ನವದೆಹಲಿ,ಫೆ. 22-ಮುಂಬರುವ 2032ರಲ್ಲಿ ವಿನಾಶಕಾರಿ ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಏರಿದೆ ಎಂದು ನಾಸಾ ತಿಳಿಸಿದೆ. ಡಿಸೆಂಬರ್ 22, 2032ಕ್ಕೆ ಭೂಮಿಗೆ ಈ ಕ್ಷುದ್ರಗ್ರಹ ಅಪ್ಪಳಿಸುವ ಸಾಧ್ಯತೆ ಶೇ.3.1ರಷ್ಟು ಹೆಚ್ಚಾಗಿದೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಈ ಕ್ಷುದ್ರಗ್ರಹದ ಪಥವನ್ನು ಟ್ರಾಕ್ ಮಾಡುತ್ತಿದ್ದು, ಅಚ್ಚರಿಯ ಅಂಶಗಳನ್ನು ರಿವೀಲ್ ಮಾಡಿದೆ. ಅದರಲ್ಲೂ ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಏಳು ನಗರಗಳನ್ನು ಅಪಾಯದ ಅಂಚಿಗೆ ಈ ಕ್ಷುದ್ರಗ್ರಹ ತಂದು ನಿಲ್ಲಿಸಿದ್ದು, ಅದಕ್ಕಾಗಿಯೇ 2024 ಜಖ4 ಎಂಬ ಕ್ಷುದ್ರಗ್ರಹಕ್ಕೆ ಸಿಟಿ ಕಿಲ್ಲರ್ ಎಂದು ವಿಜ್ಞಾನಿಗಳು ಕರೆಯುತ್ತಿದ್ದಾರೆ.
ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಶೇ.3.1 ರಷ್ಟಿದ್ದು ಮತ್ತಷ್ಟು ಆತಂಕ ಹೆಚ್ಚಿಸಿದೆ. ಈ ಮೊದಲು ಸಾನಾ ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಸಾಧ್ಯತೆ 1. ರಷ್ಟಿದೆ ಎಂದು ಹೇಳಿತ್ತು. ನಂತರ ಇನ್ನಷ್ಟು ಅಧ್ಯಯನದ ಬಳಿಕ ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಶೇ.3.1 ರಷ್ಟಿದೆ ಎಂದು ಹೇಳಿದೆ.
ಕ್ಷುದ್ರಗ್ರಹ ಅಂದಾಜು 177 ಅಡಿ ವ್ಯಾಸವನ್ನು ಹೊಂದಿದೆ. ಇದು ಸರಿಸುಮಾರು ದೊಡ್ಡ ಕಟ್ಟಡದ ಗಾತ್ರ ಆದರೆ ಮಾನವ ನಾಗರಿಕತೆಯನ್ನು ಕೊನೆಗೊಳಿಸಲು ಇದು ತುಂಬಾ ಚಿಕ್ಕದಾಗಿದ್ದರೂ, ಒಂದು ಪ್ರಮುಖ ನಗರವನ್ನು ಅಳಿಸಿಹಾಕಬಹುದು. ಇದರ ಬಗ್ಗೆ ನಾನು ಭಯಪಡುತ್ತಿಲ್ಲ ಎಂದು ಪ್ಲಾನೆಟರಿ ಸೊಸೈಟಿಯ ಮುಖ್ಯ ವಿಜ್ಞಾನಿ ಬ್ರೂಸ್ ಬೆಟ್ಸ್ ಹೇಳಿದ್ದಾರೆ. ಆದರೆ ಸ್ವಾಭಾವಿಕವಾಗಿ ನೀವು ಭೂಮಿಗೆ ಡಿಕ್ಕಿ ಹೊಡೆಯುವುದನ್ನು ಶೇಕಡಾವಾರು ಹೆಚ್ಚಾಗುವುದನ್ನು ನೋಡಿದಾಗ, ಅದು ನಿಮಗೆ ಆತಂಕ, ಅಸ್ಪಷ್ಟತೆ ಅನುಭವ ತರುತ್ತದೆ ಎಂದು ಅವರು ಹೇಳಿದರು. ಆದರೆ ಖಗೋಳಶಾಸ್ತ್ರಜ್ಞರು ಹೆಚ್ಚಿನ ಡೇಟಾವನ್ನು ಸಂಗ್ರಹಿಸುತ್ತಿದ್ದಂತೆ, ಸಂಭವನೀಯ ವೇಗ ಶೂನ್ಯಕ್ಕೆ ಇಳಿಯುವ ಮೊದಲು ಹೆಚ್ಚಾಗುತ್ತದೆ ಎಂದು ಅವರು ವಿವರಿಸಿದರು. 2032 ರಲ್ಲಿ ಭೂಮಿಗೆ ಪ್ರಮುಖ ಕ್ಷುದ್ರಗ್ರಹ ಅಪ್ಪಳಿಸುವ ಅವಕಾಶವನ್ನು ಹೆಚ್ಚಿಸಿದೆ, ಕಳೆದ ವಾರ 2.6% ರಷ್ಟಿತ್ತು ಈಗ ಅದು -3ಕ್ಕೆ 1 ಎಂದು ಹೇಳಿದೆ ಮೊದಲ ಬಾರಿಗೆ ಕಳೆದ ವರ್ಷ ಡಿ.27 ರಂದು ಚಿಲಿಯ
ಎಲ್ ಸಾಸ್ ವೀಕ್ಷಣಾಲಯ ಕ್ಷುದ್ರಗ್ರಹ ಪತ್ತೆಹಚ್ಚಿತು. ವಿಶ್ವಾದ್ಯಂತ ಗ್ರಹ ರಕ್ಷಣಾ ಸಹಯೋಗವಾದ ಅಂತರರಾಷ್ಟ್ರೀಯ ಕ್ಷುದ್ರಗ್ರಹ ಎಚ್ಚರಿಕೆ ಜಾಲ ಈ ವರ್ಷದ ಜನವರಿಯಲ್ಲಿ ಪರಿಣಾಮದ ಸಂಭವನೀಯತೆ 1% ದಾಟಿದ ನಂತರ ಎಚ್ಚರಿಕೆ ಜ್ಞಾಪಕ ಪತ್ರವನ್ನು ನೀಡಿತು. ಅಂದಿನಿಂದ, ಈ ಅಂಕಿ ಅಂಶವು ಏರಿಳಿತಗೊಂ ಡಿದೆ ಆದರೆ ಇನ್ನೂ ಮೇಲಕ್ಕೆ ಸಾಗುತ್ತಿದೆ.
ನಾಸಾದ ಇತ್ತೀಚಿನ ಲೆಕ್ಕಾ ಚಾರಗಳ ಪ್ರಕಾರ ಸಂಭವನೀಯ ಘರ್ಷಣೆಯ ದಿನಾಂಕ ಡಿಸೆಂಬರ್ 22, 2032. ಆದಾಗ್ಯೂ ಕ್ಷುದ್ರಗ್ರಹವು ಭೂಮಿಯನ್ನು ಸಂಪೂರ್ಣವಾಗಿ ತಪ್ಪಿಸಿಕೊಳ್ಳುವ ಸಾಧ್ಯತೆ ಇನ್ನೂ 96.9% ಇದೆ ಎಂದು ತಜ್ಞರು
