ಬೆಂಗಳೂರು,19, ಮಾರ್ಚ್.25,: ಆಧಾರ್ ಕಾರ್ಡ್ ನೊಂದಿಗೆ ಎಪಿಕ್ (EPIC ) ಸಂಖ್ಯೆಯನ್ನು ಕೂಡಲೇ ಜೋಡಣೆ (Link) ಮಾಡಲು ಕ್ರಮ ವಹಿಸಲಾಗುವುದು ಎಂದು ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ. ಇಂದು ಈ ಸಂಬಧ ನವದೆಹಲಿಯ ನಿರ್ವಚನ ಸದನದಲ್ಲಿ ಚುನಾವಣಾ ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ಚುನಾವಣಾ ಆಯುಕ್ತರಾದ ಡಾ. ಸುಖಬೀರ್ ಸಿಂಗ್ ಸಂಧು ಮತ್ತು ಡಾ. ವಿವೇಕ್ ಜೋಶಿ ಅವರು ಕೇಂದ್ರ ಗೃಹ ಕಾರ್ಯದರ್ಶಿ, ಕಾರ್ಯದರ್ಶಿ ಶಾಸಕಾಂಗ ಇಲಾಖೆ, ಕಾರ್ಯದರ್ಶಿ ಮೇಟಿ ಮತ್ತು ಯುಐಡಿಎಐ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಮತ್ತು ಇಸಿಐನ ತಾಂತ್ರಿಕ ತಜ್ಞರೊಂದಿಗೆ ಇಂದು ಸಭೆ ನಡೆಸಿ ಚರ್ಚಿಸಿದರು. ಚುನಾವಣಾ ಆಯೋಗವು ಆರ್ಟಿಕಲ್ 326, ಆರ್ಪಿ ಆಕ್ಟ್, 1950 ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಕಾರ ಕ್ರಮ ಕೈಗೊಳ್ಳುತ್ತದೆ. ಪ್ರಾರಂಭವಾಗಲಿವೆ. UIDAI ಮತ್ತು ECI ಯ ತಜ್ಞರ ನಡುವಿನ ತಾಂತ್ರಿಕ ಸಮಾಲೋಚನೆಗಳು ಶೀಘ್ರದಲ್ಲೇ ಭಾರತದ ಸಂವಿಧಾನದ 326 ನೇ ವಿಧಿಯ ಪ್ರಕಾರ, ಮತದಾನದ ಹಕ್ಕನ್ನು ಭಾರತದ ನಾಗರಿಕರಿಗೆ ಮಾತ್ರ ನೀಡುವುದು, ಆಧಾರ್ ಕಾರ್ಡ್ ವ್ಯಕ್ತಿಯ ಗುರುತನ್ನು ಮಾತ್ರ ಸ್ಥಾಪಿಸುತ್ತದೆ. ಆದ್ದರಿಂದ, EPIC ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡುವುದನ್ನು ಸಂವಿಧಾನದ 326 ನೇ ವಿಧಿ, 1950 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 23(4), 23(5) ಮತ್ತು 23(6) ರ ನಿಬಂಧನೆಗಳ ಪ್ರಕಾರ ಕ್ರಮವಹಿಸಲಾಗುವುದು. ಅದರಂತೆ, ಯುಐಡಿಎಐ ಮತ್ತು ಇಸಿಐನ ತಾಂತ್ರಿಕ ತಜ್ಞರ ನಡುವಿನ ತಾಂತ್ರಿಕ ಸಮಾಲೋಚನೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.







Users Today : 1
Users Yesterday : 3
Users Last 7 days : 38