ಕಲಬುರಗಿ,21.ಮಾ.25.-ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಲ್ಲಿ 2025-26ನೇ ಸಾಲಿಗೆ ಹೊರಗುತ್ತಿಗೆ ಆಧಾರದ ಮೇಲೆ ಓರ್ವ ಕಂಪ್ಯೂಟರ್ ಪ್ರೋಗ್ರಾಮರ್ ಹಾಗೂ ಓರ್ವ ವಾಹನ ಚಾಲಕ ಹುದ್ದೆಗೆ ನೇಮಕ ಮಾಡಿಕೊಳ್ಳಲು ಟೆಂಡರ್ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯ ಸಹ ನಿರ್ದೇಶಕರು (ಆಡಳಿತ) ಅವರು ತಿಳಿಸಿದ್ದಾರೆ. ಟೆಂಡರ್ ಒಪ್ಪಂದದ ಅವಧಿಯು ದಿನಾಂಕ: 01-04-2025 ರಿಂದ 31-03-2026 ರವರೆಗೆ ಇದ್ದು, ಈಗಾಗಲೇ ಮಾರ್ಚ್ 20 ರಿಂದ ಇ-ಟೆಂಡರ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಟೆಂಡರ್ ದಾಖಲೆ ಸಲ್ಲಿಸಲು ಕೊನೆಯ ದಿನ ಮಾರ್ಚ್ 28 ರ ಸಂಜೆ 4 ಗಂಟೆಯವರೆಗೆ ಇರುತ್ತದೆ. ಮಾರ್ಚ್ 29 ರಂದು ಸಂಜೆ 4 ಗಂಟೆಗೆ ತಾಂತ್ರಿಕ ಟೆಂಡರ್ ಬಿಡ್ ಹಾಗೂ ಏಪ್ರಿಲ್ 1 ರಂದು ಸಂಜೆ 4 ಗಂಟೆಗೆ ಆರ್ಥಿಕ ಬಿಡ್‌ನ್ನು ತೆರೆಯಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಹ ನಿರ್ದೇಶಕರು (ಆಡಳಿತ), ಅಪರ ಆಯುಕ್ತರ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಐವಾನ್ ಶಾಹಿ ಬಡಾವಣೆ ಕಲಬುರಗಿ ವಿಳಾಸಕ್ಕೆ ಸಂಪರ್ಕಿಸಲು ಕೋರಲಾಗಿದೆ.







Users Today : 1
Users Yesterday : 3
Users Last 7 days : 38