ಚಿತ್ತಾಪುರ ತಾಲೂಕಿನ ಹೆಬ್ಬಾಳದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಶಾಖಾವತಿಯಿಂದ ಕೋರವಾರದ ಶ್ರೀ ಅಣವೀರಭದ್ರೇಶ್ವರ ದೇವಸ್ಥಾನಕ್ಕೆ ಕಾಣಿಕೆ ಹುಂಡಿ ಪೆಟ್ಟಿಗೆ ದೇಣಿಗೆ ನೀಡಲಾಯಿತು. ಪ್ರಧಾನ ಅರ್ಚಕ ಶ್ರೀ ಧನಂಜಯ್ಯಸ್ವಾಮಿ, ಮಾಜಿ ಶಾಸಕ ವಿಶ್ವಾನಾಥ ಪಾಟೀಲ್ ಹೆಬ್ಬಾಳ, ಕೆಜಿಬಿ ಬ್ಯಾಂAಕ್‌ನ ಯಾದಗಿರಿ ವಲಯದ ಪ್ರಾದೇಶಿಕ ವ್ಯವಸ್ಥಾಪಕ ಗುರುಪಾದಸ್ವಾಮಿ ಕೋಡ್ಲಿ ಇತರರು ಇದ್ದರು.)
ಹೆಬ್ಬಾಳ ಶಾಖೆಯಿಂದ ಕೋರವಾರ ಅಣವೀರಭದ್ರೇಶ್ವರ ದೇವಸ್ಥಾನಕ್ಕೆ ಹುಂಡಿ ಪೆಟ್ಟಿಗೆ ದೇಣಿಗೆ
ಕರ್ನಾಟಕ ಗ್ರಾಮೀಣ ಬ್ಯಾಂಕ್ ಗ್ರಾಹಕರಿಗೆ ಸೇವೆ ನೀಡಲು ಸದಾ ಬದ್ಧ ; ಆರ್.ಎಂ. ಸ್ವಾಮಿ
ಯಾದಗಿರಿ : ಕರ್ನಾಟಕ ಗ್ರಾಮೀಣ ಬ್ಯಾಂಕ್ ರೈತರಿಗೆ, ವ್ಯಾಪಾರಸ್ಥರಿಗೆ, ಗ್ರಾಹಕರಿಗೆ ಬ್ಯಾಂಕ್‌ನ ಸಿಬ್ಬಂದಿ ವರ್ಗ ಉತ್ತಮ ಸೇವೆ ನೀಡಲು ಸದಾ ಬದ್ಧರಾಗಿದ್ದಾರೆ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಯಾದಗಿರಿ ವಲಯದ ಪ್ರಾದೇಶಿಕ ವ್ಯವಸ್ಥಾಪಕ ಶ್ರೀ ಗುರುಪಾದ ಸ್ವಾಮಿ ಕೋಡ್ಲಿ ಹೇಳಿದರು. ಅವರು ಯಾದಗಿರಿ ವಲಯದ ವ್ಯಾಪ್ತಿಯ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹೆಬ್ಬಾಳದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಶಾಖಾವತಿಯಿಂದ ಕೋರವಾರ ಗ್ರಾಮದ ಶ್ರೀ ಅಣವೀರಭದ್ರೇಶ್ವರ ದೇವಸ್ಥಾನಕ್ಕೆ ಕಾಣಿಕೆ ಹುಂಡಿ ಪೆಟ್ಟಿಗೆ ದೇಣಿಗೆಯಾಗಿ ವಿತರಿಸಿ ಮಾತನಾಡಿದರು. ಈ ಭಾಗದಲ್ಲಿ ಪ್ರಸಿದ್ಧ ಅಸಂಖ್ಯಾತ ಭಕ್ತರ ಆರಾಧ್ಯ ದೇವಸ್ಥಾನವಾಗಿದೆ. ಭಕ್ತರು ಕಾಣಿಕೆ ಹುಂಡಿ ಪೆಟ್ಟಿಗೆಯನ್ನು ಕೆಜಿಬಿ ಬ್ಯಾಂಕ್‌ನ ಹೆಬ್ಬಾಳ ಶಾಖಾವತಿಯಿಂದ ದೇಣಿಯಾಗಿ ನೀಡಲಾಗಿದೆ. ದೇವಸ್ಥಾನದ ಬ್ಯಾಂಕ್ ಖಾತೆಗೆ ಭಕ್ತರು