ಯಾದಗಿರಿ – ಶಹಾಪುರ ರಾಜ್ಯ ಹೆದ್ದಾರಿಯ ವಡಗೇರಾ ತಾಲೂಕಿನ ಗುಲಸರಂ ಕ್ರಾಸ್‌ನಲ್ಲಿ ಗುರುವಾರ ಸಂಜೆ ಬೀಸಿದ ಧೂಳು ಮಿಶ್ರಿತ ಭಾರೀ ಬಿರುಗಾಳಿ ಕಂಡು ಬಂದ ದೃಶ್ಯ.
ಸ್ವಲ್ಪ ಗಾಳಿ ಮಳೆ ಬೀಸಿದರೆ ಇಡೀ ರಾತ್ರಿ ವಿದ್ಯುತ್ ಕೈ ಕೋಡುವುದು ಗ್ಯಾರಂಟಿ……!
ಭಾರೀ ಬಿರುಗಾಳಿಗೆ ಕೈ ಕೊಟ್ಟ ಕರೆಂಟ್ ; ಎರಡು ದಿನ ಕತ್ತಲಲ್ಲಿ ಜನತೆ ಜಾಗರಣೆ
ಯಾದಗಿರಿ : ಜಿಲ್ಲೆಯಲ್ಲಿ ಬುಧವಾರ ಮತ್ತು ಗುರುವಾರ ಸಂಜೆ ಬೀಸಿದ ಧೂಳು ಮಿಶ್ರಿತ ಭಾರೀ ಬಿರುಗಾಳಿ, ಗುಡುಗು ಮಿಂಚು ಮಳೆ ಸುರಿಯಿತು. ಇದರಿಂದ ಜಿಲ್ಲೆಯ ವಿವಿಧ ತಾಲೂಕಿನ ನಾನಾ ಗ್ರಾಮಗಳಲ್ಲಿ ಎರಡು ದಿನಗಳ ಕಾಲ ರಾತ್ರಿ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಕಳೆದರು. ಹಗಲು ಹೊತ್ತಿನಲ್ಲೂ ಕೂಡ ಸುಮಾರು 10 ರಿಂದ 20 ಸಲ ವಿದ್ಯುತ್ ಕಣ್ಣಾ ಮುಚ್ಚಾಲೆ ನಡೆಸಿತು. ಇದರಿಂದ ಜನತೆ ತೀವೃ ತೊಂದರೆ ಅನುಭವಿಸಿದರು. ವಿದ್ಯುತ್ ಇಲ್ಲದೆ ರಾತ್ರಿ ಗುಡುಗು ಮಿಂಚು ಸಿಡಿಲಿನ ಅರ್ಭಟಗಳ ಮಧ್ಯೆ ಜನತೆ ಕಾಲ ಕಳೆದರು. ರಾತ್ರಿ ಸೊಳ್ಳೆಗಳ ಕಾಟದಿಂದ ತಾಲೂಕಿನ ಜನತೆ ಜಾಗರಣೆ ಮಾಡಿದರು. ಇವಾಗ ಅಲ್ಲಲ್ಲಿ ಮದುವೆಗಳು, ವಿವಿಧ ಧಾರ್ಮಿಕಗಳು ನಡೆದಿವೆ. ಅದರ ಮಧ್ಯೆ ವಿದ್ಯುತ್ ಕೈ ಕೊಟ್ಟಿದ್ದರಿಂದ ಜನತೆ ಎರಡು ದಿನಗಳ ಕಾಲ ಬುಧವಾರ ಮತ್ತು ಗುರುವಾರ ರಾತ್ರಿ ವಿದ್ಯುತ್ ಇಲ್ಲದೆ ಕಾಲ ಕಳೆಯುವಂತಾಯಿತು. ಒಟ್ಟಾರೆ ಸ್ವಲ್ಪ ಗಾಳಿ ಮಳೆ ಆರಂಭವಾದರೆ ಇಡೀ ರಾತ್ರಿ ವಿದ್ಯುತ್ ಕೈಕೋಡುವುದು ಗ್ಯಾರಂಟಿಯಾಗಿದೆ. ಇನ್ನೂ ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಯ ಮೇಲೆ ಧೂಳು ಮಿಶ್ರಿತ ಭಾರೀ ಬಿರುಗಾಳಿ ಮಧ್ಯೆ ವಾಹನ ಸವಾರರು ಸಂಚರಿಸುವoತಾಯಿತು.







Users Today : 0
Users Yesterday : 3
Users Last 7 days : 37