ಕಲಬುರಗಿ: ಅಕ್ರಮ ಗಾಂಜಾ ಸಾಗಾಟ; 45 ಲಕ್ಷ ರೂ. ಮೌಲ್ಯದ ಸೊತ್ತು ಸಹಿತ ಇಬ್ಬರ ಬಂಧನ

ಕಲಬುರಗಿ: ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಸುಮಾರು 45.50 ಲಕ್ಷ ರೂ. ಮೌಲ್ಯ ಸೊತ್ತನ್ನು ಕಾಳಗಿ ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ಷ್ಮಣ್ ನಾಯಕ ತಾಂಡ ನಿವಾಸಿ ಚಂದ್ರಕಾಂತ ಪಪ್ಪು ಹರಿಶ್ಚಂದ್ರ ಚವ್ಹಾಣ್ (40), ಕೊಡ್ಲಿ ಗ್ರಾಮದ ಮಲ್ಲಯ್ಯ ಮಹಾಬಲೇಶ್ವರ ಪ್ಯಾಟಿನಮನಿ ಬಂಧಿತ ಆರೋಪಿಗಳು. ಕೊಡ್ಲಿ ಗ್ರಾಮಕ್ಕೆ ಹೊಂದಿಕೊಂಡಿರುವ ಲಕ್ಷ್ಮಣ ನಾಯಕ ತಾಂಡದ ಹತ್ತಿರ ಕಾರಿನಲ್ಲಿ  ಗಾಂಜಾ ಸಾಗಾಣಿಕೆ ಮಾಡುತ್ತಿದ್ದಇವರಿಂದ ಪೊಲೀಸರು 40 ಲಕ್ಷ ಮೌಲ್ಯದ ಗಾಂಜಾ, ಒಂದು ಕಾರು, ಬೈಕ್ ಜಪ್ತಿ ಮಾಡಿಕೊಂಡಿದ್ದಾರೆ…