ಪಡೆದುಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಕೆಳಕಂಡ ಎಲ್ಲಾ ಬಹುಗ್ರಾಮ ಕುಡಿಯುವ ನೀರಿನ ಘಟಕಗಳ ಪರಿವೀಕ್ಷಣೆಯ ನಂತರ ಸ್ಥಳದಲ್ಲಿದ್ದ ಎಲ್ಲಾ ತಾಲೂಕಾ ಮತ್ತು ಗ್ರಾಮ ಪಂಚಾಯತ ಮಟ್ಟದ ಅಧಿಕಾರಿಗಳೊಂದಿಗೆ ಜಿ.ಪಂ. ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು ಮಾತನಾಡಿ, ಬೇಸಿಗೆಯಲ್ಲಿ ತಾಲೂಕಿನಲ್ಲಿ ಯಾವುದೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಸಹಾಯವಾಣಿಗೆ ಬರುವ ದೂರುಗಳನ್ನು 24 ಗಂಟೆಯೊಳಗಾಗಿ ಬಗೆಹರಿಸುವÀ ಕುರಿತು ಕ್ರಮಕೈಗೊಳ್ಳಬೇಕು. ತಾಲೂಕಿನ ಎಲ್ಲಾ ಬಹುಗ್ರಾಮ ಕುಡಿಯುವ ನೀರಿನ ಜಾಕವೇಲ್ ಘಟಕಗಳು ಕಾಲಕಾಲಕ್ಕೆ ನಿರ್ವಹಣೆ ಮಾಡಿ ಸಕ್ರೀಯವಾಗಿ ಕೆಲಸ ನಿರ್ವಸುವಂತೆ ನಿಗಾವಹಿಸಬೇಕು. ಎಲ್ಲಾ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಜನರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸಬೇಕು ಎಂದು ಸೂಚಿಸಿದರು.
ಮಲ್ಲಾಬಾದ ಬಹುಗ್ರಾಮ ಕುಡಿಯುವ ನೀರಿನ ಘಟಕ: ಸೊನ್ನ ಬ್ಯಾರೇಜ್ನಲ್ಲಿ ಸಧ್ಯದಲ್ಲಿ 1.57 ಟಿ.ಎಮ್.ಸಿ. ನೀರು ಸಂಗ್ರಹಣೆ ಇದ್ದು, ಏಪ್ರಿಲ್ ತಿಂಗಳಿನ ಮಧ್ಯದ ವರೆಗೆ ನೀರಿನ ಸಮಸ್ಯೆಯಾಗುವ ಸಾಧ್ಯತೆ ಕಡಿಮೆ ಇದ್ದು, ಮೇ ತಿಂಗಳಿನಲ್ಲಿ ಮಲ್ಲಾಬಾದ ಬಹುಗ್ರಾಮ ಕುಡಿಯುವ ನೀರಿನ ಘಟಕದ ಜಾಕವೇಲ್ ಸ್ಥಳದಲ್ಲಿ ನೀರಿನ ಕೊರತೆಯಾಗಲಿದ್ದು, ಇದನ್ನು ಪ್ಲೋಟಿಂಗ್ ಡೆಕ್ ಅಳವಡಿಸಿ ನದಿಯ ಮಧ್ಯ ಬಾಗದಿಂದ ನೀರು ಸರಬರಾಜು ಮಾಡಬಹುದಾಗಿದೆ ಎಂದು ಅಭಿಪ್ರಾಯ ನೀಡಿದರು.
