ಮಾರ್ಚ್ 22 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಮಾರ್ಚ್ 22 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ,21.ಮಾ.25.-ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ-2ರ ವ್ಯಾಪ್ತಿಯಲ್ಲಿ ಬರುವ 33/11 ಅಂಕಲಗಾ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೆಂಟೇನನ್ಸ್ ಕಾರ್ಯ ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಈ ಕೆಳಕಂಡ ವಿತರಣಾ ಕೇಂದ್ರಗಳಲ್ಲಿನ ಗ್ರಾಮಗಳಲ್ಲಿ ಇದೇ ಮಾರ್ಚ್ 22 ರಂದು ಬೆಳಿಗ್ಗೆ 11 ರಿಂದ ಸಂಜೆ 6 ಗಂಟೆಯವರೆಗೆ ರವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದ್ದು, ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ-2ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ. ಜೇವರ್ಗಿ ಉಪ ವಿಭಾಗ 33ಕೆ.ವಿಅಂಕಲಗಾ ವಿದ್ಯುತ್ ವಿತರಣಾ ಕೇಂದ್ರ:…

ನೀರನ್ನು ಕಾಯಿಸಿ, ಆರಿಸಿ ಮತ್ತು ಸೋಸಿ ಕುಡಿಯುಲು ಸೂಚನೆ

ನೀರನ್ನು ಕಾಯಿಸಿ, ಆರಿಸಿ ಮತ್ತು ಸೋಸಿ ಕುಡಿಯುಲು ಸೂಚನೆ

ಕಲಬುರಗಿ,21.ಮಾ.25.-ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಜಲಮೂಲಗಳಲ್ಲಿ ಒಂದಾದ ಭೀಮಾ ನದಿಯ ಮೇಲ್ಭಾಗದಲ್ಲಿ ನೀರಿನ ಹರಿಯುವಿಕೆ ಪೂರ್ತಿಯಾಗಿ ನಿಂತಿದ್ದು, ಈ ಬ್ಯಾರೇಜಿನಲ್ಲಿ ಶೇಖರಣೆಗೊಂಡ ನೀರು ಕೆಳಮಟ್ಟದಾಗಿದ್ದು, ಈ ನಿಂತಿರುವ ನೀರಿನ ಬಣ್ಣ ಹಾಗೂ ಗುಣಮಟ್ಟವು ತೀವ್ರವಾಗಿ ಇಳಿಕೆಯಾಗಿದೆ. ಇದನ್ನು ಸುಧಾರಿಸಲು ಈಗಾಗಲೇ ಸೂಪರ್ ಕ್ಲೋರಿನೇಶನ್ ಮಾಡಿ ನೀರು ಸರಬರಾಜು ಮಾಡಲಾಗುತ್ತಿದೆ. ಆದಾಗ್ಯೂ ಆರೋಗ್ಯದ ಹಿತದೃಷ್ಠಿಯಿಂದ ನಗರದ ಸಾರ್ವಜನಿಕರು ಕುಡಿಯುವ ನೀರನ್ನು ಕಾಯಿಸಿ, ಆರಿಸಿ ಮತ್ತು ಸೋಸಿ ಕುಡಿಯಬೇಕೆಂದು ಕಲಬುರಗಿ ಕೆಯುಡಬ್ಲೂ್ಯಎಸ್‌ಎಂಪಿ-ಕೆಯುಐಡಿಎಫ್‌ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು…

ಹೊರಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಆಪರೇಟರ್ ಹಾಗೂ ವಾಹನ ಚಾಲಕ ಹುದ್ದೆಗೆ ಟೆಂಡರ್ ಆಹ್ವಾನ

ಕಲಬುರಗಿ,21.ಮಾ.25.-ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಲ್ಲಿ 2025-26ನೇ ಸಾಲಿಗೆ  ಹೊರಗುತ್ತಿಗೆ ಆಧಾರದ ಮೇಲೆ ಓರ್ವ ಕಂಪ್ಯೂಟರ್ ಪ್ರೋಗ್ರಾಮರ್ ಹಾಗೂ ಓರ್ವ ವಾಹನ ಚಾಲಕ ಹುದ್ದೆಗೆ ನೇಮಕ ಮಾಡಿಕೊಳ್ಳಲು ಟೆಂಡರ್ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯ ಸಹ ನಿರ್ದೇಶಕರು (ಆಡಳಿತ) ಅವರು ತಿಳಿಸಿದ್ದಾರೆ.  ಟೆಂಡರ್ ಒಪ್ಪಂದದ ಅವಧಿಯು ದಿನಾಂಕ: 01-04-2025 ರಿಂದ 31-03-2026 ರವರೆಗೆ ಇದ್ದು, ಈಗಾಗಲೇ ಮಾರ್ಚ್ 20 ರಿಂದ ಇ-ಟೆಂಡರ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ….

