ಕಲಬುರಗಿ: ಜೆಸ್ಕಾಂ ಕಚೇರಿಗೆ ಮೊಸಳೆ ತಂದು ರೈತರ ಅಕ್ರೋಶ!
ಕಲಬುರಗಿ, ಫೆಬ್ರವರಿ 21: ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗರೂರ್ ಬಿ ಗ್ರಾಮದದಲ್ಲಿ ಮೊಸಳೆ ಕಾಟದಿಂದ ಬೇಸತ್ತ ಜನ ಮೊಸಳೆಯನ್ನು ಸೆರೆಹಿಡಿದುಕೊಂಡು ಬಂದು ಜೆಸ್ಕಾಂ ಕಚೇರಿಗೆ ತಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ಮೊಸಳೆ ಕಾಟಕ್ಕೂ ಜೆಸ್ಕಾಂ ಕಚೇರಿಗೂ ಏನು ಸಂಬಂಧ ಅಂದುಕೊಂಡಿರಾ? ಈ ಗರೂರ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಭೀಮಾ ನದಿ ಪಾತ್ರದ ಜಮೀನುಗಳಿಗೆ ನಸುಕಿನ ಜಾವ 4 ಗಂಟೆ ಸುಮಾರಿಗೆ ಮಾತ್ರ ಜೆಸ್ಕಾಂ ತ್ರೀ ಫೇಸ್ ಕರೇಂಟ್ ಸಪ್ಲೈ ಮಾಡುತ್ತಿದೆ. ಇದರಿಂದಾಗಿ ಅವರು ಕೃಷಿ ಜಮೀನಿಗೆ…