ಯಾದಗಿರಿ : ಮಾರ್ಚ್ 01, : 2024-25ನೇ ಸಾಲಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ, ಅರೆ ಅಲೆಮಾರಿ ವಿದ್ಯಾಥಿಗಳಿಂದ ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಪದವಿ, ವೃತ್ತಿಪರ ಸ್ನಾತಕೋತ್ತರ ಪದವಿಗಳ ಕೋರ್ಸ್ಗಳಿಗೆ “ಶುಲ್ಕ ಮರುಪಾವತಿ” ಸೌಲಭ್ಯಕ್ಕೆ ಆನ್‌ಲೈನ್ ಮೂಲಕ ಅರ್ಜಿ ಅವಧಿ ವಿಸ್ತರಿಸಿದೆ ಎಂದು ಯಾದಗಿರಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸದಾಶಿವ.ಎಂ.ನಾರಾಯಣಕರ್ ಅವರು ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ, ಅರೆ ಅಲೆಮಾರಿ ವಿದ್ಯಾಥಿಗಳಿಂದ ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಪದವಿ, ವೃತ್ತಿಪರ ಸ್ನಾತಕೋತ್ತರ ಪದವಿಗಳ ಕೋರ್ಸ್ಗಳಿಗೆ “ಶುಲ್ಕ ಮರುಪಾವತಿ” ಸೌಲಭ್ಯಕ್ಕೆ ಆನ್‌ಲೈನ್ ssp.postmatric.karnataka.gov.in ನಲ್ಲಿ ಅರ್ಜಿ ಅವಧಿ 2025ರ ಮಾರ್ಚ್ 15 ಒಳಗೆ ಸಲ್ಲಿಸಬೇಕು. ಕಾರ್ಯಕ್ರಮಗಳ ವಿವರ, ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ವಿದ್ಯಾರ್ಥಿವೇತನಕ್ಕೆ ಸಂಬAಧಿಸಿದ ಸರ್ಕಾರಿ ಆದೇಶಗಳು ಬಗ್ಗೆ ಮಾಹಿತಿಗಾಗಿ ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸ bcwd.karnataka.gov.in ಇಲಾಖಾ ಸಹಾಯವಾಣಿ ದೂ.ಸಂ.8050770005 ಇಮೇಲ್ bcwdhelpline@gmail.com ರಾಜ್ಯ ವಿದ್ಯಾರ್ಥಿವೇತನ ತಂತ್ರಾAಶದ ಸಹಾವಾಣಿ ಇಮೇಲ್ postmatrichelp@karnataka.gov.in ದೂ.ಸಂ.1902ಗೆ, ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
