August 4, 2025 4:36 am

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

Home » ಸುದ್ದಿ » ಯಶಸ್ವಿಯಾಗಿ ನಡೆದ ಉಚಿತ ಆರೋಗ್ಯ ಶಿಬಿರ

ಯಶಸ್ವಿಯಾಗಿ ನಡೆದ ಉಚಿತ ಆರೋಗ್ಯ ಶಿಬಿರ

ಬಳ್ಳಾರಿ, ಮೇ. 24:ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಕರ್ನಾಟಕದ ಪ್ರತಿಷ್ಠಿತ, ಗೌರವನೀಯ,‌ ವಿಶ್ವಾಸಾರ್ಹ ಸಂಸ್ಥೆ ಆಗಿದ್ದು,‌ ಜನಸೇವೆಯ ಮೂಲಕ ವಿಶಿಷ್ಟವಾಗಿ ಗುರುತಿಸಿಕೊಳ್ಳುತ್ತಿದೆ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮತ್ತು ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಎಪಿಎಂಸಿ ಆವರಣದಲ್ಲಿ ಶನಿವಾರ ‌ಏರ್ಪಡಿಸಿದ್ದ ಉಚಿತ ಹೃದಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಿಡಿಸಿಸಿಐ ಅನ್ನು ಜನಮುಖಿ ಮಾಡಲು ಸಾಕಷ್ಟು ‌ಕ್ರಿಯಾಶೀಲ ಯೋಜನೆಗಳನ್ನು ಜಾರಿ‌ ಮಾಡಲಾಗುತ್ತಿದೆ. ವ್ಯಾಪಾರ – ವಾಣಿಜ್ಯ ಅಲ್ಲದೇ ಜನರೊಂದಿಗೆ ಗುರುತಿಸಿಕೊಳ್ಳಲು ಸಂಸ್ಥೆ ಉತ್ಸುಕವಾಗಿದೆ ಎಂದರು.

ಸಸಿಗೆ ನೀರುಣಿಸುವ ಮೂಲಕ ಆರೋಗ್ಯ ಶಿಬಿರವನ್ನು ಉದ್ಘಾಸಿದ ಬ್ರಿಮ್ಸ್ ನ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ಇಂದುಮತಿ ಅವರು, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಜನರ ಸೇವೆ ಮಾಡುತ್ತಿದೆ. ಬ್ರಿಮ್ಸ್ ಕೂಡ ಜನಸೇವೆ ಮಾಡಲು ಉತ್ಸುಕವಾಗಿದೆ. ಜನಸೇವೆ ಮಾಡುವುದು ಪುಣ್ಯದ ಕೆಲಸ. ಈ ಸೇವೆಯಲ್ಲಿ ಪರಿಣಿತ, ಅನುಭವಿ ವೈದ್ಯರು ಮತ್ತು ಸಿಬ್ನಂದಿಯು ಪಾಲ್ಗೊಂಡಿದೆ. ಬಿಡಿಸಿಸಿಐನ ಸೇವಾ ಮನೋಭಾವಕ್ಕೆ ಬ್ರಿಮ್ಸ್ ಸ್ಪಂದಿಸುತ್ತದೆ ಎಂದರು.

ಮುಖ್ಯ ಅತಿಥಿಗಳಾದ ಬ್ರಿಮ್ಸ್ ನ ಆಡಳಿತಾಧಿಕಾರಿ ಎಸ್.ಎನ್. ರುದ್ರೇಶ್ ಅವರು, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಸದಾಕಾಲ ಜನಸೇವೆಯಲ್ಲಿ ಮುಂದಿದೆ. ರೈತಣ್ಣನ ಊಟ, ರೈತಣ್ಣನ ಹಾಸಿಗೆ ಮತ್ತು ರೈತಣ್ಣನ ಕ್ಲಿನಿಕ್ ಮೂಲಕ ಸರ್ಕಾರ ಮಾಡುವ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಈ ಸಂಸ್ಥೆಯು ಅನೇಕರಿಗೆ ಸ್ಫೂರ್ತಿ ನೀಡಿದೆ. ಬ್ರಿಮ್ಸ್ ಅನ್ನು ಜನರ ಬಳಿಗೆ ಕರೆದುಕೊಂಡು ಬಂದಿದ್ದಕ್ಕಾಗಿ ಬಿಡಿಸಿಸಿಐಗೆ ಕೃತಜ್ಞತೆಗಳು ಎಂದರು.

ಅತಿಥಿಗಳಾದ ಹೃದಯತಜ್ಜ ಡಾ. ಎನ್‌. ಕೊಟ್ರೇಶ್ ಅವರು, ಇತ್ತೀಚಿನ ದಿನಗಳಲ್ಲಿ ಹೃದಯ, ಶುಗರ್, ಬಿಪಿ ಮತ್ತು ಕೊಲೆಸ್ಟರಾಲ್‌ ತಪಾಸಣೆಯನ್ನು ಆಗಾಗ್ಗೆ ತಪ್ಪದೇ ಮಾಡಿಕೊಳ್ಳಬೇಕಿದೆ. ಅನೇಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಬಿಡಿಸಿಸಿಐ ಏರ್ಪಡಿಸಿರುವ ಆರೋಗ್ಯ ಮೇಳ ಶ್ಲಾಘನೀಯ ಎಂದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.‌ ಮಹಾರುದ್ರಗೌಡರು, ಹಿರಿಯ ಉಪಾಧ್ಯಕ್ಷರಾದ ಅವ್ವಾರು ಮಂಜುನಾಥ್, ಉಪಾಧ್ಯಕ್ಷರಾದ ಎಸ್. ದೊಡ್ಡನಗೌಡ, ಖಜಾಂಚಿ ಪಿ. ಪಾಲಣ್ಣ, ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೇಡ್ ಮಲ್ಲಿಕಾರ್ಜುನ ಗೌಡ, ವಿ. ರಾಮಚಂದ್ರ ಮತ್ತು ರೈತಣ್ಣ ಕ್ಲಿನಿಕ್ ನ ಚೇರ್ಮನ್ ಸುರೇಂದ್ರ ಕುಮಾರ್ ಭಾಪ್ನಾ ಅವರು ವೇದಿಕೆಯಲ್ಲಿದ್ದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ‌. ಸುರೇಶಬಾಬು ಅವರು ವಂದನಾರ್ಪಣೆ ಸಲ್ಲಿಸಿದರು.

ಬ್ರಿಮ್ಸ್ ಮತ್ತು ಜಿಲ್ಲಾ ಆಸ್ಪತ್ರೆಯ ಪರಿಣಿತ ವೈದ್ಯರು ಮತ್ತು ಸಿಬ್ಬಂದಿ ಶಿಬಿರದಲ್ಲಿ ತಪಾಸಣೆ ‌ನಡೆಸೊದರು. ಶಿಬಿರದಲ್ಲಿ ೨೫೦ ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆಗೆ ಒಳಪಟ್ಟರು.

ಈ ಶಿಬಿರದಲ್ಲಿ ಬಿಡಿಸಿಡಿಐನ ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು, ಎಪಿಎಂಸಿಯ ವರ್ತಕರು,‌ ಹಮಾಲರು – ರೈತರು ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

Share This Article

Facebook
X
WhatsApp
Telegram

Leave a Reply

Your email address will not be published. Required fields are marked *

Cricket Live

Stock Market

Astrology

Gold & Silver Price