ಕಲಬುರಗಿ,10 ಮಾ.25-ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ-2ರ ವ್ಯಾಪ್ತಿಯಲ್ಲಿ ಬರುವ ಪ್ರಸ್ತುತ10/33/11 ಕೆ.ವಿ. ನಾಲವಾರ ವಿದ್ಯುತ್ ಉಪಕೇಂದ್ರದಲ್ಲಿ ಮೆಂಟೇನನ್ಸ್ ಕಾರ್ಯ ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಇದೇ ಮಾರ್ಚ್ 12 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಈ ಕೆಳಕಂಡ ವಿತರಣಾ ಕೇಂದ್ರಗಳಲ್ಲಿ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದ್ದು, ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ-2ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಶಹಾಬಾದ ಉಪವಿಭಾಗದ 110/33/11 ಕೆ.ವಿ ನಾಲವಾರ ವಿದ್ಯುತ್
ವಿತರಣಾ ಕೇಂದ್ರ ಚಿತ್ತಾಪೂರ ತಾಲೂಕಿನ ನಾಲವಾರ (ಐ.ಪಿ), ತರಕಸಪೇಟ್, ಸನ್ನತ್ತಿ, ಯರಗೊಲ (ಐ.ಪಿ), ಕೋಂಚುರ್, ಕುಂಬಾರಹಳ್ಳಿ, ರಾಂಪುರಳ್ಳಿ (ಐ.ಪಿ), ಕೊಲ್ಲುರ (ಐ.ಪಿ) ಗ್ರಾಮಪಂಚಾಯತಿಯ ಎಲ್ಲಾ ಗ್ರಾಮಗಳು.
