August 4, 2025 9:59 am

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

Home » ಕಲಬುರಗಿ » ಸರ್ಕಾರಿ ಕಚೇರಿಗಳ ವಿದ್ಯುತ್ ಬಿಲ್ ಬಾಕಿ, ಗ್ರಾಹಕರ ಮೇಲೆ ಹೇರಲ್ಲ: ಆಯೋಗದ ಅಧ್ಯಕ್ಷ ಪಿ.ರವಿಕುಮಾರ ರೈತರಿಗೆ ಬೆಳಗಿನ ಜಾವ 4 ಗಂಟೆಗೆ ನೀಡುತ್ತಿರುವ ವಿದ್ಯುತ್‌ಗೆ ಸಮಯ ಬದಲಾಯಿಸುವಂತೆ ಮನವಿ

ಸರ್ಕಾರಿ ಕಚೇರಿಗಳ ವಿದ್ಯುತ್ ಬಿಲ್ ಬಾಕಿ, ಗ್ರಾಹಕರ ಮೇಲೆ ಹೇರಲ್ಲ: ಆಯೋಗದ ಅಧ್ಯಕ್ಷ ಪಿ.ರವಿಕುಮಾರ ರೈತರಿಗೆ ಬೆಳಗಿನ ಜಾವ 4 ಗಂಟೆಗೆ ನೀಡುತ್ತಿರುವ ವಿದ್ಯುತ್‌ಗೆ ಸಮಯ ಬದಲಾಯಿಸುವಂತೆ ಮನವಿ

ಕಲಬುರಗಿ, ಫೆ.24, 2025 ನೇ ಸಾಲಿನ ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯ (ಜೆಸ್ಕಾಂ) ವ್ಯವಸ್ಥಾಪಕ ನಿದೇರ್ಶಕರಾದ ರವಿಂದ್ರ ಕರಲಿಂಗಣ್ಣವರ್ ಅವರು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಅಧ್ಯಕ್ಷ ಪಿ. ರವಿಕುಮಾರ ರವಿಕುಮಾರ್ ಅವರಿಗೆ ಸಲ್ಲಿಸಿದ ದರ ಪ್ರಸ್ತಾವನೆಯನ್ನು ಅನುಮೋದಿಸಿ ಪರಿಷ್ಕೃತ ದರ ನಿಗದಿ ಪಡಿಸಲು ಮನವಿ ಮಾಡಿದರು. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನಡೆಸಿದ, 2025-26 ರಿಂದ 2027-28ರ ಸಾಲಿನ ವಿದ್ಯುತ್ ದರ ಪರಿಷ್ಕರಣೆಗೆ ಸಾರ್ವಜನಿಕ ಅಹವಾಲುಗಳವಿಚಾರಣಾ ಸ¨s ೆಯಲ್ಲಿ ಜೆಸ್ಕಾಂ ಕುರಿತು ಮಾಹಿತಿ ತಿಳಿಸಿದ ಅವರು ಆರ್ಥಿಕ ವರ್ಷ 26,27,28 ರಲ್ಲಿ ಕಂದಾಯ ಕೊರತೆ ಕ್ರಮವಾಗಿ 624.58 ಕೋಟಿ, 465.20 ಕೋಟಿ ಮತ್ತು 802.67 ಕೋಟಿ ರೂ ಆಗಿರುತ್ತದೆ ಎಂದು ತಿಳಿಸಿದರು. ಇದನ್ನು ನಿವಾರಿಸಲು ಜೆಸ್ಕಾಂ ಏಕರೂಪವಲ್ಲದ ದರ ಪರಿಷ್ಕರಣೆ, ವಾಣಿಜ್ಯ ಮತ್ತು ಕೈಗಾರಿಕೆ ದರಗಳಲ್ಲಿನ ಕ್ರಾಸ್ ಸಬ್ಸಿಡಿ ಕರವನ್ನು ಕಡಿಮೆ ಮಾಡುವ ಉದ್ದೇಶದಿಂದ ಏಕರೂಪವಲ್ಲದ ದರ ಪರಿಷ್ಕರಣೆ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಎಲ್‌ಟಿ ಮತ್ತು ಎಚ್‌ಟಿ ಗ್ರಾಹಕರಿಗೆ ನಿಗದಿಪಡಿಸಿದ ಸ್ಥಿರ ಶುಲ್ಕದಲ್ಲಿ ಹೆಚ್ಚಳವನ್ನು ಮತ್ತು ವಿದ್ಯುತ್ ಬಳಕೆ ಶುಲ್ಕದಲ್ಲಿ ಇಳಿಕೆಯನ್ನು ಹಾಗೂ ಇತರೆ ಗ್ರಾಹಕರಿಗೆ ಸ್ಥಿರ ಶುಲ್ಕ ಮತ್ತು ದರ ಶುಲ್ಕದಲ್ಲಿನ ಅನುಪಾತವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಕಂದಾಯದ ಕೊರತೆಯ ಹೆಚ್ಚಿನ ಭಾಗಾಂಶವನ್ನು ಸ್ಥಿರ ಶುಲ್ಕ ಹೆಚ್ಚಳದಿಂದ ಹಾಗೂ ಕಡಿಮೆ ಭಾಗಾಂಶವನ್ನು ವಿದ್ಯುತ್ ಬಳಕೆ ಶುಲ್ಕದಿಂದ ಸರಿದೂಗಿಸಿ ವಸೂಲಾತಿ ಮಾಡಲು ಜೆಸ್ಕಾಂ ಉದ್ದೇಶಿಸಿದೆ ಎಂದು ತಿಳಿಸಿದರು. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಸದಸ್ಯರಾದ ಜಾವೆದ್ ಅಖ್ತರ್, ಹೆಚ್.ಕೆ.ಜಗದೀಶ, ಜೆಸ್ಕಾಂನ ತಾಂತ್ರಿಕ ನಿರ್ದೇಶಕರಾದ ಎನ್.ಆರ್.ಎಮ್. ನಾಗರಾಜನ್, ಮುಖ್ಯ ಇಂಜಿನಿಯರ್‌ರಾದ ವೆಂಕಟೇಶ ಪ್ರಸಾದ್ ಆರ್ಥಿಕ ಸಲಹೆಗಾರ ಸಂತೋಷ ಹಿಬಾರೆ ಹಾಗೂ ಗ್ರಾಹಕರು, ಜೆಸ್ಕಾಂ ಮತ್ತು ಕೆಪಿಟಿಸಿಎಲ್‌ನ ಅಧಿಕಾರಿಗಳು ಪಾಲ್ಗೊಂಡಿದ್ದರು.

ಗ್ರಾಹಕರ ಜತೆ ಸಂವಾದ:- ಸಾಮಾಜಿಕ ಕಾರ್ಯಕರ್ತ ದೀಪಕ ಗಾಲಾ ಮಾತನಾಡಿ, ಕಮಲಾಪುರ, ಕಂಪ್ಲಿ, ಲಿಂಗಸೂರು ಸೇರಿದಂತೆ ಕಲಬುರಗಿಯ 23 ಉಪ ವಿಭಾಗಗಳಲ್ಲಿ ಗ್ರಾಹಕರ ಸಂವಾದ ಮಾಡುತ್ತಿಲ್ಲ, ರಾಯಚೂರು ನಗರದ ಮುನಿರ್‌ವಾಡಿ ಮತ್ತು ದೇವಿನಗರ ಫೀಡರ್‌ಗಳಲ್ಲಿ ಪ್ರತಿ ವರ್ಷ 18 ರಿಂದ 19 % ನಷ್ಟವಾಗುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು? ಹಾಗೂ ಸೇಫ್ಟೀ ಆಫೀಸರ್ ನೇಮಕ ಮಾಡಬೇಕು ಮತ್ತು ಸಿಬ್ಬಂದಿಗೆ ಸುರಕ್ಷತೆ ತರಬೇತಿ ನೀಡಬೇಕು ಎಂದರು. ಶುಭಾಷ ಚಾಂದರ್ ಮಾತನಾಡಿ,ಗಂಗಾ ಕಲ್ಯಾಣ ಯೋಜನೆ ಅಡಿಯ ಲೈನ್‌ನ್ನು ಕಳ್ಳತನ ಮಾಡಿದ್ದು ಮತ್ತೆ ಹಾಕಲು ಅರ್ಜಿ ಸಲ್ಲಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ ಅದಕ್ಕೆ ಪ್ರತ್ರಿಕ್ರಿಯಿಸಿದ ಅಧಿಕಾರಿಗಳು ಒಂದು ವಾರದಲ್ಲಿ ಮಾಡಿಕೊಡುವುದಾಗಿ ತಿಳಿಸಿದರು. ದರ ಪರಿಷ್ಕರಣೆ ಹೆಚ್ಚಿಸುವ ಕುರಿತು ಎಂ.ಡಿ. ಅವರು ಹೇಳಿದರು, ಆದರೆ ಗ್ರಾಹಕರು ತಮ್ಮ ಹೋಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿರುವಾಗ ದರ ಹೆಚ್ಚಿಸುವವುದು ಸಮಂಜಸವಲ್ಲ. ಸರ್ಕಾರಿ ಇಲಾಖೆಗಳಿಂದ ಬರುವ ಬಾಕಿಯನ್ನು ಜನರ ಮೇಲೆ ಹೇರುತ್ತಿರುವ ಹಾಗೇ ಕಾಣಿಸುತ್ತಿದೆ. ಎಸ್.ಹೆಚ್. ಶರ್ಮಾ, ವಿದ್ಯುತ್ ಬಳಕೆದಾರ ಸಂಘ, ಕಲಬುರಗಿ ಉತ ್ತರ: ಈ ಹೊರೆಯನ್ನು ಗ್ರಾಹಕರ ಮೇಲೆ ಹಾಕಲು ನಾವು ಬೀಡುವುದಿಲ್ಲ ಎಂದು ಕೆಇಆರ್ ಸಿ ಅಧ್ಯಕ್ಷರು ತಿಳಿಸಿದರು. ಕೆಎಎಸ್‌ಎಸ್‌ಐಎ ಚಲುಬಸಯ್ಯ ಮಾತನಾಡಿ, ರೈತರಿಗೆ ಬೆಳಗ್ಗೆ 4 ಗಂಟೆಗೆ ವಿದ್ಯುತ್ ನೀಡುವುದರಿಂದ ಹಲವಾರೂ ತೊಂದರೆಗಳು ಎದುರಾಗಿತ್ತಿವೆ. ಸಮಯದಲ್ಲಿ ಬದಲಾವಣೆ ತಂದು ಬೆಳಗ್ಗೆ 5-6 ಗಂಟೆಗೆ ನೀಡಿ. ಜೆಸ್ಕಾಂ ಎಂ.ಡಿ. ಮಾತನಾಡಿ,1120 ಐಪಿ ಫೀಡರ್‌ಗಳಿದ್ದು ಅವುಗಳಲ್ಲಿ 184 ಫೀಡರ್‌ಗಳಲ್ಲಿ ಮಾತ್ರ 4 ರಿಂದ 11 ಗಂಟೆ ವಿದ್ಯುತ್ ನೀಡಲಾಗುತ್ತಿದೆ. ಉಳಿದ ಫೀಡರ್‌ಗಳಲ್ಲಿ 9 ಮತ್ತು 6 ಗಂಟೆಗೆ ನೀಡಲಾಗುತ್ತಿದೆ ಮುಂದಿನ ದಿನಗಳಲ್ಲಿ 4 ಗಂಟೆಗೆ ನೀಡುತ್ತಿರುವ ವಿದ್ಯುತ್ ಸರಬರಾಜು ಸಮಯವನ್ನು ಬದಲಾವಣೆ ಮಾಡುವುದಾಗಿ ತಿಳಿಸಿದರು. ಜಂಬಗಾ 33ಕೆ.ವಿ ಕಲ್ಲಹಂಗರಗಾ ಉಪಕೇಂದ್ರದಿAದ 30 ಹಳ್ಳಿಗಳಿಗೆ ವಿದ್ಯುತ್ ಸರಬರಾಜಾಗುತ್ತಿದ್ದು, 110 ಕೆ.ವಿ ಉಪಕೇಂದ್ರ ಮಾಡಬೇಕು ಮತ್ತು ರೈತರ ಟಿಸಿಗಳು ಸುಟ್ಟರೆ ಬೇಗನೆ ಕ್ರಮ ಕೈಗೊಳ್ಳಬೇಕು. ಪರಮೇಶ್ವರ ಕಲಬುರಗಿ ಉತ್ತರ: ಈ ಕುರಿತು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಜೆಸ್ಕಾಂ ಅಧಿಕಾರಿಳಿಗೆ ಕೆಇಆರ್ ಸಿ ಅಧ್ಯಕ್ಷರಾದ ರವಿಕುಮಾರ್ ಅವರು ಸೂಚಿಸಿದರು. 

Share This Article

Facebook
X
WhatsApp
Telegram

Leave a Reply

Your email address will not be published. Required fields are marked *

Cricket Live

Stock Market

Astrology

Gold & Silver Price