ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾತೋಶ್ರೀ ತಾರಾದೇವಿ ರಾಂಪೂರೆ ಔಷದ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ಅಡಿಯಲ್ಲಿ ಎಂ ಫಾರ್ಮ್ ಮತ್ತು ಬಿ ಫಾರ್ಮ್ ವಿಧ್ಯಾರ್ಥಿಗಳಿಗೆ ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು.
ಈ ವಿಚಾರ ಸಂಕಿರಣದಲ್ಲಿ ವಿಯಾಟ್ರೀಸ್ ಲಿಮಿಟೆಡ್ ಕಂಪನಿಯ ಉಪಾಧ್ಯಕ್ಷರಾದ ಪ್ರಶಾಂತ್ ದೇಶಪಾಂಡೆಯವರು ಅತಿಥಿಗಳಾಗಿ ಭಾಗವಹಿಸಿದ್ದರು.ನಂತರ ಮಾತನಾಡಿ ಔಷಧಿಯ ಉದ್ಯಮದಲ್ಲಿನ ಇತ್ತಿಚಿಗೆ ಔಷಧಿ ವಿಧ್ಯಾರ್ಥಿಗಳಿಗೆ ಬಹಳಷ್ಟು ಅವಕಾಶಗಳು ಒದಗುತ್ತಿದ್ದು ಹೆಚ್ಚು ಹೆಚ್ಚು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಅವರು ಆಪ್ರಿಕಾ ದೇಶದದಲ್ಲಿ ವಿವಿಧ ಔಷಧೀಯ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಿದ ಬಗ್ಗೆ ತಮ್ಮ ಅಪಾರ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.ಇಥಿಯೋಪಿಯಾ ಮೂಲದ ಅರಬಿಂದೋ ಫಾರ್ಮ್ ಕಂಪನಿಯಲ್ಲಿ ಅನೇಕ ಅವಕಾಶಗಳು ದೊರೆತವು ನಂತರ ಉಗಾಂಡಾ ದೇಶದ ಐಪಿಸಿಎ ಲ್ಯಾಬ್ ನಲ್ಲಿ ವ್ಯವಸ್ಥಾಪಕ ಆಗುವ ಅವಕಾಶ ದೊರೆಯಿತು ಅಲ್ಲಿ ಕಾರ್ಯ ನಿರ್ವಹಿಸಿ ನಂತರ ರುವಾಂಡಾದಲ್ಲಿ ಗ್ಲಾಕ್ಸೋ ಸ್ಮೀತ್ ಕ್ಲೈನಲ್ಲಿ ಸೇವೆ ಸಲ್ಲಿಸಿದ ಬಗ್ಗೆ ವಿವರಿಸಿದರು ಹೀಗೆ ಇಂದು ಔಷಧಿ ವಿಜ್ಞಾನ ಪಡೆದ ವಿಧ್ಯಾರ್ಥಿಗಳಿಗೆ ದೇಶ ವಿದೇಶಗಳಲ್ಲಿ ಹೆಚ್ಚು ಹೆಚ್ಚು ಅವಕಾಶಗಳು ದೊರೆಯಲಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ ಪ್ರಕಾಶ್ ಸರಸಂಬಿ ವಹಿಸಿದ್ದರು. ಮೋಹನ್ ಜೋಶಿ, ಡಾ ರಘುನಂದನ್ ದೇಶಪಾಂಡೆ, ಶರಣಗೌಡ ಬಿರಾದಾರ ವೇದಿಕೆಯ ಮೇಲೆ ಉಪಸ್ಥಿತರಿದ್ದರು ಬಸವರಾಜ ಬೆಂಡೆಗುಂಬ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು
