ಮಕ್ಕಳಿಗೆ ಪ್ರಯೋಗಗಳ ಮೂಲಕ ವಿಜ್ಞಾನ ಕಲಿಕೆ ಅತಿ ಪರಿಣಾಮಕಾರಿಯಾಗಿದೆ ಎಂದು ತಾಲ್ಲೂಕಿನ ಚೆಪೇಟ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ. ಮುಖ್ಯ ಶಿಕ್ಷಕರಾದ ಮಲ್ಲಿಕಾರ್ಜುನ ಸೇಡಂಕಾರ್ ಅಭಿಪ್ರಾಯಪಟ್ಟರು. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಆಶ್ರಯದಲ್ಲಿ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಪ್ರಯೋಗಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು ಒಬ್ಬ ಮನುಷ್ಯ ಹುಟ್ಟಿದಾಗಿನಿಂದ ಸಾಯುವರೆಗೂ ವಿಜ್ಞಾನವನ್ನು ಅವಲಂಬಿಸಿರುತ್ತಾನೆ. ಈಗಿನ ಪೀಳಿಗೆಯ ಮಕ್ಕಳಿಗೆ ಸುಲಭ ಕಲಿಕೆಗೆ ವೈಜ್ಞಾನಿಕ ಅಂಶಗಳ ಬೆಳವಣಿಗೆಗೆ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಪ್ರಯೋಗಗಳು ಅತ್ಯವಶ್ಯಕ ಎಂದು ತಿಳಿಸಿದರು. ವಿಜ್ಞಾನ ಇಂದು ಜೀವನದಲ್ಲಿ ಅತಿ ಮುಖ್ಯವಾಗಿದೆ ವಿಜ್ಞಾನವಿಲ್ಲದೇ ಬದುಕೇ ಇಲ್ಲ ಎಂದ ಅವರು, ಮನೆಯಲ್ಲಿ ಅಡುಗೆ ಮಾಡುವುದರಿಂದ ವಿಮಾನ ತಯಾರಿಕೆಯವರೆಗೂ ವಿಜ್ಞಾನದ ನೆರವು ಅಗತ್ಯವಿದೆ, ದೇಶದ ಸ್ವಾಭಿಮಾನದ ಸಂಕೇತವಾದ ನಮ್ಮ ಸೇನೆಯ ಶಕ್ತಿ ಹೆಚ್ಚಳ, ಯುದ್ದೋಪಕರಗಳ ತಯಾರಿಕೆ ಎಲ್ಲಕ್ಕೂ ವಿಜ್ಞಾನವೇ ಆಧಾರ ಎಂದರು. ಭಾರತ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದೆ, ಇತ್ತೀಚೆಗೆ ನಮ್ಮ ಇಸ್ರೋ ಸಂಸ್ಥೆ ಚಂದ್ರನಲ್ಲಿಗೆ ರಾಕೇಟ್ ಕಳುಹಿಸುವ ಮೂಲಕ ವಿಶ್ವದ ಇಂತಹ ಸಾಧನೆಗಳನ್ನು ಮಾಡಿದ ರಾಷ್ಟ್ರಗಳ ಪಟ್ಟಿಗೆ ಸೇರಿದೆ ಎಂದ ಅವರು, ವಿಜ್ಞಾನ ಕಷ್ಟವದಲ್ಲಿ ನೀವು ಇಷ್ಟಪಟ್ಟು ಕಲಿಯುವ ಪ್ರಯತ್ನ ಮಾಡಬೇಕು ಎಂದರು.
ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದ ಸಯೋಜಕರಾದ ನಾಗೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅಂಶಗಳ ಬೆಳವಣಿಗೆಗೆ ವಿಜ್ಞಾನ ವಸ್ತು ಪ್ರದರ್ಶನಗಳು ಮತ್ತು ಚಟುವಟಿಕೆಗಳು ಸಹಕಾರಿಯಾಗಲಿದೆ. ಅಗಸ್ತ್ಯ ಫೌಂಡೇಷನ್ ಸಂಸ್ಥೆ ಸರ್ಕಾರಿ ಶಾಲೆಗಳಮಕ್ಕಳಿಗೆ ವಿಜ್ಞಾನ ಪ್ರಯೋಗಗಳನ್ನು ಪ್ರದರ್ಶಿಸುವ ಮೂಲಕ ಅವರಿಗೆ ವಿಜ್ಞಾನದ ಕಲಿಕೆಗೆ ಆಸಕ್ತಿ ಹೆಚ್ಚಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಅಗಸ್ತ್ಯ ಫೌಂಡೇಷನ್ ಸರ್ಕಾರಿ ಶಾಲೆಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಂಡು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಿಸುವಲ್ಲಿ ಶ್ರಮಿಸುತ್ತಿದ್ದು, ವಿಜ್ಞಾನ ಬಸ್ಸಿನ ಮೂಲಕ ಶಾಲೆಯ ಬಾಗಿಲಿಗೆ ಬಂದು ನಾವು ಪ್ರಯೋಗಗಳ ಮೂಲಕ ಅರಿವು ನೀಡಲು ಸಿದ್ದರಿದ್ದು, ಸರ್ಕಾರಿ ಶಾಲೆಗಳಲ್ಲಿ ನಮಗೆ ಅವಕಾಶ ಕಲ್ಪಿಸುವ ಮೂಲಕ ಮಕ್ಕಳ ಕಲಿಕೆಗೆ ನಾವು ನಡೆಸುತ್ತಿರುವ ಪ್ರಯತ್ನಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ವಿಜ್ಞಾನ ವಸ್ತುಪ್ರದರ್ಶನವನ್ನು ಪ್ರಾಥಮಿಕ ಶಾಲೆಯ ಸುಮಾರು 100 ಮಕ್ಕಳು ವೀಕ್ಷಿಸಿದ್ದು, ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ಮಾದರಿಗಳನ್ನು ಇಡಲಾಗಿತ್ತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಥಿತಿಗಳಾಗಿ ಶಿವಾರೆಡ್ಡಿ ದೈಹಿಕ ಶಿಕ್ಷರು ಎಸ್ ಡಿ ಎಂಸಿ ಸದಸ್ಯರು ಗಳಾದ ಚಂದ್ರಕಾಲ ಹಾಗೂ ಸಿದ್ದಲಿಂಗಪ್ಪ
ವಿಜ್ಞಾನ ಸಂಘದ ಅಧ್ಯಕ್ಷ ಮಹೇಶ ಪ್ರಾಥಮಿಕ ಶಾಲಾ ಶಿಕ್ಷಕರಾದ ಸಂಜು, ವಿಶ್ವರಾಧ್ಯ , ವೆಂಕಟರೆಡ್ಡಿ,
ರಾಜೇಶ್ವರಿ, ಹೇಮಾವತಿ, ಯಂಕಟಮ್ಮ, ಪಾರ್ವತಮ್ಮ, ಅನೀತಾ, ಸೇರಿದಂತೆ ವಿಧ್ಯಾರ್ಥಿಗಳ ಪಾಲಕರು ಹಾಜರಿದ್ದರು.
