March 13, 2025 10:38 am

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

Home » ಕಲಬುರಗಿ » ರಸ್ತೆ,ಚರಂಡಿ, ಶೌಚಾಲಯಗಳು, ಉದ್ಯಾನವನ್ನ ದುರಸ್ಥಿಗೊಳಿಸಲು ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ಸಮರ್ಪಕವಾಗ ಬಳಸಿಕೊಳ್ಳಲಾಗುತ್ತದೆ.ಪಾಲಿಕೆ ಆಯುಕ್ತ ಅವಿನಾಶ ಶಿಂಧೆ

ರಸ್ತೆ,ಚರಂಡಿ, ಶೌಚಾಲಯಗಳು, ಉದ್ಯಾನವನ್ನ  ದುರಸ್ಥಿಗೊಳಿಸಲು ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ಸಮರ್ಪಕವಾಗ ಬಳಸಿಕೊಳ್ಳಲಾಗುತ್ತದೆ.ಪಾಲಿಕೆ ಆಯುಕ್ತ ಅವಿನಾಶ ಶಿಂಧೆ


ಕಲಬುರಗಿ,4.ಮಾ.24 : ರಸ್ತೆ ಚರಂಡಿಗಳು ಶೌಚಾಲಯಗಳು ಉದ್ಯಾನವನ್ನ ಬೋರವೆಲ್, ದುರಸ್ಥಿ ಮತ್ತು   ಸಾರ್ವಜನಿಕ ಸಮಸ್ಯೆಗಳ ಕುರಿತು ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರು ಹೇಳಿದರು.
ಬುಧುವಾರದಂದು ಟೌನ ಹಾಲಿನಲ್ಲಿ ಮುಂಗಡ ಪತ್ರ ತಯಾರಿಸುವ  ಪೂರ್ವ ಭಾವಿ ಸಭೆ  ಯಲ್ಲಿ ಅಧ್ಯಕ್ಷತೆ ವಹಿಸಿ  ಮಾತನಾಡಿ, ಬೀದಿ ನಾಯಿಗಳ ಹಾವಳಿ ತಡೆಯಲು  ಸಿಬ್ಬಂದಿ ಕಾರ್ಯಾಚರಣೆ ಮಾಡಿ ಸಾರ್ವಜನಿಕರಿಗೆ ಆಗುವ ಅನಾಹುತ ತಪ್ಪಿಸಲು ಕ್ರಮವಹಿಸುವುದು ಎಂದು ಹೇಳಿದರು.
ಸಿದ್ಧರಾಮಯ್ಯ ಹಿರೇಮಠ ಮಾತನಾಡಿ,   ಮಹಿಳೆಯರಿಗೆ ಶೌಚಾಲಯ ಇರುವುದಿಲ್ಲ, ನಗರದ ಹಸರೀಕರಣಗೊಳಿಸಬೇಕು ಸಾರ್ವಜನಿಕರಿಗೆ ಆಗುವ ಅನಾಹುತಗಳನ್ನು ತಪ್ಪಿಸಲು ಬೀದಿನಾಯಿಗಳ ಕಾರ್ಯಚರಣೆ ವಿಶೇಷ ಬಜೆಟ್ ಮೀಸಲಿಡಬೇಕು.

