ಕಲಬುರಗಿ,ಮೇ.22.-ಕೇಂದ್ರ ರೈಲ್ವೆ ಸೋಲಾಪುರ ವಿಭಾಗದಿಂದ ಪ್ರಯಾಣಿಕರ ಬೇಡಿಕೆ ಹಾಗೂ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಕೇಂದ್ರ ರೈಲ್ವೆಯು ಸೋಲಾಪುರ ವಿಭಾಗದಿಂದ ಎಲ್.ಟಿ.ಟಿ. ಮುಂಬೈ-ರಾಯಚೂರು ಹಾಗೂ ರಾಯಚೂರು-ಪುಣೆ ಮಾರ್ಗಗಳಲ್ಲಿ ಒನ್ ವೇ ವಿಶೇಷ ರೈಲುಗಳು ಸಂಚರಿಸಲಿವೆ.
ಈ ವಿಶೇಷ ರೈಲುಗಳು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ.
ಎಲ್.ಟಿ.ಟಿ. (ಐಖಿಖಿ) ಮುಂಬೈ-ರಾಯಚೂರು ವಿಶೇಷ ರೈಲು (3 ಟ್ರಿಪ್‌ಗಳು). ರೈಲು ಸಂಖ್ಯೆ 01107 ವಿಶೇಷ ರೈಲು ಇದೇ ಮೇ 22 ಮತ್ತು ಮೇ 24 ರಂದು ಮಧ್ಯಾಹ್ನ 15.30ಕ್ಕೆ ಎಲ್.ಟಿ.ಟಿ. (ಐಖಿಖಿ) ಮುಂಬೈನಿAದ ಹೊರಟು ಮರುದಿನ ಬೆಳಿಗ್ಗೆ 05.30 ಕ್ಕೆ ರಾಯಚೂರು ತಲುಪಲಿದೆ. (2 ಟ್ರಿಪ್‌ಗಳು).
ರೈಲು ಸಂಖ್ಯೆ 01108 ಮೇ 23 ರಂದು ಮಧ್ಯಾಹ್ನ 15:00 ಗಂಟೆಗೆ ರಾಯಚೂರಿನಿಂದ ಹೊರಟು ಮರುದಿನ ಬೆಳಿಗ್ಗೆ 4 ಗಂಟೆಗೆ ಎಲ್‌ಟಿಟಿ ಮುಂಬೈಗೆ ಆಗಮಿಸಲಿದೆ. (1 ಟ್ರಿಪ್). ಈ ರೈಲು ಥಾಣೆ, ಕಲ್ಯಾಣ, ಲೋನಾವಾಲಾ, ಪುಣೆ, ದೌಂಡ್, ಕುರ್ದುವಾಡಿ, ಸೋಲಾಪುರ, ಕಲಬುರಗಿ, ವಾಡಿ, ನಾಲವಾರ, ಯಾದಗಿರಿ ಮತ್ತು ಕೃಷ್ಣ ಮೂಲಕ ಸಂಚರಿಸಲಿದೆ.
ರಾಯಚೂರು-ಪುಣೆ ಒನ್ ವೇ ಸ್ಪೇಷಲ್ (1 ಟ್ರಿಪ್): ರೈಲು ಸಂಖ್ಯೆ 01110 ಒನ್ ವೇ ಸ್ಪೆಷಲ್ ಮೇ 25 ರಂದು ಮಧ್ಯಾಹ್ನ 3 ಗಂಟೆಗೆ ರಾಯಚೂರಿನಿಂದ ಹೊರಟು ಮರುದಿನ ಬೆಳಿಗ್ಗೆ 12:25 (00:25) ಗಂಟೆಗೆ ಪುಣೆಗೆ ಆಗಮಿಸಲಿದೆ.(1 ಟ್ರಿಪ್) ಈ ರೈಲು ಕೃಷ್ಣ, ಯಾದಗಿರಿ, ನಾಲವಾರ, ವಾಡಿ, ಕಲಬುರಗಿ, ಸೋಲಾಪುರ, ಕುರ್ದುವಾಡಿ ಮತ್ತು ದೌಂಡ್ ಮೂಲಕ ಸಂಚರಿಸಲಿದೆ.
ರೈಲು ಟಿಕೇಟ್ ಬುಕಿಂಗ್ ಮತ್ತಿತರ ಹೆಚ್ಚಿನ ಮಾಹಿತಿಯನ್ನು www.irctc.co.in ವೆಬ್‌ಸೈಟ್ ಹಾಗೂ UTS ವ್ಯವಸ್ಥೆಯ ಮೂಲಕ, ಈ ವಿಶೇಷ ರೈಲುಗಳ ಸಮಯ ಮತ್ತು ನಿಲುಗಡೆಗಳಿಗಾಗಿ ಹೆಚ್ಚಿನ ಮಾಹಿತಿಗಾಗಿ www.enquiry.indianrail.gov.in ಗೆ ಭೇಟಿ ನೀಡಿ ಅಥವಾ NTES ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಪಡೆಯಬಹುದಾಗಿದೆ ಕೇಂದ್ರ ರೈಲ್ವೆ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.