ಬೆಂಗಳೂರು,ಫೆ25:ಬಸ್, ಮೆಟ್ರೊ ಹಾಲು ದರ ಏರಿಕೆ ನಂತರ ಇದೀಗ ಶ್ರೀಸಾಮಾನ್ಯನ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಿದೆ. ಅಡುಗೆ ಎಣ್ಣೆ ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟಿದೆ. ತೆಂಗಿನಕಾಯಿ ಎಣ್ಣೆ ದರವು ಲೀಟರ್‌ಗೆ 300 ರೂ. ಗಡಿ ದಾಟಿದೆ.
ದಿನ ನಿತ್ಯದ ಅಡುಗೆ, ತಿಂಡಿ ಮಾಡಲು ಅಡುಗೆ ಎಣ್ಣೆ ಅವಶ್ಯಕ, ಆದರೆ, ಖಾದ್ಯ ತೈಲಗಳ ಬೆಲೆ ಕಳೆದ ಒಂದು ತಿಂಗಳಿನಿಂದ ಗಣನೀಯ ಪ್ರಮಾಣದಲ್ಲಿ ದುಬಾರಿಯಾಗುತ್ತಿದೆ. ಒಂದು ತಿಂಗಳ ಹಿಂದನ ಬೆಲೆಗೂ ಈಗಿನ ದರಕ್ಕೂ 10 ರಿಂದ 20 ರೂ. ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆಯಾಗುತ್ತಿರುವುದೇ ಅಡುಗೆ ಎಣ್ಣೆ ದರ ಏರಿಕೆಯಾಗಲು ಕಾರಣವಾಗಿದೆ.
ಸೂರ್ಯಕಾಂತಿ ಎಣ್ಣೆ ದರವೂ ಹೆಚ್ಚಳವಾಗಿದ್ದು, ಅದರಲ್ಲೂ ಸನ್‌ಫ್ಲವರ್, ಪಾಮಾಯಿಲ್,ಕಡಲೆಕಾಯಿ ಎಣ್ಣೆ, ಹರಳೆ ಎಣ್ಣೆ ಮತ್ತು ಸಾಸಿವೆ ಎಣ್ಣೆಗಳ ದರದಲ್ಲಿ 10 ರಿಂದ 20 ರೂ. ಹೆಚ್ಚಳವಾಗಿದೆ ಎಂದು ಖಾದ್ಯತೈಲ ವ್ಯಾಪಾರಿಗಳು ನೀಡಿದ್ದಾರೆ. ಮಾಹಿತಿ ಕೊಬ್ಬರಿಯ ದರ ಗಗನಕ್ಕೇರಿದೆ. ಒಂದು ವರ್ಷದಿಂದ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 8 ರಿಂದ ಮಾರ್ಚ್ ಮಧ್ಯ ಭಾಗದಿಂದ ರಾಜ್ಯದಲ್ಲಿ ಬಿಸಿಲಿನ ಪ್ರಮಾಣ ಏರಿಕೆಯಾಗುತ್ತದೆ. ಈ ಬಾರಿ ಜನವರಿ ಕೊನೆಯಿಂದಲೇ ಉಷ್ಣಾಂಶ ಹೆಚ್ಚಳವಾಗಿದ್ದು, ಎಳನೀರಿನ ದರವೂ ದುಬಾರಿಯಾಗಿದೆ. ಇದರ ಜತೆಗೆ 8500 ರೂ. ಇತ್ತು ಈಗ 14,500 ರೂ.ನಿಂದ 15 ರೂ.ಗಳಿಗೆ ಏರಿಕೆಯಾಗಿದೆ. ಎಳನೀರು ಭಾರಿ ಪ್ರೌ ವಾಣ ದಲ್ಲಿ ಮಾರಾಟವಾಗುತ್ತಿದ್ದು, ಕೊಬ್ಬರಿ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಇದರ ನೇರ ಪರಿಣಾಮ ತೆಂಗಿನ ಎಣ್ಣೆಗೆ ತಟ್ಟಿದೆ. ಹೀಗಾಗಿ 1ಲೀಟರ್ ತೆಂಗಿನ ಎಣ್ಣೆ 50 ರೂ. ಹೆಚ್ಚಳವಾಗಿದೆ.