ಎರಡು ನೂರ ಇಪ್ಪತ್ತು ಗಾರ್ಡನಗಳನ್ನು ಅಭಿವೃದ್ಧಿಗೊಳಿಸಬೇಕು ಅನೇಕ ಜನರು ಗಾರ್ಡನನಲ್ಲಿ ಅಕ್ರಮಣ ಮಾಡುತ್ತಿದ್ದು ಅವರ ಮೇಲೆ ಕಾನೂನು ಕ್ರಮತೆಗದುಕೊಳ್ಳಲು ಸೂಚಿಸಿದರು.
ವಕೀಲರಾದ ಸಂಜೀವಕುಮಾರ ಮಾತನಾಡಿ, ಮಹಾನಗರ ಪಾಲಿಕೆಯು ಮಾಡಿದ ಅಭಿವೃದ್ಧಿ ಕಾರ್ಯಗಳ ವರದಿ ಕುರಿತು ಅಂಕಿ ಅಂಶಗಳ ಮಾಹಿತಿಯನ್ನು ಸಾರ್ವಜನಿಕರಿಗೆ   ನೀಡಬೇಕು ನಗರದ ಸಾರ್ವಜನಿಕ ಸ್ಥಳಗಳಲ್ಲಿ ಜಾಹೀರಾತುಗಳನ್ನು ಅಳವಡಿಸಲಾಗುತ್ತದೆ ಇದನ್ನು ತೆಗೆದು ಹಾಕಲು ಕ್ರಮಕೈಗೊಳ್ಳಬೇಕು ನಗರದ ಬಹುತೇಕ ಕಟ್ಟಡಗಳು ಸರ್ಕಾರಿ ಸ್ಥಳಗಳನ್ನು ಅತಿಕ್ರಮಣ ಮಾಡಿದ್ದಾರೆ. ವಾರ್ಡ ನಂ. 44 ರಲ್ಲಿ ಅತಿ ಹೆಚ್ಚು ನೀರು ಪೋಲಾಗುತ್ತಿದೆ  ಪೈಪ್ ಲೈನ್ ದುರಸ್ತಿಗೊಳಿಸಬೇಕೆಂದು ಮನೆಗಳ ಮುಂದೆ ಸರ್ಕಾರದ ರಸ್ತೆಗಳಲ್ಲಿ ಮನೆಕಟ್ಟವುದು, ಅಂಗಡಿಗಳು ಇಡುವುದು ಮತ್ತು ರಸೆÀ್ಗಗಳ ಮೇಲೆ ನೀರು ಪೋಲಾಗುತ್ತಿದ್ದು,  ಇದರ ಬಗ್ಗೆ ಕ್ರಮವಹಿಸಬೇಕು ಎಂದರು.
ಎಲ್.ಎನ್.ಟಿ. ಕಂಪನಿಯವರು ಕುಡಿಯುವ ನೀರಿನ ಪೈಪ್‌ಲೈನ್ ಜೋಡಿಸಲು ಸಾರ್ವಜನಿಕರ ಮಾಹಿತಿ ನೀಡದೆ ರಸ್ತೆಗಳನ್ನು ಅಗೆಯುತ್ತಿದ್ದಾರೆ ಇದರಿಂದ ಸವಾರರಿಗೆ ಅಪಘಾತಗಳು ಸಂಭವಿಸುತ್ತವೆ ಎಂದರು.
ಕಳೆದ ಬಾರಿ ನೀಡಿದ ಸಲಹೆ ಸೂಚನೆಗಳನ್ನು ಮತ್ತು ಅದಕ್ಕೆ ಅಭಿವೃದ್ಧಿ ಕಾರ್ಯಗಳಿಗೆ ಸಂಬAಧಪಟ್ಟ ವಿಷಯಗಳ ಕುರಿತು ಸಾರ್ವಜನಿಕರು ಆಯುಕ್ತರೊಂದಿಗೆ ಚರ್ಚಿಸಲಾಯಿತು. ಸಭೆಯಲ್ಲಿ  ನಗರ ಯೋಜನೆ ಚೇರಮನ್ ಮಹ್ಮದ್ ಅಜೀಮುದ್ದೀನ್, ಮುಖ್ಯಲೆಕ್ಕಾಧಿಕಾರಿ ಡಾ. ಸುನೀತ ರಮೇಶ ಕಟಕೆ ಸೇರಿದಂತೆ ಸ್ಥಳೀಯ ಕಲ್ಯಾಣ ಸಂಘ, ವ್ಯಾಪರ ನಡೆಸುವ ಸಂಘ ಸಂಸ್ಥೆಗಳು ಎನ್.ಜಿ.ಓ. ಸಂಘಗಳು, ಸಾರ್ವಜನಿಕರು ಭಾಗವಹಿಸಿದ್ದರು

Share This Article

Facebook
X
WhatsApp
Telegram

Leave a Reply

Your email address will not be published. Required fields are marked *

Cricket Live

Stock Market

Astrology

Gold & Silver Price