ಉದ್ಯೋಗ ಮೇಳ:189 ಜನರಿಗೆ ಸ್ಥಳದಲ್ಲಿ ನೇಮಕಾತಿ ಆದೇಶ ವಿತರಣೆ
ಕಲಬುರಗಿ,ಫೆ.19:ಇಲ್ಲಿನ ತಾಲೂಕ ಆವರಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ 189 ಜನರಿಗೆ ಸ್ಥಳದಲ್ಲಿಯೇ ನೇಮಕಾತಿ ಆದೇಶ ನೀಡಲಾಯಿತು. ಕಲಬುರಗಿ, ಬೆಂಗಳೂರು, ಹೈದ್ರಾಬಾದ, ಪುಣೆಯ ಉದ್ಯೋಗ ನೀಡುವ ಸುಮಾರು 30 ಕಂಪನಿಗಳು ಉದ್ಯೋಗ ಮೇಳ ದಲ್ಲಿ ಭಾಗವಹಿಸಿದ್ದು, ಸುಮಾರು 1,349 ಉದ್ಯೋಗಾಕಾಂಕ್ಷಿಗಳು ಭಾಗಿಯಾಗಿದ್ದರು. ಸ್ಥಳದಲ್ಲಿಯೇ 189 ಜನರು ನೇಮಕವಾಗಿದ್ದು, ಉಳಿದಂತೆ 300 ಅಭ್ಯರ್ಥಿಗಳನ್ನು ಕಂಪನಿಗಳು ಶಾರ್ಟ್ ಲಿಸ್ಟ್ ಮಾಡಿದ್ದು, ಮುಂದೆ ಅವರನ್ನು ಸಂಪರ್ಕಿಸಿ ಅಂತಿಮ ಹಂತದ ಸಂದರ್ಶನ ನಡೆಸಿ ನೇಮಕಾತಿ ಮಾಡಲಾಗುವುದೆಂದು ತಿಳಿಸಿದರು. ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ…