March 13, 2025 5:48 pm

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

Home » ಕಲಬುರಗಿ » ಬಹುದಿನದ ಬೇಡಿಕೆಗೆ ರಾಜ್ಯ ಸರ್ಕಾರದ ಅಸ್ತು : ಕಲಬುರಗಿ ನಗರದಲ್ಲಿ ಕಟ್ಟಡದ ಎತ್ತರ ಮಿತಿ 15 ಮೀಟರ್‌ಗೆ ಹೆಚ್ಚಳ

ಬಹುದಿನದ ಬೇಡಿಕೆಗೆ ರಾಜ್ಯ ಸರ್ಕಾರದ ಅಸ್ತು : ಕಲಬುರಗಿ ನಗರದಲ್ಲಿ ಕಟ್ಟಡದ ಎತ್ತರ ಮಿತಿ 15 ಮೀಟರ್‌ಗೆ ಹೆಚ್ಚಳ

ಕಲಬುರಗಿ,ಫೆ.22 ಕಲಬುರಗಿ ನಗರದಲ್ಲಿ ಜನವಸತಿ ಕಟ್ಟಡದ ಎತ್ತರ ಮಿತಿ 11.5 ಮೀಟರ್‌ದಿಂದ 15.0 ಮೀಟರ್ ವರೆಗೆ ಹೆಚ್ಚಿಸಲು ಪ್ರಾಧಿಕಾರದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅಸ್ತು ಎಂದು ಸರ್ಕಾರಿ ಆದೇಶ ಹೊರಡಿಸಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್ ಮತ್ತು ಆಯುಕ್ತ ಗಂಗಾಧರ ಮಾಳಗಿ ಅವರು ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲಬುರಗಿ ನಗರವು ದಿನದಿಂದ ದಿನಕ್ಕೆ ವ್ಯಾಪಕವಾಗಿ ಅಭಿವೃದ್ಧಿ ಹೊಂದುತ್ತಿರುವುದರಿಂದ ಆರ್ಥಿಕ ಬೆಳವಣಿಗೆಗಳ ಹಿತದೃಷ್ಟಿಯಿಂದ ಮತ್ತು ಕ್ರೆಡೈ ಸಂಸ್ಥೆಯಕೋರಿಕೆಯಂತೆ- ಇಲ್ಲಿ ಬಹುಮಹಡಿಗಳ ಕಟ್ಟಡ ಅವಶ್ಯಕತೆ ಮನಗಂಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್ ಅವರು ತೀವ್ರ ಆಸಕ್ತಿ ವಹಿಸಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 13-ಇ ರಡಿಯಲ್ಲಿ ವಲಯ ನಿಯಮಾವಳಿಗಳಿಗೆ ತಿದ್ದುಪಡಿ ತರಲು ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆ ಪಡೆದು ನಗರದಲ್ಲಿ ಕಟ್ಟಡ ನಿರ್ಮಾಣದ ಎತ್ತರ 11.5 ರಿಂದ 15.0 ಮೀಟರ್ ಹೆಚ್ಚಳಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಪ್ರಾಧಿಕಾರದ ಪ್ರಸ್ತಾವನೆ ಪುರಸ್ಕರಿಸಿದ ಸರ್ಕಾರ ಕಳೆದ ಫೆಬ್ರವರಿ 18 ರಂದು ಕಟ್ಟಡದ ಎತ್ತರ ಮಿತಿ11.5 ಮೀಟರ್ ದಿಂದ 15.0 ಮೀಟರ್ ಹೆಚ್ಚಳಕ್ಕೆ ಅನುಮೋದನೆ ನೀಡಿದ್ದು, ಇದರಿಂದ ನಗರ ನಿವಾಸಿಗಳ ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದಂತಾಗಿದೆ.

ಕಟ್ಟಡ ಎತ್ತರ ಹೆಚ್ಚಳದಿಂದ ಆರ್ಥಿಕಾಭಿವೃದ್ಧಿ: ಕಲಬುರಗಿ ನಗರದ ಜನಸಂಖ್ಯೆ ಸಾಂದ್ರ ತೆಯು ಹೆಚ್ಚಾಗುತ್ತಿರುವುದರಿಂದ ಭೂಮಿ ಕೊರತೆಯನ್ನು ಬಹುಮ ಹಡಿಗಳ ಕಟ್ಟಡಗಳು ತಕ್ಕಮಟ್ಟಿಗೆ ಸಮಸ್ಯೆ ನೀಗಿಸಲಿವೆ. ಜನವಸತಿ ಪ್ರದೇಶದ ಕಟ್ಟಡ ಎತ್ತರ ಮಿತಿ ಹೆಚ್ಚಳವು ನಗರದ ಆರ್ಥಿಕ ಅಭಿವೃದ್ಧಿ ಚೇತರಿಕೆಗೂ ಕಾರಣ ವಾಗಲಿದೆ. ಬಹುಮಹಡಿಗಳ ಕಟ್ಟಡವು ಸೀಮಿತ ಸ್ಥಳದ ಬಳಕೆಯನ್ನು ಹೆಚ್ಚಿಸುವುದಲ್ಲದೆ ಒಂದೇ ಕಟ್ಟಡದಲ್ಲಿ ಹೆಚ್ಚಿನ ಜನರ ವಾಸ ಮತ್ತು ವ್ಯವಹಾರಗಳಿಗೆ ಅವಕಾಶ ಕಲ್ಪಿಸುತ್ತದೆ ಎಂದಿರುವ ಮಜರ್ ಆಲಂ ಖಾನ್ ಅವರು, ಬಹುದಿನದ ಬೇಡಿಕೆ ಸರ್ಕಾರ ಸ್ಪಂದಿಸಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

Share This Article

Facebook
X
WhatsApp
Telegram

Leave a Reply

Your email address will not be published. Required fields are marked *

Cricket Live

Stock Market

Astrology

Gold & Silver Price