ಚಿಂಚೋಳಿ ತಾಲೂಕಿನ ಕೋಟಗಾ ಗ್ರಾಮದ ಆರಾಧ್ಯ ದೇವರಾದ ಶ್ರೀ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ ಮಾರ್ಚ 17 ರಿಂದ 23 ವರೆಗೆ 7 ದಿನ ಶಪ್ತಾ ಮಾಡುವ ಮೂಲಕ ಪ್ರಾರಂಭ ವಾಗಿದೆ.ದಿನಾಂಕ 24 ಮಾರ್ಚ್ ರಂದು ಮಹಾ ಪ್ರಸಾದ ಹಾಗೂ 25 ಬೆಳಿಗ್ಗೆ 7 ಗಂಟೆಯಿಂದ ಪಲ್ಲಕ್ಕಿ ಮೆರವಣಿಗೆ ವೈಭವದಿಂದ ನಡೆಯುತ್ತದೆ.ಮೆರವಣಿಗೆಯಲ್ಲಿ ಪ್ರಖ್ಯಾತ ಎರಂಡಗಿ ಬ್ಯಾಂಡ್, ಯಾದಗಿರಿಯ ಗೊಂಬೆ ಕುಣಿತ, ಮುಗಳಕೊಡದ ಗೀಗೀಪದ, ಮಕ್ಕಳ ಕೋಲಾಟ, ಪುರಂತರ ಸೇವೆ ಹಾಗೂ ವಿವಿಧ ಗ್ರಾಮದ ಭಜನಾ ಸಂಘ ಗಳಿಂದ ಭಜನೆ ಮತ್ತು ಪಂಗರಗಾ ಗ್ರಾಮದ ಡೊಳ್ಳು ಕುಣಿತ ಜೊತೆಗೆ ಆಳಂದ ತಾಲೂಕಿನ ಲಂಬಾಣಿ ನೃತ್ಯ ನಡೆಯುತದೆ ಎಂದು ಗ್ರಾಮದ ಮುಖಂಡರಾದ ಸಂಗ್ರಾಮ ಟಿ. ಉಚ್ಚೆದ್ , ಶಾಮರಾವ್ ಶೇರಿಕಾರ್, ಸಿದ್ದು ಉಚ್ಚೆದ್ ತಿಳಿಸಿರುತ್ತಾರೆ
