ಕಲಬುರಗಿ: ಮಹಾಶಿವರಾತ್ರಿ ಮಹೋತ್ಸವ ಮೇಳ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಆಳಂದ ರಸ್ತೆಯಲ್ಲಿರುವ ಶ್ರೀ ರಾಮತೀರ್ಥ ದೇವಸ್ಥಾನದಲ್ಲಿ ಶ್ರೀ ರಾಮತೀರ್ಥ ಮಂದಿರದಲ್ಲಿ 50 ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಮಹಾಶಿವರಾತ್ರಿ ಮಹೋತ್ಸವ ಆಚರಿಸಲಾಯಿತು. ಎಂದು ಸಮಿತಿಯ ಅಧ್ಯಕ್ಷರು ಹಾಗೂ ನ್ಯಾಯವಾದಿ ಸುನಿಲ್ ಎಚ್.ಬುಧ್ವಾನಿ ಅವರು ತಿಳಿಸಿದ್ದಾರೆ.
ಶಿವ ಮೂರ್ತಿಗೆ ಬೆಳಿಗ್ಗೆ 4.ಕ್ಕೆ ರುದ್ರಾಭಿಷೇಕ, 5.30.ಕ್ಕೆ ಪೂಜೆ, ಆರತಿ ಮತ್ತು ಪ್ರಸಾದ, 10.ಕ್ಕೆ ಹೂವಿನ ಅಲಂಕಾರ, 11.ಕ್ಕೆ ಅನ್ನದಾಸೋಹ, ರಾತ್ರಿ 8.ಕ್ಕೆ ಮದ್ದು ಸುಡುವ ಕಾರ್ಯಕ್ರಮ, 10.ಕ್ಕೆ ಭಜನಾ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮಕ್ಕೆ ಸಕಲ ಸದ್ಭಕ್ತರು ಹಾಗೂ ಸಾರ್ವಜನಿಕರು ಶಿವ ನ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು.
