ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿಕೊಳ್ಳುವುದು ಅತಿ ಅವಶ್ಯ ಎಂದು ಶ್ರೀ ಮಹೇಶ್ ರೆಡ್ಡಿ ಎನ್ ಆರ್ ಡಿ ಎಂ ಎಸ್ ಅಧಿಕಾರಿಗಳು ಜಿಲ್ಲಾ ಪಂಚಾಯತ ಬೀದರ ರವರು ಹೇಳಿದರು.
ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಬೇನಚಿಂಚೊಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾ ಪಂಚಾಯತ್ ಬೀದರ್ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ವತಿಯಿಂದ ಸರ್ ಸಿ ವಿ ರಾಮನ್ ರವರ ಆವಿಷ್ಕಾರದ ಸ್ಮರಣಾರ್ಥವಾಗಿ ಹಮ್ಮಿಕೊಂಡ ವಿಜ್ಞಾನ ದಿನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವಿದ್ಯಾರ್ಥಿಗಳು ಉತ್ತಮ ಕೌಶಲ್ಯ, ಹೊಸ ಕಲಿಕಾ ಅಭ್ಯಾಸ ಮತ್ತು ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು.
ನಂತರ ವಿಕಸಿತ ಭಾರತಕ್ಕಾಗಿ ವಿಜ್ಞಾನ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ನಾಯಕತ್ವ ಭಾರತೀಯ ಯುವಕರ ಸಬಲೀಕರಣ ವಿಷಯದ ಕುರಿತು ವಿದ್ಯಾರ್ಥಿಗಳೊಂದಿಗೆ ವಿಷಯ ನಿರ್ವಾಹಕರಾದ ಶ್ರೀಮತಿ ಪೂರ್ಣಿಮಾ, ಶ್ರೀಮತಿ ಬಾಯಿರೆಡ್ಡಿ ಮತ್ತು ಶ್ರೀ ಮುರಹರಿ ರವರು ವಿದ್ಯಾರ್ಥಿಗಳೊಂದಿಗೆ ಸಂಭಾಷಣೆ ನಡೆಸಿದರು.
ಈ ಸಂಧರ್ಭದಲ್ಲಿ ಅರ್ಜುನ ಕಾಂಬಳೆ ಮುಖ್ಯ ಗುರುಗಳು, ಶ್ರೀಮತಿ ರೀಟಾ, ಶ್ರೀರಾಜೇಶ್, ಶ್ರೀಮತಿ ರೇಣುಕಾ, ಡ್ಯಾನಿಯಲ್, ಅಂಜಿರೆಡ್ಡಿ , ವಸಂತ್ ಕಾಂಬಳೆ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶ್ರೀ ರಾಜಶೇಖರ್, ಶ್ರೀ ಸತೀಶ್ ಶ್ರೀಮತಿ ಅಶ್ವಿನಿ ಹಾಗೂ ಇತರರು ಇದ್ದರು. ಕಾರ್ಯಕ್ರಮದ ಸಂಚಾಲನೆಯನ್ನು ಶ್ರೀ ರಮೇಶ್ ಸಜ್ಜನ್ ನೆರವೇರಿಸಿಕೊಟ್ಟರು.