ಪಾಂಡಿಚೇರಿ ರಾಜ್ಯದಲ್ಲಿ ನೋಂದಣಿಯಾಗಿ ಕರ್ನಾಟಕ ತೆರಿಗೆ ಕಟ್ಟದೇ ನಗರದಲ್ಲಿ ಸಂಚರಿಸುತ್ತಿರುವ 11 ವಾಹನಗಳ ವಶ.

ಪಾಂಡಿಚೇರಿ ರಾಜ್ಯದಲ್ಲಿ ನೋಂದಣಿಯಾಗಿ ಕರ್ನಾಟಕ ತೆರಿಗೆ ಕಟ್ಟದೇ ನಗರದಲ್ಲಿ ಸಂಚರಿಸುತ್ತಿರುವ 11 ವಾಹನಗಳ ವಶ.

ಕಲಬುರಗಿ,21,ಮಾ.25.-ಪಾಂಡಿಚೇರಿ ರಾಜ್ಯದಲ್ಲಿ ನೋಂದಣಿಯಾಗಿ ಕರ್ನಾಟಕ ತೆರಿಗೆ ಕಟ್ಟದೇ ನಗರದಲ್ಲಿ ಸಂಚರಿಸುತ್ತಿರುವ 11 ವಾಹನಗಳನ್ನು ಕಲಬುರಗಿ ಪ್ರಾದೇಶಿಕ ಸಾರಿಗೆ ಕಚೇರಿಯ ಮೋಟಾರು ವಾಹನ ನಿರೀಕ್ಷಕರು ವಶಪಡಿಸಿಕೊಂಡು ಆರ್‌ಟಿಓ ಡ್ರೆöÊವಿಂಗ್ ಟ್ರಾö್ಯಕ್‌ನಲ್ಲಿ ನಿಲ್ಲಿಸಿದ್ದು, ಆದ್ದರಿಂದ ಸಂಬAಧಪಟ್ಟ ವಾಹನಗಳ ಮಾಲೀಕರು ಕರ್ನಾಟಕ ರಾಜ್ಯದ ತೆರಿಗೆ ಭರಿಸಿ, ವಿಳಾಸ ಬದಲಾವಣೆ ಹಾಗೂ ವಾಹನಕ್ಕೆ ಕರ್ನಾಟಕ ನೋಂದಣಿ ಸಂಖ್ಯೆ ಪಡೆದುಕೊಳ್ಳಬೇಕೆಂದು ಕಲಬುರಗಿ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಪಾಂಡಿಚೇರಿ ರಾಜ್ಯದಲ್ಲಿ ನೋಂದಣಿ ಮಾಡಿಕೊಂಡ ವಾಹನಗಳ ಮಾಲೀಕರು ಆರ್‌ಟಿಓ…

ಬೇಸಿಗೆ ರಜೆ ಹಿನ್ನೆಲೆ:ಕಲಬುರಗಿ-ದೌಂಡ್ ನಡುವೆ 180 ಬೇಸಿಗೆ ವಿಶೇಷ ರೈಲುಗಳು ಸಂಚಾರ

ಬೇಸಿಗೆ ರಜೆ ಹಿನ್ನೆಲೆ:ಕಲಬುರಗಿ-ದೌಂಡ್ ನಡುವೆ 180 ಬೇಸಿಗೆ ವಿಶೇಷ ರೈಲುಗಳು ಸಂಚಾರ

ಕಲಬುರಗಿ 21.ಮಾ.25-ರೈಲ್ವೆಯ ಸೋಲಾಪುರ ಕೇಂದ್ರ ವಿಭಾಗದ ಕಲಬುರಗಿ-ದೌಂಡ್ ನಡುವೆ 180 ಬೇಸಿಗೆ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬೇಸಿಗೆ ರಜೆಯ ಆರಂಭ ಮತ್ತು ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಪರಿಗಣಿಸಿ, ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಕಲಬುರಗಿ-ದೌಂಡ್ ನಡುವೆ ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಮೂಲಕ 180 ಬೇಸಿಗೆ ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ವಿವರಗಳು ಈ ಕೆಳಗಿನಂತಿವೆ: ಕಲಬುರಗಿ-ದೌಂಡ್ ವಾರಕ್ಕೆ 5 ದಿನಗಳು ಕಾಯ್ದಿರಿಸದ ವಿಶೇಷ ರೈಲುಗಳು (128…