June 17, 2025 8:21 am

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

Home » ಕಲಬುರಗಿ » ಬಾಲಕನ ಪೋಷಕರ ಪತ್ತೆಗೆ ಮನವಿ

ಬಾಲಕನ ಪೋಷಕರ ಪತ್ತೆಗೆ ಮನವಿ

ಕಲಬುರಗಿ,29.ಮಾ.25: ದಿನಾಂಕ:02-02-2025 ರಂದು 16 ವರ್ಷದ ಬಾಲಕನು ಮಕ್ಕಳ ಸಹಾಯವಾಣಿ-1098 ಮೂಲಕ ಕಲಬುರಗಿ ಸರ್ಕಾರಿ ಬಾಲಕರ ಬಾಲಮಂದಿರ ಸಂಸ್ಥೆಯಲ್ಲಿ ದಾಖಲಾಗಿದ್ದು, ಬಾಲಕನು ತನ್ನ ವಿಳಾಸ/ಕುಟುಂಬದ ಮಾಹಿತಿ ಸ್ಪಷ್ಟವಾಗಿ ತಿಳಿಸಿರುವದಿಲ್ಲ ಎಂದು ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿ ದ್ದಾರೆ.

ಈ ಬಾಲಕನು ತನ್ನ ಹೆಸರು ಕು.ದುರ್ಗೇಶ ಎಂದು ತಿಳಿಸಿದ್ದು, ಈ ಬಾಲಕನ ಪಾಲಕ ಪೋಷಕರು ಯಾರಾದರೂ ಇದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವೀಕ್ಷಣಾಲಯ ಕಟ್ಟಡದ ಮೊದಲನೇ ಮಹಡಿ, ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಎದುರುಗಡೆ, ಕಲಬುರಗಿ, ದೂರವಾಣಿ ಸಂಖ್ಯೆ 08472-243219 2 ಹಾಗೂ ಕಲಬುರಗಿಪ್ರಗತಿ ಕಾಲೋನಿ ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರ ಮೊಬೈಲ್ ಸಂಖ್ಯೆ 9164474480, 9620023320 ಗಳಿಗೆ ಕರೆಮಾಡಿ ತಿಳಿಸಬೇಕೆಂದು ಅವರು ತಿಳಿಸಿದ್ದಾರೆ.

Share This Article

Facebook
X
WhatsApp
Telegram

Leave a Reply

Your email address will not be published. Required fields are marked *

Cricket Live

Stock Market

Astrology

Gold & Silver Price