March 14, 2025 8:43 pm

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

Home » ಚುನಾವಣೆ » ಭಾರತೀಯ ಚುನಾವಣಾ ಆಯೋಗದಿಂದ ಎಲ್ಲಾ ರಾಜ್ಯಗಳ / ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಎರಡು ದಿನಗಳ ಸಮ್ಮೇಳನ

ಭಾರತೀಯ ಚುನಾವಣಾ ಆಯೋಗದಿಂದ ಎಲ್ಲಾ ರಾಜ್ಯಗಳ / ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಎರಡು ದಿನಗಳ ಸಮ್ಮೇಳನ

ಯಾದಗಿರಿ, ಫೆಬ್ರವರಿ 27 :ಭಾರತೀಯ ಚುನಾವಣಾ ಆಯೋಗದಿಂದ ಎಲ್ಲಾ ರಾಜ್ಯಗಳ / ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳ ಎರಡು ದಿನಗಳ ಸಮ್ಮೇಳನವನ್ನು ಮಾರ್ಚ್ 04 ಮತ್ತ 05 ರಂದು ಇಂಡಿಯಾ ಇಂಟರ್ ನ್ಯಾಶನಲ್ ಇನ್ಸಿಟಿಟ್ಯೂಟ್ ಆಫ್ ಡೆಮಾಕ್ರಸಿ & ಎಲೆಕ್ಷನ್ ಮ್ಯಾನೇಜ್‍ಮೆಂಟ್, ನವದೆಹಲಿ ಇಲ್ಲಿ ಹಮ್ಮಿಕೊಳ್ಳಲಾಗಿದೆ.

ಭಾರತ ಮುಖ್ಯ ಚುನಾವಣಾಧಿಕಾರಿಗಳಾಗಿ ನೇಮಕವಾಗಿರುವ ಜ್ಞಾನೇಶ್ ಕುಮಾರ್ ಅಧಿಕಾರ ವಹಿಸಿಕೊಂಡ ನಂತರ ಹಮ್ಮಿಕೊಳ್ಳಲಾಗಿರುವ ಮೊದಲ ಸಮ್ಮೇಳನ ಇದಾಗಿದೆ. ಮೊದಲನೆಯದಾಗಿ ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಸಮ್ಮೇಳನದಲ್ಲಿ ಭಾಗವಹಿಸುವಂತೆ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳು (ಡಿ.ಇ.ಓ) ಮತ್ತು ಚುನಾವಣಾ ನೋಂದಣ ಅಧಿಕಾರಿಗಳನ್ನು (ಇ.ಆರ್.ಓ) ನಾಮನಿರ್ದೇಶನ ಮಾಡಲು ಸೂಚನೆ ನೀಡಲಾಗಿದೆ.

ಶಾಸನಬದ್ಧ ಅಧಿಕಾರಿಗಳಾಗಿ, ಎಲ್ಲಾ ರಾಜ್ಯ / ಕೇಂದ್ರಾಡಳಿತ ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಚುನಾವಣಾ ನೋಂದಣಾ ಅಧಿಕಾರಿಗಳು (ಇ.ಆರ್.ಓ) ರಾಜ್ಯ, ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಪ್ರಮುಖ ಕಾರ್ಯಗಳನ್ನು ನಿರ್ವಹಿಸಲು ಈ ಸಮ್ಮೇಳನವು ಅಗತ್ಯ ಮಾಹಿತಿಯನ್ನು ಒದಗಿಸಲಿದೆ. ಅಲ್ಲದೆ ಎರಡು ದಿನಗಳ ಈ ಸಮ್ಮೇಳನವು ಪರಸ್ಪರರ ಅನುಭವಗಳಿಂದ ಬುದ್ದಿಮತ್ತೆ ಮತ್ತು ಪರಸ್ಪರ ಕಲಿಕೆಗೆ ರಾಜ್ಯಗಳು / ಕೇಂದ್ರಾಡಳಿತ ಚುನಾವಣಾ ಅಧಿಕಾರಿಗಳಿಗೆ ಒಂದು ವೇದಿಕೆಯನ್ನು ನೀಡುತ್ತದೆ.
ಸಮ್ಮೇಳನದ ಮೊದಲನ ದಿನ ಆಧುನಿಕ ಚುನಾವಣಾ ನಿರ್ವಹಣೆಯ ಪ್ರಮುಖ ಕ್ಷೇತ್ರಗಳ ಬಗ್ಗೆ ಮಾಹಿತಿ ತಂತ್ರಜ್ಞಾನ, ಪರಿಣಾಮಕಾರಿ ಸಂವಹನ, ಸಾಮಾಜಿಕ ಮಾಧ್ಯಮವನ್ನು ಹೆಚ್ಚಿಸುವುದು ಮತ್ತು ಚುನಾವಣಾ ಪ್ರಕ್ರಿಯೆಗಳಲ್ಲಿ ವಿಭಿನ್ನ ಕಾರ್ಯಕರ್ತರ ಶಾಸನಬದ್ಧ ಪಾತ್ರದ ಕುರಿತು ಚರ್ಚೆಗಳನ್ನು ನಡೆಸಲಿದೆ.

ಎರಡನೇ ದಿನ, ರಾಜ್ಯಗಳು/ಕೇಂದ್ರಾಡಳಿತದ ಮುಖ್ಯ ಚುನಾವಣಾಧಿಕಾರಿಗಳು ಹಿಂದಿನ ದಿನದ ವಿಷಯಾಧಾರಿತ ಚರ್ಚೆಗಳ ಕುರಿತು ಆಯಾ ಕ್ರಿಯಾ ಯೋಜನೆಯನ್ನು ಪ್ರಸ್ತುತಪಡಿಸುತ್ತಾರೆ ಎಂದು ಭಾರತ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.

Share This Article

Facebook
X
WhatsApp
Telegram

Leave a Reply

Your email address will not be published. Required fields are marked *

Cricket Live

Stock Market

Astrology

Gold & Silver Price