ಮಾಶಾಳ ಬಹುಗ್ರಾಮ ಕುಡಿಯುವ ನೀರಿನ ಘಟಕ: ಸೊನ್ನ ಬ್ಯಾರೇಜ್ನಲ್ಲಿ ಸಧ್ಯದಲ್ಲಿ 1.57 ಟಿ.ಎಮ್.ಸಿ. ನೀರು ಸಂಗ್ರಹಣೆ ಇದ್ದು, ಏಪ್ರಿಲ್ ತಿಂಗಳಿನ ಮಧ್ಯದವರೆಗೆ ನೀರಿನ ಸಮಸ್ಯೆಯಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಸೊನ್ನ ಬ್ಯಾರೇಜ್ನಲ್ಲಿ 0.80 ಟಿ.ಎಮ್.ಸಿ. ಗಳಷ್ಟು ನೀರಿನ ಸಂಗ್ರಹಣೆ ಕುಸಿದ್ದಲ್ಲಿ ಮಾಶಾಳ ಬಹುಗ್ರಾಮ ಕುಡಿಯುವ ನೀರಿನ ಘಟಕದ ಜಾಕವೇಲ್ ಸಮೀಪ ನೀರು ಬತ್ತು ಹೋಗುವ ಸಾದ್ಯತೆ ಇರುತ್ತದೆ.
ಕಲ್ಲೂರ ಬಹುಗ್ರಾಮ ಕುಡಿಯುವ ನೀರಿನ ಘಟಕ: ಕಲ್ಲೂರ ಬಹುಗ್ರಾಮ ಕುಡಿಯುವ ನೀರಿನ ಘಟಕದ ಜಾಕವೇಲ್ ಘತ್ತರಗಾ ಬ್ಯಾರೇಜ ಸಮೀಪ ಇದ್ದು, ಸಧ್ಯದಲ್ಲಿ 0.576 ಟಿ.ಎಮ್.ಸಿ. ಗಳಷ್ಟು ನೀರಿನ ಸಂಗ್ರಹಣೆ ಇದ್ದು, ಏಪ್ರಿಲ್ ತಿಂಗಳಿನ ಅಂತ್ಯದವರೆಗೆ ನೀರಿನ ಸಮಸ್ಯೆಯಾಗುವ ಸಾಧ್ಯತೆ ಕಡಿಮೆ ಇದ್ದು, ಮೇ ತಿಂಗಳಿನಲ್ಲಿ ಪ್ಲೊಟಿಂಗ್ ಡೆಕ್ ಅಳವಡಿಸಿ ನೀರು ಸರಬರಾಜು ಮಾಡಬಹುದಾಗಿದೆ.
ಅತನೂರ ಬಹುಗ್ರಾಮ ಕುಡಿಯುವ ನೀರಿನ ಘಟಕ: ಅತನೂರ ಬಹುಗ್ರಾಮ ಕುಡಿಯುವ ನೀರಿನ ಘಟಕದ ಜಾಕವೇಲ್ ಗಾಣಗಾಪೂರ ಬ್ಯಾರೇಜ ಮೇಲ್ಬಾಗದಲ್ಲಿ ಇದ್ದು, ಸರಿಯಾಗಿ ಸುಮಾರು 0.127 ಟಿ.ಎಮ್.ಸಿ. ರಷ್ಟು ನೀರು ಸಂಗ್ರಹಣೆ ಇದ್ದು ನೀರಿನ ಕೊರತೆ ಇರುವುದಿಲ್ಲ. ಮೇ ತಿಂಗಳಿನಲ್ಲಿ ಪ್ಲೊಟಿಂಗ್ ಡೆಕ್ ಅಳವಡಿಸಿ ನೀರು ಸರಬರಾಜು ಮಾಡಬಹುದಾಗಿದೆ.
ಗಾಣಗಾಪೂರ ಬಹುಗ್ರಾಮ ಕುಡಿಯುವ ನೀರಿನ ಘಟಕ: ಗಾಣಗಾಪೂರ ಬಹುಗ್ರಾಮ ಕುಡಿಯುವ ನೀರಿನ ಘಟಕದ ಜಾಕವೇಲ್ ಇರುವ ಸ್ಥಳದಲ್ಲಿ ಬೇಸಿಗೆಯಲ್ಲಿಯು ನೀರು ಲಭ್ಯವಿರುವÀ ಬಗ್ಗೆ ಮಾಹಿತಿ ಇರುತ್ತದೆ.