ಕ್ಯೂರ್ ಕೋಡ್ ಯುಪಿಆಯ್ ಬಳಸುವ ಮೂಲಕ ಸ್ಕಾö್ಯನ್ ಮುಖಾಂತರ ಭಕ್ತರು ದೇಣಿಗೆ ಹಣ ಪಾವತಿಸಲು ಬ್ಯಾಂಕ್‌ನ ಹೆಬ್ಬಾಳ ಶಾಖೆ ಇ-ಹುಂಡಿ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಸಮಿತಿಯವರು ಹಾಗೂ ಭಕ್ತರು ಹುಂಡಿ ಪೆಟ್ಟಿಗೆ ಹಾಗೂ ಡಿಜಿಟಲ್ ಕ್ಯೂರ್ ಕೋಡ್ ಮೂಲಕ ಭಕ್ತರು ಹಣ ದೇಣಿಗೆ ಸಂದಾಯ ಮಾಡಬಹುದು. ಇದರ ಸದುಪಯೋಗ ಮಾಡಿಕೋಳ್ಳಬೇಕು ಎಂದರು. ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ ಮಾತನಾಡಿ, ಕೆಜಿಬಿ ಶಾಖೆವತಿಯಿಂದ ದೇವಸ್ಥಾನಕ್ಕೆ ಹುಂಡಿ ಪೆಟ್ಟಿಗೆ ದೇಣಿಗೆ ಹಾಗೂ ಕ್ಯೂರ್ ಯುಪಿಆಯ್ ಸ್ಕಾö್ಯನ್ ಮೂಲಕ ನೇರವಾಗಿ ದೇವಸ್ಥಾನದ ಬ್ಯಾಂಕ್ ಖಾತೆಯನ್ನು ಭಕ್ತರಿಗೆ ಬ್ಯಾಂಕಿನ ಅಧಿಕಾರಿಗಳು ಮಾಡಿದ್ದಾರೆ. ಕೆಜಿಬಿ ಬ್ಯಾಂಕ್‌ನ ಶಾಖೆ ಮತ್ತಷ್ಟೋ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲಿ, ರೈತರು, ಗ್ರಾಹಕರು, ವ್ಯಾಪಾರಸ್ಥರು ಬ್ಯಾಂಕ್‌ನ ನೆರವು ಪಡೆದುಕೊಂಡು ಆರ್ಥಿಕವಾಗಿ ಕುಟುಂಬಗಳು ಅಭಿವೃದ್ಧಿಯಾಗಲಿ ಎಂದು ಹೇಳಿದರು. ಶ್ರೀ ಅಣವೀರಭದ್ರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಧನಂಜಯ್ಯ ಸ್ವಾಮಿ, ಗ್ರೇಡ್-2 ತಹಸೀಲ್ದಾರ ಶ್ರೀಮತಿ ರಾಜೇಶ್ವರಿ ಹಾಗೂ ಗ್ರಾಮದ ಮುಖಂಡ ಬಸವರಾಜ್ ಶಿವಗೋಳ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಹೆಬ್ಬಾಳ ಶಾಖೆಯ ಗ್ರಾಹಕರು, ರೈತರು, ಶ್ರೀ ಅಣವೀರಭಧ್ರೇಶ್ವರ ದೇವಸ್ಥಾನದ ಸಮಿತಿ ಸದಸ್ಯರು, ಭಕ್ತರು ಇತರರು ಭಾಗವಹಿಸಿದ್ದರು. ಬಾಪೂರಾವ್ ಸುಬೇದಾರ್ ನಿರೂಪಿಸಿದರು. ಕೆಜಿಬಿ ಹೆಬ್ಬಾಳ ಶಾಖೆಯ ಶಾಖಾಧಿಕಾರಿ ಶ್ರೀಮತಿ ಜ್ಯೋತಿ ವಾಲಿಶೆಟ್ಟಿ ಸ್ವಾಗತಿಸಿದರು. ಶ್ರೀಮತಿ ಇಂದಿರಾ ಸರಾಫ್ ವಂದಿಸಿದರು.
