March 13, 2025 2:31 pm

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

Home » ರಾಜಕೀಯ » ಭಾರತ ಅಮೋಘ ಗೆಲುವು ಬೆನ್ನಲ್ಲೇ Pak ಪ್ರೇಮಿಯ ಭೂ ಅಂಗಡಿ ಮೇಲೆ ಬುಲ್ಲೋಜರ್ ನುಗ್ಗಿಸಿದ ‘ಮಹಾ’ ಸರ್ಕಾರ,

ಭಾರತ ಅಮೋಘ ಗೆಲುವು ಬೆನ್ನಲ್ಲೇ Pak ಪ್ರೇಮಿಯ ಭೂ ಅಂಗಡಿ ಮೇಲೆ ಬುಲ್ಲೋಜರ್ ನುಗ್ಗಿಸಿದ ‘ಮಹಾ’ ಸರ್ಕಾರ,

ಮುಂಬೈ: ಚಾಂಪಿಯನ್ಸ್ ಟ್ರೋಫಿಯಲ್ಲಿ ಸಾಂಪ್ರಾದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ನಿನ್ನೆ ನಡೆದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವ ಮೂಲಕ 2017ರ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿದೆ. ಅಲ್ಲದೆ ಅಭಿಮಾನಿಗಳು ಸಹ ಭಾರತದ ಗೆಲುವಿನ ನಂತರ ವಿಜಯೋತ್ಸವ ಆಚರಿಸಿದರು.ಪಾಕಿಸ್ತಾನದಲ್ಲಿದ್ದು ಪಾಕ್ ಪರ ಘೋಷಣೆಗಳನ್ನು ಕೂಗಿದರೇ ಅದು ಅವರ ದೇಶಭಕ್ತಿ ಎನ್ನಬಹುದು. ಆದರೆ ಭಾರತದಲ್ಲಿದ್ದುಕೊಂಡು ಪಾಕ್ ಪರ ಘೋಷಣೆಗಳನ್ನು ಕೂಗುವ ವಿಕೃತ ಮನಸ್ಸಿನವರು ಇಲ್ಲಿದ್ದಾರೆ. ಅದೇ ರೀತಿಯ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.ನಿನ್ನೆ ಭಾರತದ ನಾಯಕ ರೋಹಿತ್ ಶರ್ಮಾ ಅವರನ್ನು ಪಾಕ್ ಬೌಲರ್ ಶಾಹೀದ್ ಅಫ್ರಿದಿ ಬೌಲ್ಡ್ ಔಟ್ ಮಾಡಿದ್ದರು. ಈ ವೇಳೆ ಕ್ರೀಡಾಂಗಣದಲ್ಲಿ ಭಾರತೀಯ ಅಭಿಮಾನಿಗಳು ಆತಂಕಗೊಂಡಿದ್ದರೆ ಅತ್ತ ಪಾಕ್ ಅಭಿಮಾನಿಗಳು ಖುಷಿಯಲ್ಲಿ ತೇಲಿದ್ದರು.

ಆದರೆ ಈ ಖುಷಿಯ ಹೆಚ್ಚು ಕಾಲ ಉಳಿಯಲಿಲ್ಲ. ಶುಭನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಆ ಖುಷಿಗೆ ತಣ್ಣೀರು ಎರಚಿದರು. ಕೊಹ್ಲಿ ಶತಕ ಗಳಿಸುವುದರ ಜೊತೆಗೆ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು.ರೋಹಿತ್ ಶರ್ಮಾ ಔಟಾಗುತ್ತಿದ್ದಂತೆ ಮಹಾರಾಷ್ಟ್ರದ ಮಾಲ್ವನ್‌ನಲ್ಲಿ ಅಂಗಡಿ ಮಾಲೀಕನೊಬ್ಬ “ಪಾಕಿಸ್ತಾನ ಜಿಂದಾಬಾದ್” ಘೋಷಣೆಗಳನ್ನು ಕೂಗಿದ್ದನು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಸರ್ಕಾರ ಬುಲ್ಲೋಜರ್ ಕಾರ್ಯಾಚರಣೆ ನಡೆಸಿದೆ ಎನ್ನಲಾಗಿದೆ. ಹೌದು… ಆಕ್ರಮವಾಗಿ ಅಂಗಡಿ ಇಟ್ಟುಕೊಂಡಿದ್ದ ಆ ಮುಸ್ಲಿಂ ವ್ಯಕ್ತಿಯ ಅಂಗಡಿಯನ್ನು ವಿರುದ್ಧ ನೆಲಸಮ ಮಾಡಲಾಗಿದೆ ಎಂದು ವರದಿಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳ ಆರೋಪಗಳ ನಡುವೆ, ಆಕ್ರಮ ರಚನೆಗಳ ವಿರುದ್ಧ ಈ ಕ್ರಮ ನಡೆದಿದೆ.

Share This Article

Facebook
X
WhatsApp
Telegram

Leave a Reply

Your email address will not be published. Required fields are marked *

Cricket Live

Stock Market

Astrology

Gold & Silver Price