ಬೀದರ್‌ನ ಕರ್ನಾಟಕ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಭಾರತೀಯ ಇಂಗ್ಲೀಷ್ ಸಾಹಿತ್ಯ ಮತ್ತು ರಾಷ್ಟ್ರೀಯ: ಗುರುತು, ಸಂಸ್ಕೃತಿ ಮತ್ತು ರಾಜಕೀಯ ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ, ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಬಿ.ಜಿ.ಶೆಟ್ಕರ್
ನಮ್ಮ ದೇಶವು ಜಾತಿ, ಧರ್ಮ, ಭಾಷೆ, ಲಿಂಗ ಮತ್ತು ಭೌಗೋಳಿಕ ವ್ಯತ್ಯಾಸಗಳನ್ನು ಲೆಕ್ಕಿಸದೆ ಏಕತೆಯಿಂದ ಬದುಕುತ್ತಿದ್ದಾರೆ ಐಕ್ಯತೆಯ ಸಂಕೇತವಾಗಿದೆ. ನಮ್ಮ ಇಂಗ್ಲಿಷ್ ಸಾಹಿತ್ಯದಲ್ಲಿ ಚಿತ್ರಿಸಿದ ಬ್ರದರ್‌ಹುಡ್‌ನಂತೆ ಉಳಿದಿದ್ದೇವೆ ಎಂದರು
ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣಕಾರ ಡಾ.ಪ್ರಕಾಶ ಬಾಳಿಕಾಯಿ ಮಾತನಾಡಿ, ಗಾಂಧೀಜಿಯವರ ಸ್ವದೇಶಿ ಆಂದೋಲನವು ಭಾರತದ ರಾಷ್ಟ್ರೀಯತೆಯ ಕುರಿತಾದ ಜನರನ್ನು ಮತ್ತು ಸಾಹಿತ್ಯವನ್ನು ಒಗ್ಗೂಡಿಸಿತು. ಭಾರತೀಯ ಇಂಗ್ಲಿಷ್ ಸಾಹಿತ್ಯದ ಮೂರು ಆಧಾರಸ್ತಂಭಗಳು ಆರ್.ಕೆ. ನಾರಾಯಣ್, ಮುಲ್ಕ್ ರಾಜ್ ಆನಂದ್, ಮತ್ತು ರಾಜಾ ರಾವ್ ಬರಹಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಕನ್ನಡದ ಖ್ಯಾತ ಬರಹಗಾರ ಕುವೆಂಪು ಅವರ ಬರಹಗಳನ್ನು ಇಂಗ್ಲಿಷ್‌ಗೆ ಅನುವಾದಿಸಲಾಗಿದೆ ಇದು ವಿಶ್ವ ಮಾನವ್ ವಿಶ್ವದಾದ್ಯಂತ ವ್ಯಕ್ತಿಗತ ಮಾನವನ ಮೌಲ್ಯವನ್ನು ಹೆಚ್ಚಿಸು ಸಾಹಕಾರಿಯಾಗಿದೆ ಎಂದು ಹೇಳಿದರು.
ಕರ್ನಾಟಕ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥೆ ಪ್ರೊಫೆಸರ್ ಗೀತಾ ರಾಗಾ ಅವರು ಭಾರತೀಯ ಇಂಗ್ಲಿಷ್ ಸಾಹಿತ್ಯ ಮತ್ತು ರಾಷ್ಟ್ರ: ಗುರುತು, ಸಂಸ್ಕೃತಿ ಮತ್ತು ರಾಜಕೀಯ ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನದ ಪರಿಚಯವನ್ನು ನೀಡಿದರು.
ಈ ಸಂದರ್ಭದಲ್ಲಿ ಶಿವಾನಂದ ಗಾಡ್ಗೆ, ಜಂಟಿ ಕಾರ್ಯದರ್ಶಿ, ಕೆ.ಆರ್.ಇ. ಈ ವಿಚಾರ ಸಂಕಿರಣದ ಸಂಪನ್ಮೂಲ ವ್ಯಕ್ತಿ ಪ್ರಾಧ್ಯಾಪಕಿ ವಿದ್ಯಾ ಪಾಟೀಲ, ಪ್ರಾಧ್ಯಾಪಕ ವಿಟ್ಲ ಜಿ.ಗೋರೆ, ಪ್ರಾಧ್ಯಾಪಕಿ ರಜನಿ ಸತಾನೆ ಸಹಾಯಕ ಪ್ರಾಧ್ಯಾಪಕ, ಪ್ರಾಧ್ಯಾಪಕ ಆನಂದ ಗೌಲಂಕರ ಹಾಗೂ ಆಂಗ್ಲ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
