ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ಕ್ಕೆ ನೊಂದಾಯಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ಕ್ಕೆ ನೊಂದಾಯಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ

ಬೀದರ 9.ಮೇ.25:- 2025ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-1ರಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ-2ನ್ನು ದಿನಾಂಕ: 26-05-2025 ರಿಂದ 02-06-2025ರವರೆಗೆ ನಡೆಸಲಾಗುತ್ತಿದೆ. ಪರೀಕ್ಷೆ-1ರಲ್ಲಿ ನೊಂದಾಯಿಸಿಕೊAಡು ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ-2ರಲ್ಲಿ ನೊಂದಾಯಿಸಲು ಯಾವುದೇ ಶುಲ್ಕ ಪಡೆಯುವುದಿಲ್ಲ. ಕಾರಣ ಜಿಲ್ಲೆಯ ಪರೀಕ್ಷೆ-1ರಲ್ಲಿ ಉತ್ತೀರ್ಣರಾಗದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಈ ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Is

ಕಲಬುರಗಿ ವಿಮಾನ ಪ್ರಯಾಣಿಕರಲ್ಲಿ ಮನವಿ

ಕಲಬುರಗಿ ವಿಮಾನ ಪ್ರಯಾಣಿಕರಲ್ಲಿ ಮನವಿ

ಕಲಬುರಗಿ, 9.ಮೇ 25: ಕಲಬುರಗಿ ವಿಮಾನ ನಿಲ್ದಾಣದಲ್ಲಿ ಎಲ್ಲಾ ಆಗಮನ ಮತ್ತು ನಿರ್ಗಮನ ಕಾರ್ಯಾಚರಣೆಗಳು ಎಂದಿನoತೆ ಮುಂದುವರೆದಿವೆ; ಆದಾಗ್ಯೂ, ನಡೆಯುತ್ತಿರುವ ಪರಿಸ್ಥಿತಿಯಿಂದಾಗಿ, ಭದ್ರತಾ ತಪಾಸಣೆಗಳು ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಹಾಗಾಗಿ ನಿಗಧಿತ ಸಮಯಕ್ಕೆ ಪ್ರಯಾಣಿಕರು ಆಗಮಿಸಲು ಹಾಗೂ ಸಹಕರಿಸಲು ಕಲಬುರಗಿ ವಿಮಾನ ನಿಲ್ದಾಣ ನಿರ್ದೇಶಕರಾದ ಮಹೇಶ್ ಅವರು ಮನವಿ ಮಾಡಿಕೊಂಡಿದ್ದಾರೆ.  ಪ್ರಯಾಣಿಕರ ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಮತ್ತು ಕೊನೆಯ ಕ್ಷಣದ ಅನಾನುಕೂಲತೆಯನ್ನು ತಪ್ಪಿಸಲು ಪ್ರಯಾಣಿಕರು ನಿರ್ಗಮನಕ್ಕೆ ಕನಿಷ್ಠ ಎರಡು ಗಂಟೆಗಳ ಮೊದಲು ವಿಮಾನ ನಿಲ್ದಾಣವನ್ನು ತಲುಪಲು…

ಮಕ್ಕಳು ಬಿಸಿಲಲ್ಲಿ ಓಡಾಡದೆ ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ಮಕ್ಕಳು ಇಂತಹ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ

ಮಕ್ಕಳು ಬಿಸಿಲಲ್ಲಿ ಓಡಾಡದೆ ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ಮಕ್ಕಳು ಇಂತಹ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ

ಯಾದಗಿರಿ : 09.ಮೇ 25, : ಜಿಲ್ಲೆಯಲ್ಲಿ 5 ರಿಂದ 16ರ ವರ್ಷದ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ಉಚಿತ ಬೇಸಿಗೆ ಶಿಬಿರವನ್ನು ಮಕ್ಕಳಿಗೆ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಾದ ಚಿತ್ರಕಲೆ, ಕರಕುಶಲ, ನಾಟಕ, ನೃತ್ಯ, ಯೋಗ, ಕರಾಟೆ, ಪ್ರಕೃತಿ ಪರಿಸರ, ಓದುವ ಕೌಶಲ್ಯ ಕುರಿತು 15 ದಿನದ ಶಿಬಿರವನ್ನು ಹಮ್ಮಿಕೊಳ್ಳಲಾಯಿತು ಎಂದು ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವದ್ದಿ ಇಲಾಖೆ ಉಪ ನಿರ್ದೆಶಕರಾದ ವೀರನಗೌಡ ಪಾಟೀಲ್ ಅವರು ಹೇಳಿದರು.      ಯಾದಗಿರಿ ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ…

ಭಾರತೀಯ ಸೈನಿಕರ ಶ್ರೇಯಸ್ಸಿ ಗಾಗಿ  ಮಸೀದಿಗಳಲ್ಲಿ  ಶುಕ್ರವಾರ ವಿಶೇಷ ಪ್ರಾರ್ಥನೆ : ಜಮೀರ್ ಅಹಮದ್ ಖಾನ್

ಯಾದಗಿರಿ : 9:ಮೇ :25 ಪೆಹಲ್ಗಮ್  ದಾಳಿ ಹಿನ್ನೆಲೆಯಲ್ಲಿ  ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ದೇಶ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಸೈನಿಕರ ಪರವಾಗಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ. ವಖ್ಫ್ ಬೋರ್ಡ್ ವ್ಯಾಪ್ತಿಯ ಮಸೀದಿಗಳು ಸೇರಿದಂತೆ  ರಾಜ್ಯದ ಎಲ್ಲ ಮಸೀದಿಗಳಲ್ಲಿ  ದೇಶದ ಹೆಮ್ಮಯ ಸೈನಿಕರ ಶ್ರೇಯಸ್ಸಿ ಗಾಗಿ ಹಾಗೂ ಶಕ್ತಿ ತುಂಬಲು ಶುಕ್ರವಾರದ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಈ ಕುರಿತು ವಖ್ಫ್ ಬೋರ್ಡ್ ಮುಖ್ಯ…