ಕಲಬುರಗಿ: ಕೆಲ ತಿಂಗಳುಗಳಿಂದ ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ಕೂಡಲೇ ಬಾಕಿ ಪಾವತಿಸಬೇಕೆಂದು ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ (ಜೆಸ್ಕಾಮ್) ಮನವಿ ಮಾಡಿದೆ.
ನಗರದ ಹಲವಾರು ಬಡಾವಣೆಗಳ ನೂರಾರು ಗ್ರಾಹಕರು ಕೆಲ ತಿಂಗಳುಗಳಿಂದ ಬಾಕಿಯಿರಿಸಿಕೊಂಡಿದ್ದು, ಅಂಥವರು ಪಾವತಿಸಬೇಕು. ಇಲ್ಲದಿದ್ದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂಥ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಜೆಸ್ಕಾಮ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾಕಲಬುರಗಿ ನಗರದ ಫರಾಚಾ ಹಾಲ್, ಮದಿನಾ ಕಾಲೊನಿ, ಖಮರ್ ಕಾಲೋನಿ, ಪೀರ್ ಬಂಗಾಲಿ ದರ್ಗಾ, ನೂರಾನಿ ಮೊಹಲ್ಲಾ, ಮಿಲ್ಲತನಗರ, ಬುಲಂದ ಪರ್ವೇಜ್ ಕಾಲೋನಿ, ಚಾಂದ್ ಬೀಬಿ ಬಿ.ಎಡ್ ಕಾಲೇಜ್, ಟಿಪ್ಪು ಸುಲ್ತಾನ್ ಕಾಲೇಜ್, ಇಸ್ಲಾಮಾಬಾದ ಕಾಲೋನಿ, ಸೈಯದ್ ಗಲ್ಲಿ, ರಾಮಜಿ ನಗರ, ಧನಗರದಲ್ಲಿ, ಟಿಪ್ಪಗ್ಸ್ ಹಕೀಂ ಹೌಸ್, ರಫೀಕ್ ಚೌಕ್, ಸಿದ್ದೇಶ್ವರ ಕಾಲೋನಿ, ಮೆಹತಾ ಲೇಔಟ್, ಲಕ್ಷ್ಮೀನಗರ, ವಿ.ಪಿ. ಲೇಔಟ್, ಓಂನಗರ, ಗಣೇಶ ನಗರ, ಕೆಎನ್‌ಝಡ್ ಫಂಕ್ಷನ್ ಹಾಲ್, ಬಾಖರ್ ಫಂಕ್ಷನ್ ಹಾಲ್,ಬಸವೇಶ್ವರ ಕಾಲೋನಿ, ಮನಸಬದಾ ಲೇಔಟ್, ಬಾರೇ ಹಿಲ್ಸ್, ಎಂ.ಜಿ. ರೋಡ್, ದರ್ಶನಾಪುರ ಲೇಔಟ್, ಸುಂದರ ನಗರ, ಬಾಪುನಗರ, ಗುಬ್ಬಿ ಕಾಲೋನಿ, ಪ್ರಗತಿ ಕಾಲೋನಿ, ಬಡೇಪುರ, ಬಡೇಪುರ ಕಾಲೋನಿ, ಕೆಎಚ್ ಬಿ ಕಾಂಪ್ಲೆಕ್ಸ್, ಸೋನಿಯಾ ಗಾಂಧಿ ಕಾಲೋನಿ, ಅಹಮದ್ ನಗರ, ಅಮನ್ ನಗರ್, ಗಂಜ್ ಬ್ಯಾಂಕ್ ಕಾಲೋನಿ, ಮಿಜಗುರಿ, ಹಜ್ ಕಮಿಟಿ, ಜವಾಹರ್ ಹಿಂದ್, ಒಸ್ಮಾನ್ ಸಹಾ ಏರಿಯಾ, ಬಿಲಾಲಾಬಾದ್. ಬಿಲಾಲಾಬಾದ್, ಇಸ್ಲಾಮಾಬಾದ್, ಮಿಲ್ಕ್ ಡೈರಿ ಹಿಂದುಗಡೆ, ಮಹಾಲಕ್ಷ್ಮೀ ಲೇಔಟ್, ಕೆಐಎಡಿಬಿ ಮೊದಲನೇ ಹಂತ, ಕಪನೂರ ಹರಿಜನವಾಡಾ, ಟೇಂಗಳ ಲೇಔಟ್, ಕೆಎಂಎಫ್ ಮಿಲ್ಕ್ ಡೈರಿ ಮುಂತಾದ ಪ್ರದೇಶಗಳಲ್ಲಿನ ಗ್ರಾಹಕರು ಬಾಕಿ ಇರಿಸಿಕೊಂಡಿದ್ದಾರೆ.
ಈ ಗ್ರಾಹಕರು ತಮ್ಮ ಬಿಲ್ ಬಾಕಿಯನ್ನು ನಿಗದಿತ ದಿನಾಂಕದಂದು ಆಥವಾ ಅದಕ್ಕೂ ಮೊದಲು ಪಾವತಿಸಲು ಕೋರಲಾಗಿದೆ.
ಒಂದು ತಿಂಗಳಿಗಿಂತ ಹೆಚ್ಚು ಕಾಲ ಬಾಕಿ ಪಾವತಿಸದ ಗ್ರಾಹಕರಿಗೆ ಸಂಪರ್ಕ ಕಡಿತಗೊಳಿಸುವ ನೋಟಿಸ್ ನೀಡಿ ನಂತರ ಸಂಪರ್ಕವನ್ನು ಕೊನೆಗೊಳಿಸಲಾಗುತ್ತದೆ.
ಆ ಬಳಿಕ 1976ರ ಬಾಕಿ ವಸೂಲಾತಿ ಕಾಯ್ದೆಯ ಕೆಇಆರ್‌ಸಿ ಸೆಕ್ಸನ್ 4ರ ಮಾನದಂಡಗಳ ಪ್ರಕಾರ ಫಾರ್ಮ್ ಎ ಮತ್ತು ಫಾರ್ಮ್ ಬಿ ನೀಡಲಾಗುತ್ತದೆ. ಅಲ್ಲದೇ ಸೆಕ್ಷನ್ ಆನ್ವಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೂ ಬಾಕಿ ವಸೂಲಾತಿ ಕಾಯ್ದೆ 1976ರ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಈ ಕಾಯ್ದೆಯು ಜೆಸ್ಕಾಮ್‌ಗೆ ಆಸ್ತಿ ಮುಟ್ಟುಗೋಲಿಗೆ ಅಧಿಕಾರ ನೀಡುತ್ತದೆ.
ಮೇ 31ರೊಳಗೆ ಬಿಲ್ ಬಾಕಿ ಮೊತ್ತ ಪಾವತಿಸದಿದ್ದರೆ ಅಂಥ ಗ್ರಾಹಕರ (ವೈಯಕ್ತಿಕ) ಹೆಸರು, ಆರ್ ಆರ್ ನಂ.. ಬಾಕಿ ಮೊತ್ತದ ವಿವರಗಳನ್ನು ಸುದ್ದಿಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದಲ್ಲದೇ 1976ರ ಬಾಕಿ ಮರುಪಾವತಿ ಕಾಯ್ದೆಯ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ.







Users Today : 0
Users Yesterday : 3
Users Last 7 days : 37