March 13, 2025 2:24 pm

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

Home » ಕಲಬುರಗಿ » ತಂಬಾಕು ಸೇವನೆಯನ್ನು ನಿಯಂತ್ರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ

ತಂಬಾಕು ಸೇವನೆಯನ್ನು ನಿಯಂತ್ರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ

ಕಲಬುರಗಿ: 04.ಮಾ.25 : ತಂಬಾಕು ಸೇವನೆಯನ್ನು ನಿಯಂತ್ರಿಸಿ     ವ್ಯಕ್ತಿಯು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಜತೆಗೆ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ನಿರ್ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಹೇಳಿದರು.
ಮಂಗಳವಾರದAದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಸಭೆಯಲ್ಲಿ  ತಂಬಾಕು ಸೇವನೆಯನ್ನು ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಉಗುಳಿದರೆ ಅಲ್ಲಿನ ಸ್ವಚ್ಚತೆಯನ್ನು ಅಲ್ಲಿನ ಜನರು ಕಾಪಾಡುವರಾರು. ಪ್ರತಿಯೊಬ್ಬ ಸಾರ್ವಜನಿಕರು ಸ್ವಚ್ಚತೆಗೆ ಆದ್ಯತೆಯನ್ನು ನೀಡಿ ತಮ್ಮ ಆರೋಗ್ಯವನು ಕಾಪಾಡಿಕೊಳ್ಳಬೇಕು ಎಂದು ಮಾತನಾಡಿದರು.
ಕೋಟ್ಪಾ ಕಾಯ್ದೆಯಡಿಲ್ಲಿ ದಾಖಲಾದ ಏಪ್ರಿಲ್ ರಿಂದ  ಮಾರ್ಚ 2025 ರವರೆಗೆ ಸೆಕ್ಸನ್ 4ನೇ ಪ್ರಕಾರ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ  ಪೋಲಿಸ್ ಇಲಾಖೆ ಜಂಟಿ  ಕಾರ್ಯಚರಣೆಯಿಂದ  1011 ಪ್ರಕರಣಗಳು, 1,21,225 ಲಕ್ಷ ರೂ ದಂಡವಸೂಲಿಯಾಗಿದೆ.
ಸೆಕ್ಷನ್ 6ಎ & ಸೆಕ್ಷನ್ 6ಬಿ ಪ್ರಕಾರ ಒಟ್ಟು 571 ಪ್ರಕರಣಗಳು  ರೂ. 57.500 ದಂಡವಸೂಲಿಯಾಗಿದೆ ಎಂದು  ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆ ಗಾರರಾದ  ಸುಜಾತ ಪಾಟೀಲ ಸಭೆಯಲ್ಲಿ ತಿಳಿಸಿದ್ದರು.
ಮುಂಬರುವ ವಿಶ್ವ ತಂಬಾಕು ದಿನದಂದು 40 ಗ್ರಾಮಗಳನ್ನು ತಂಬಾಕುಮುಕ್ತ ಗ್ರಾಮಗಳೆಂದು ಘೋಷಣೆಯನ್ನು ಮಾಡಬೇಕು. ಹಿಂದೆ 20 ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳೆಂದು ಘೋಷಣೆಯನ್ನು ಮಾಡಿದ ವರದಿಯನ್ನು ಒಂದು ತಿಂಗಳಲ್ಲಿ ಸಲ್ಲಿಸಬೇಕು.
ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಶಾಲೆಯಿಂದ 100 ಮೀಟರ ಅಂತರದ ಧೂಮಪಾನ ಮತ್ತು ತಂಬಾಕು ಮಾರಾಟ ಮಾಡಲು ಅವಕಾಶ ನೀಡಬಾರದೆಂದು ಯಾವುದೇ ಅಂಗಡಿಗಳನ್ನು ಇರಕೂಡದು ಎಂದು ಸೂಚನೆ ನೀಡಿದರು.
ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ ಪಟ್ಟಣ ಪಂಚಾಯತ ಅಡಿಯಲ್ಲಿ  ಈಗಾಗಲೇ ಚಾಲ್ತಿಯಲ್ಲಿರುವ ಟೋಬ್ಯಾಕೋ  ವೆಂಡರ್ ಲೈಸೆನ್ಸ್ಗಳನ್ನು ವಿತರಿಸಿರುವ ಮಾಹಿತಿ ಪಡೆಯಬೇಕೆಂದರು
ಕಲಬುರಗಿ ಜಿಲ್ಲೆಯ ಎಲ್ಲಾ ಖಾಸಗಿ ಶೈಕ್ಷಣಿಕ ಸಂಸ್ಥೆಗಳನ್ನು, ಶಾಲೆ, ಕಾಲೇಜುಗಳನ್ನು ತಂಬಾಕು ಶಾಲೆಗಳನ್ನು ಮಾಡಿ ಶಾಲೆಗಳ ಖಿoಈಇI (ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ) ನಿಯಮಾನೂಸಾರ ನಾಮಫಲಕಗಳನ್ನು ಅಳವಡಿಸಿ ತಂಬಾಕು ಮುಕ್ತ ಶಾಲೆ ಎಂದು ಗುರುತಿಸಲು ಸಂಬAಧಪಟ್ಟ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.
    160 ಶಾಲಾ ಮತ್ತು ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ, ಜಿಲ್ಲಾ ಮತ್ತು ತಾಲೂಕುಗಳಲ್ಲಿ 46 ಕೋಟ್ಪಾ ದಾಳಿಗಳು,122 ಶಾಲಾಗಳಲ್ಲಿ ಜಿಲ್ಲಾದಾದ್ಯಂತ ಒಂದೇ ದಿನ ಪ್ರಮಾಣ ವಚನ ಜಾಥಾ ಕಾರ್ಯಕ್ರಮ ಶಾಲೆ ಮತ್ತು ಕಾಲೇಜುಗಳಲ್ಲಿ ರಂಗೋಲಿ ಸ್ಪರ್ಧೆ,ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ವಿವಿಧÀ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಎಂದು ಸುಜಾತ ಪಟೇಲ್ ಸಭೆಗೆ ತಿಳಿಸಿದರು.
    ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ  ವಿದ್ಯಾರ್ಥಿಗಳಿಂದ ರಂಗೋಲಿ, ಚಿತ್ರಕಲೆ, ಸ್ಪರ್ದೇಯಲ್ಲಿ  ವಿಜೇತ ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡರು
ಸಭೆಯಲ್ಲಿ ಡಿ.ಎಚ್.ಓ ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಸಮೀಕ್ಷಣಾ ಅಧಿಕಾರಿ, ಡಾ. ರಾಕೇಶ ಕಾಂಬಳೆ, ಆರೋಗ್ಯ ಇಲಾಖೆಯ ಜಿಲ್ಲಾ ಆರೋಗ್ಯ ಇಲಾಖೆ ರೋಗಶಾಸ್ತç ಡಾ. ಚಂದ್ರ ಮೌಳೇಶ್ವರ,  ಜಿಲ್ಲಾ ಪಂಚಾಯತ್ ಉಪಾಕಾರ್ಯದರ್ಶಿ ಲಕ್ಷಣ ಶೃಂಗೇರಿ, ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Share This Article

Facebook
X
WhatsApp
Telegram

Leave a Reply

Your email address will not be published. Required fields are marked *

Cricket Live

Stock Market

Astrology

Gold & Silver Price