March 14, 2025 8:05 am

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

Home » ಕಲಬುರಗಿ » ಕಲಬುರಗಿಯಲ್ಲಿ ಅಕ್ಕ ಕೆಫೆ (ಒಲವಿನ ಊಟ) ಉದ್ಘಾಟನೆ: ಚಹಾ ಸವಿದ ಸಚಿವರು ಮತ್ತು ಶಾಸಕರು

ಕಲಬುರಗಿಯಲ್ಲಿ ಅಕ್ಕ ಕೆಫೆ (ಒಲವಿನ ಊಟ) ಉದ್ಘಾಟನೆ: ಚಹಾ ಸವಿದ ಸಚಿವರು ಮತ್ತು ಶಾಸಕರು

ಕಲಬುರಗಿ,ಫೆ.24: ಕಲಬುರಗಿ ನಗರದ ಐವಾನ್-ಎ-ಶಾಹಿ ರಸ್ತೆಯಲ್ಲಿರುವ ತಾಲೂಕು ಪಂಚಾಯತ್ ಕಚೇರಿ ಬಳಿ ಸುಮಾರು 15 ಲಕ್ಷ ರೂ. ವೆಚ್ಚ ಮಾಡಿ ಸ್ಥಾಪಿಸಲಾಗಿರುವ ಅಕ್ಕ ಕೆಫೆಯನ್ನು (ಒಲವಿನ ಊಟ) ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ಉದ್ಘಾಟಿಸಿದರು. ಕೆ¥s ೆಯ ಮಾಲೀಕರಾಗಿರುವ ಕಲಬುರಗಿ ತಾಲೂಕಿನ ಕೆಸರಟಗಿಯ ಆರಾಧ್ಯ ಸಂಜೀವಿನಿ ಮಹಿಳಾ ಸ್ವ-ಸಹಾಯ ಗುಂಪಿನ ಮುಖ್ಯಸ್ಥೆ ಆರತಿ ಪಾಟೀಲ ಅವರೊಂದಿಗೆ ಕೆಫೆ ಕುರಿತು ಸಮಾಲೋಚಣೆ ನಡೆಸಿ ಮಾಹಿತಿ ಪಡೆದ ಸಚಿವರು ಮತ್ತು ಶಾಸಕರು ಕೆಫೆಯಲ್ಲಿನ ಚಹಾ ಸವಿದರು. ಸಚಿವ ಪ್ರಿಯಾಂಕ್ ಖರ್ಗೆ ಎಲ್ಲರಿಗೂ ಚಹಾ ಬಡಿಸುವ ಮೂಲಕ ಗಮನ ಸೆಳೆದರು. ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ, ಸಂಸದ ರಾಧಾಕೃಷ್ಣ ದೊಡ್ಡಮನಿ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೆಗೌಡ, ಶಾಸಕರಾದ ಅಲ್ಲಮಪ್ರಭು ಪಾಟೀಲ್,ಎಂ.ವೈ.ಪಾಟೀಲ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಯಲ್ಲಪ್ಪ ನಾಯ್ಕೋಡಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಎಂ.ಸುAದರೇಶ ಬಾಬು, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನದ ನಿರ್ದೇಶಕಿ ಪಿ.ಐ.ಶ್ರೀವಿದ್ಯಾ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯಕ್ತ ಡಾ.ಎಸ್.ಡಿ.ಶರಣಪ್ಪ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಸಜ್ಜನ್ ಇದಕ್ಕೆ ಸಾಕ್ಷಿಯಾದರು. ಪಂಚಾಯತ್ ರಾಜ್ ಹಾಗೂ ರಾಷ್ಟಿ ್ರÃಯ ಗ್ರಾಮೀಣಾ ಜೀವನೋಪಾಯ ಅಭಿಯಾನ ಕಾರ್ಯಕ ್ರಮದ ಒಗ್ಗೂಡಿಸುವಿಕೆ ವೇದಿಕೆಯಡಿ ಮಹಿಳೆಯರು ಆಹಾರ ಉತ್ಪಾದನೆ ಸೇವೆಗಳಡಿ ಸುಸ್ಥಿರ ಜೀವನೋಪಾಯ ಕೈಗೊಳ್ಳಲು 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ರಾಜ್ಯದಲ್ಲಿ ಕೌಶಲ್ಯಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಂಜೀವಿನಿ ರಾಷ್ಟಿಯ ಜೀವನೋಪಾಯ ಅಭಿಯಾನದಡಿ ಪ್ರತಿ ಜಿಲ್ಲೆಯಲ್ಲಿ 2 ಅಕ್ಕ ಕೆಫೆಗಳನ್ನು ಸ್ಥಾಪಿಸಲಾಗುತ್ತಿದ್ದು, ಕಲಬುರಗಿಯಲ್ಲಿ ಇಂದಿಲ್ಲಿ ಮೊದಲನೇ ಕೆಫೆಗೆ ಚಾಲನೆ ನೀಡಲಾಯಿತು. ಅಕ್ಕ-ಕೆಫೆ “ಒಲವಿನ ಊಟ” ಶೀರ್ಷಿಕೆಯಡಿ ರಾಜ್ಯಾದಾದ್ಯಂತ ಒಂದೇ ಮಾದರಿಯಲ್ಲಿ ಈ ಕೆಫೆಗಳನ್ನು ಸ್ಥಾಪಿಸಲಾಗುತ್ತಿದ್ದು, ಆರಾಧ್ಯ ಸ್ವ-ಸಹಾಯ ಗುಂಪು ಹಾಗೂ ಕಲಬುರಗಿ ತಾಲೂಕ ಪಂಚಾಯತ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು 4 ಸ್ವಸಹಾಯ ಗುಂಪಿನ ಮಹಿಳೆಯರು ಇಲ್ಲಿ ಗುಂಪು ಚಟುವಟಿಕೆಯಾಗಿ ಈ ಕೆಫೆ ನಡೆಸಿಕೊಂಡು ಹೋಗಲಿದ್ದಾರೆ. ಆರಾಧ್ಯ ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಅಕ್ಕ-ಕೆಫೆ ಉದ್ಯಮ ನಡೆಸಲು ಕುಡುಂಬಶ್ರೀ ಸಂಸ್ಥೆಯಿದ ತಾಂತ್ರಿಕ ನೆರವು ಸಿಕ್ಕಿದ್ದು, ಕೆ.ಆರ್.ಐ.ಡಿ.ಎಲ್ ಸಂಸ್ಥೆ ಸಿವಿಲ್ ಕಾಮಗಾರಿಗಳನ್ನು ಕೈಗೊಂಡಿದೆ. ಕೆಫೆಗೆ ಬೇಕಾದ ಪೂರಕ ಪೀಠೋಪಕರಣಗಳನ್ನು, ಮೇಜು, ಅಕ್ಕ-ಕೆಫೆ ನಿರ್ವಹಣೆ ರಸೀದಿ ಯಂತ್ರಗಳು ಪೂರೈಸಲಾಗಿದೆ. ಮಾಡಲು ಸ್ವ-ಸಹಾಯ ಗುಂಪಿನ ಮಹಿಳಾ ಸದಸ್ಯರಿಗೆ ಹೋಟೆಲ್ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನಲ್ಲಿ ಮತ್ತು ಕುಡುಂಬಶ್ರೀ ಸಂಸ್ಥೆ ಮೂಲಕ ಕೆಫೆ ನಿರ್ವಹಣೆ ಸೇರಿದಂತೆ ಪಾಕ ತಯಾರಿಕಾ ವಿಧಾನಗಳು, ಗ್ರಾಹಕ ಸೇವೆ, ಹಣಕಾಸು ನಿರ್ವಹಣೆ, ಶುಚಿತ್ವ, ಆಹಾರ ಸಾಮಾಗ್ರಿಗಳ ಶೇಖರಣೆ ಮತ್ತು ಸುರಕ್ಷಿತ ಸಮವಸ ್ತ್ರ ಬಳಕೆಯ ಕುರಿತು ವೃತ್ತಿಪರ ತರಬೇತಿ ನೀಡಲಾಗಿದ್ದು, ಒಟ್ಟಾರೆಯಾಗಿ ಇಲ್ಲಿ ಆರೋಗ್ಯ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರ (ಎಫ್.ಎಸ್.ಎಸ್.ಎ.ಐ) ಪ್ರಮಾಣ ಪತ ್ರದ ಜೊತೆ ಉದ್ಯಮ ಪರವಾನಿಗೆ, ಜಿ.ಎಸ್.ಟಿ. ನೊಂದಣಿ, ಪ್ಯಾನ್ ಕಾರ್ಡ್ ಹೊಂದಿರುವ ಅಕ್ಕ ಕೆಫೆ ವಿವಿಧ ರೀತಿಯ ಊಟ, ಉಪಹಾರ, ಸಿಹಿ ಭಕ್ಷಗಳ ತಯಾರಿಕೆಯಲ್ಲಿ ಅನುಭವ ಹೊಂದಿದೆ. ಸ¨s ೆ-ಸಮಾರಂಭಗಳಿಗೆ ಕಚೇರಿಗಳು ಸೇವೆ ಪಡೆಯಬಹುದಾಗಿದೆ. ಸಾಮಾನ್ಯ ಹೋಟೆಲ್‌ಗ್ಗಿಂತ ಇಲ್ಲಿ ದರಗಳು ಕಡಿಮೆ ಇರಲಿದ್ದು, ಶುಚಿ-ರುಚಿಯಾದ ಬಿಸಿ-ಬಿಸಿ ಊಟ, ಉಪಹಾರ ಇಲ್ಲಿ ಸಿಗಲಿದೆ. 

Share This Article

Facebook
X
WhatsApp
Telegram

Leave a Reply

Your email address will not be published. Required fields are marked *

Cricket Live

Stock Market

Astrology

Gold & Silver Price